Australia vs Ireland: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್, ಪ್ಲೇಯಿಂಗ್ XI

ಟಿ20 ವಿಶ್ವಕಪ್ 2022 1ನೇ ಗುಂಪಿನ ಪಂದ್ಯದಲ್ಲಿ, ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದಿರುವ ಐರ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ಈ ಪಂದ್ಯ ನಡೆಯುತ್ತಿದೆ. ಸೆಮಿಫೈನಲ್ ತಲುಪಬೇಕಾದರೆ ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಗೆಲುವಿನ ಜೊತೆ ರನ್ ರೇಟ್ ಕೂಡ ಮುಖ್ಯವಾಗಲಿದೆ.
ಈ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಇದುವರೆಗೂ 3 ಪಂದ್ಯಗಳನ್ನಾಡಿದ್ದು, ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಮತ್ತೊಂದರಲ್ಲಿ ಸೋಲನುಭವಿಸಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು. 3 ಅಂಕಗಳೊಂದಿಗೆ ಮೊದಲನೇ ಗುಂಪಿನಲ್ಲಿ ಆಸ್ಟ್ರೇಲಿಯಾ 4ನೇ ಸ್ಥಾನದಲ್ಲಿದೆ. ರನ್ ರೇಟ್ ಕೂಡ -1.555 ಇರುವುದು ತಂಡಕ್ಕೆ ತಲೆನೋವಾಗಿದೆ.
ಐರ್ಲೆಂಡ್ ಕೂಡ 3 ಪಂದ್ಯಗಳಲ್ಲಿ ಒಂದು ಜಯ, ಒಂದು ಸೋಲು ಕಂಡಿದ್ದು, ಮತ್ತೊಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು, ಮೂರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ್ದ ಐರ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ.
ಉಭಯ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದವು. 2012ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಐರ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು.

ಐರ್ಲೆಂಡ್ ವಿರುದ್ಧ ಆಡಮ್ ಜಂಪಾ ಕಣಕ್ಕೆ
ಆಸ್ಟ್ರೇಲಿಯಾ ಆಡುವ ಬಳಗದಲ್ಲಿ ಆಡಮ್ ಜಂಪಾ ಸ್ಥಾನ ಪಡೆದಿದ್ದು, ಆಸ್ಟಿನ್ ಅಗರ್ ಹೊರಗುಳಿದಿದ್ದಾರೆ. ಉಳಿದಂತೆ ಶ್ರೀಲಂಕಾ ವಿರುದ್ಧ ಆಡಿದ್ದ ತಂಡವೇ ಕಣಕ್ಕಿಳಿಯಲಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿದ ತಂಡದೊಂದಿಗೆ ಐರ್ಲೆಂಡ್ ಆಡಲಿದ್ದು, ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಉಭಯ ತಂಡಗಳ ಆಡುವ ಬಳಗ
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಫಿಯಾನ್ ಹ್ಯಾಂಡ್, ಜೋಶುವಾ ಲಿಟಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications