ಟಿ20 ವಿಶ್ವಕಪ್: ಆಸ್ಟ್ರೇಲಿಯಾ ಸ್ಟೇಡಿಯಂಗಳನಲ್ಲಿ ಸೀಮಿತ ಜನಸಂದಣಿಗೆ ಅವಕಾಶ?!

ಸಿಡ್ನಿ, ಜೂನ್ 13: ಕೊರೊನಾವೈರಸ್‌ನಿಂದಾಗಿ ಈ ವರ್ಷದ ಕ್ರೀಡಾಸ್ಪರ್ಧೆಗಳು ಅಸ್ತವ್ಯಸ್ತವಾಯಿತು ಅಂತ ಕ್ರೀಡಾಪ್ರೇಮಿಗಳು ಗೊಣಗಿಕೊಳ್ಳುತ್ತಿರುವಾಗಲೇ ವಿಶ್ವದಲ್ಲಿ ಲಾಕ್‌ಡೌನ್ ಸಡಲಿಕೆಗೊಳ್ಳುತ್ತಿರುವುದರಿಂದ ಕ್ರೀಡಾಚಟುವಟಿಕೆಗಳೂ ಮೆಲ್ಲಗೆ ಪುನರಾರಂಭದತ್ತ ಮುಖಮಾಡುತ್ತಿವೆ. ಇದು ಕ್ರೀಡಾ ಪ್ರೇಮಿಗಳಿಗೆ ಕೊಂಚ ಸಮಾಧಾನ ತರುತ್ತಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಡ ಆತಂಕದಲ್ಲಿತ್ತು. ವಿದೇಶಿ ಪ್ರಯಾಣಗಳಿಗೆ ನಿರ್ಬಂಧವಿರುವುದರಿಂದ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ಕ್ರಿಕೆಟ್ ಸ್ಪರ್ಧೆಗಳ ಮರು ಆಯೋಜನೆಯತ್ತ ಕಾರ್ಯ ನಿರ್ವಹಿಸುತ್ತಿದೆ. ಟಿ20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರ ಮುಂದಿನ ತಿಂಗಳಿಗೆ ಮುಂದೂಡಲ್ಪಟ್ಟಿದ್ದರೂ ವಿಶ್ವಕಪ್ ಬಗೆಗಿನ ಆಶಾಭಾವನೆಯ ಮಿಣುಕು ಹುಳ ಮಿನುಗತೊಡಗಿದೆ.
ಜುಲೈ ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ನಡೆಯುವ ಕ್ರೀಡಾಸ್ಪರ್ಧೆಗಳಿಗೆ 10,000ದ ವರೆಗೆ ವೀಕ್ಷಕರಿಗೆ ಅನುಮತಿ ನೀಡುವತ್ತ ಯೋಚಿಸಿರುವುದಾಗಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಸುಳಿವು ನೀಡಿದ್ದಾರೆ. ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಕ್ರೀಡಾಸ್ಪರ್ಧೆಗಳು ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯುತ್ತಿವೆ.
ಐಸಿಸಿ ಮುಂದಿನ ತಿಂಗಳು ಟಿ20 ವಿಶ್ವಕಪ್ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಈಗಿನ ವೇಳಾಪಟ್ಟಿಯ ಪ್ರಕಾರ ಬಹು ನಿರೀಕ್ಷಿತ ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಕೊರೊನಾವೈರಸ್ ಕಾರಣ 16 ತಂಡಗಳು ಪಾಲಗೊಳ್ಳುವ ಈ ವಿಶ್ವಕಪ್ ಟೂರ್ನಿ ನಡೆಯೋದೆ ಅನುಮಾನವೆಂಬಂತಿದೆ. ಈ ಮಧ್ಯೆ ಮಾರಿಸನ್ ಆಶಾಭಾವನೆಯ ಹೇಳಿಕೆ ನೀಡಿದ್ದಾರೆ.
'ಜುಲೈ ವೇಳೆಗೆ 40,000 ಸಾಮರ್ಥ್ಯದ ಸ್ಟೇಡಿಯಂಗಳಲ್ಲಿ 10,000 ವೀಕ್ಷಕರಿಗೆ ಅನುಮತಿ ನೀಡಲು ನಿಯಮದಲ್ಲಿ ಬದಲಾವಣೆ ತರಲು ಅವಕಾಶವಿದೆ. ಇವು ಪ್ರಾಯೋಗಿಕ, ಕಾಮನ್‌ಸೆನ್ಸ್ ವಿಚಾರಗಳು, ಮುಂದಿನ ಕೆಲವು ವಾರಗಳಲ್ಲಿ ವೈದ್ಯಕೀಯ ತಜ್ಞರ ಸಮಿತಿ ಈ ಬಗ್ಗೆ ಕಾರ್ಯ ನಿರ್ವಹಿಸಲಿದೆ ಮತ್ತು ಉತ್ತಮ ಸೂಚನೆಯನ್ನು ನೀಡುತ್ತವೆ ಎಂದು ನಾನು ಭಾವಿಸುತ್ತೇನೆ,' ಎಂದು ಮಾರಿಸನ್ ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications