ಈ ಸೋಲು 'ಸ್ಪಿರಿಟ್ ಆಫ್ ಗೇಮ್' ಅನಿಸುತ್ತಾ? ಇಂಗ್ಲೆಂಡ್ ತಂಡದ ಕಾಲೆಳೆದ ಅಮಿತ್ ಮಿಶ್ರಾ

2022 ರ ಟಿ 20 ವಿಶ್ವಕಪ್‌ನಲ್ಲಿ ಬುಧವಾರ ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ ಐದು ರನ್‌ಗಳ ಸೋಲಿಗೆ ಶರಣಾಯಿತು. ಇಂಗ್ಲೆಂಡ್ ಸೋಲಿನೊಂದಿಗೆ ಗ್ರೂಪ್ 1ರಲ್ಲಿ ಸೆಮಿಫೈನಲ್ ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿ ಆರಂಭವಾಗಿದೆ. 158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 14.3 ಓವರ್‌ಗಳಲ್ಲಿ 105/5 ರನ್ ಗಳಿಸಿತ್ತು. ಆದರೆ, ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಡಿಎಲ್‌ಎಸ್ ವಿಧಾನದ ಪ್ರಕಾರ ಅವರಿಗೆ ಸಮಾನ ಸ್ಕೋರ್ 110 ಆಗಿತ್ತು, ಐರ್ಲೆಂಡ್ ಇಂಗ್ಲೆಂಡ್ ವಿರುದ್ಧ 5 ರನ್‌ಗಳ ಜಯವನ್ನು ದಾಖಲಿಸುವಲ್ಲಿ ಯಶಸ್ವಿಯಾಯಿತು.
ಐರ್ಲೆಂಡ್ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಸೂಪರ್ 12 ನಲ್ಲಿ ಆಡುತ್ತಿದೆ. ಅದು ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಕ್ಕೆ ಆಘಾತ ನೀಡಿದೆ. ಪಂದ್ಯ ಮುಗಿದ ನಂತರ ಹಲವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ, ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ, ಸ್ಪಿರಿಟ್ ಆಫ್ ಗೇಮ್ ಬಗ್ಗೆ ಇತ್ತೀಚೆಗೆ ನಡೆದ ಚರ್ಚೆಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
"ಪ್ರಚಂಡ ವಿಜಯಕ್ಕಾಗಿ ಐರ್ಲೆಂಡ್ ತಂಡಕ್ಕೆ ಅಭಿನಂದನೆಗಳು. ಡಿಎಲ್‌ಎಸ್ ಮೂಲಕ ಗೆಲ್ಲುವುದು ಸ್ಪಿರಿಟ್ ಆಫ್ ಗೇಮ್ ಅಲ್ಲ ಎಂದು ಇಂಗ್ಲೆಂಡ್ ವಾದಿಸುವುದಿಲ್ಲ ಎಂದು ಭಾವಿಸುತ್ತೇವೆ," ಎಂದು ಮಿಶ್ರಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ದೀಪ್ತಿ ಶರ್ಮಾ ಚಾರ್ಲಿ ಡೀನ್‌ರನ್ನು ನಾನ್‌ಸ್ಟ್ರೈಕರ್ ಎಂಡ್‌ನಲ್ಲಿ ಔಟ್ ಮಾಡಿದ ನಂತರ, ಇದು ಸ್ಪಿರಿಟ್ ಆಫ್ ಗೇಮ್ ಅಲ್ಲ ಎಂದು ಇಂಗ್ಲೆಂಡ್‌ನ ಮಾಜಿ, ಹಾಲಿ ಆಟಗಾರರು ಹೇಳಿದ್ದರು. ಅದನ್ನು ಉಲ್ಲೇಖಿಸಿ ಅಮಿತ್ ಮಿಶ್ರಾ ಇಂಗ್ಲೆಂಡ್ ತಂಡದ ಕಾಲೆಳೆದಿದ್ದಾರೆ.

ಸೆಮಿಫೈನಲ್ ಹಾದಿ ಕಠಿಣ
ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲಿನೊಂದಿಗೆ ಇಂಗ್ಲೆಂಡ್ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶ ಕಡಿಮೆಯಾಗಿದೆ. ಶುಕ್ರವಾರ ಎಂಸಿಜಿಯಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದರೆ ಮಾತ್ರ ಸೆಮಿಫೈನಲ್ ಆಸೆ ಜೀವಂತವಾಗಿರಲಿದೆ.
ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ನ ಚೇಸಿಂಗ್ ದುರಂತವಾಗಿ ಪ್ರಾರಂಭವಾಯಿತು. ನಾಯಕ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್ ಬೇಗನೇ ಔಟಾದರು. ಐರ್ಲೆಂಡ್ ರನ್ ಗಳಿಸಲು ಪರದಾಡಿತು. ಆದರೂ, ಮೊಯಿನ್ ಅಲಿ ಮತ್ತು ಡೇವಿಡ್ ಮಲನ್ ಇಂಗ್ಲೆಂಡ್ ತಂಡಕ್ಕಾಗಿ ಉತ್ತಮ ರನ್ ಗಳಿಸಲು ಆರಂಭಿಸಿದರು.
ಇವರಿಬ್ಬರೂ ಇಂಗ್ಲೆಂಡ್ ಗೆಲುವಿಗಾಗಿ ಬೌಂಡರಿ ಗಳಿಸಲು ಆರಂಭಿಸಿದರು. ಆದರೆ ಇಂಗ್ಲೆಂಡ್ ದುರದೃಷ್ಟದಿಂದಾಗಿ ಮಳೆ ಆರಂಭವಾಯಿತು. ಮಳೆ ಹೆಚ್ಚಾಗಿ ಸುರಿಯಲು ಆರಂಭಿಸಿದ್ದರಿಂದ, ಅಂಪೈರ್ ಗಳು ಪಂದ್ಯವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದರು.
ಡಿಎಲ್‌ಎಸ್ ನಿಯಮದ ಪ್ರಕಾರ ಇಂಗ್ಲೆಂಡ್ ಜಯಕ್ಕಾಗಿ 5 ರನ್ ಹಿಂದೆ ಇತ್ತು. ನಿಯಮದಂತೆ ಐರ್ಲೆಂಡ್ 5 ರನ್‌ಗಳ ಜಯ ಸಾಧಿಸಿತು. ಇಂಗ್ಲೆಂಡ್ ಸೋತು ಆಘಾತ ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications