ಬಾಂಗ್ಲಾದೇಶಕ್ಕೆ ಜಿಂಬಾಬ್ವೆ ಸವಾಲು: ಸಂಭಾವ್ಯ ತಂಡ, ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್

ಭಾನುವಾರ ಟಿ20 ವಿಶ್ವಕಪ್‌ನಲ್ಲಿ ಮೂರು ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗುತ್ತಿದೆ. ಹೈವೋಲ್ಟೇಜ್ ಪಂದ್ಯವಲ್ಲದಿದ್ದರೂ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಅದಕ್ಕೆ ಕಾರಣ ಜಿಂಬಾಬ್ವೆ ತಂಡ ಪಾಕಿಸ್ತಾನದ ವಿರುದ್ಧ ಸಾಧಿಸಿದ ಗೆಲುವು. ಭಾನುವಾರ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಅಂಥಾದ್ದೇ ಪ್ರದರ್ಶನದ ಜಿಂಬಾಬ್ವೆ ತಂಡದಿಂದ ಬರಬಹುದೇ ಎಂಬುದು ಕುತೂಹಲ ಮೂಡಿಸಿದೆ.
ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ ತಂಡಗಳು ಸೂಪರ್ 12 ಹಂತದಲ್ಲಿ ಎರಡು ಪಂದ್ಯಗಳನ್ನು ಮುಗಿಸಿದೆ. ಜಿಂಬಾಬ್ವೆ ಬಲಿಷ್ಟ ಪಾಕಿಸ್ಥಾನದ ವಿರುದ್ಧ ಗೆಲುವು ಸಾಧಿಸಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾಗಿತ್ತು. ಇತ್ತ ಬಾಂಗ್ಲಾದೇಶ ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ 104 ರನ್‌ಗಳ ಅಂತರದ ಬೃಹತ್ ಸೋಲು ಅನುಭವಿಸಿದೆ. ನೆಟ್‌ರನ್‌ರೇಟ್ ವಿಚಾರದಲ್ಲೂ ಜಿಂಬಾಬ್ವೆ ಮೇಲುಗೈ ಸಾಧಿಸಿದ್ದು ಭಾನುವಾರದ ಮುಖಾಮುಖಿ ಕುತೂಹಲ ಕೆರಳಿಸಿದೆ.

ಪಂದ್ಯದ ಸಮಯ ನೇರಪ್ರಸಾರ ಮಾಹಿತಿ
ಜಿಂಬಾಬ್ವೆ ಹಾಗೂ ಬಾಂಗ್ಲಾದೇ ತಂಡಗಳು ಭಾನುವಾರ ಬ್ರಿಸ್ಬೇನ್‌ನ ಗಾಬಾ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 8:30ಕ್ಕೆ ಆರಂಭವಾಗಲಿದ್ದು 8 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಹಾಟ್‌ಸ್ಟಾರ್ ಹಾಗೂ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್
ಹವಾಮಾನ ವರದಿ: ಪಂದ್ಯದ ದಿನ ಬ್ರಿಸ್ಬೇನ್‌ನಲ್ಲಿ ಪಂದ್ಯ ನಡೆಯಲು ಪೂರಕವಾದ ವಾತಾವರಣವಿರಲಿದೆ. 17-29 ಡಿಗ್ರಿ ಮಧ್ಯೆ ಉಷ್ಣಾಂಶವಿರಲಿದ್ದು ಮಳೆಯಾಗುವ ಸಾಧ್ಯತೆಯಿಲ್ಲ.
ಪಿಚ್ ರಿಪೋರ್ಟ್: ಗಾಬಾ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲವನ್ನು ನೀಡುವ ಪಿಚ್ ಆಗಿದೆ. ಚೆಂಡು ನೇರವಾಗಿ ಬ್ಯಾಟ್‌ಗೆ ಬರುವ ಕಾರಣ ಬ್ಯಾಟರ್‌ಗಳಿ ಈ ಪಿಚ್‌ನಲ್ಲಿ ಆನಂದಿಸುತ್ತಾರೆ. ಬೌಲರ್‌ಗಳು ಇಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕಾಗುತ್ತದೆ. ಇನ್ನು ಈ ಮೈದಾನದಲ್ಲಿ ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ.

ಸಂಭಾವ್ಯ ಆಡುವ ಬಳಗ
ಬಾಂಗ್ಲಾದೇಶ ಸಂಭಾವ್ಯ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂತೋ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್/ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್.
ಜಿಂಬಾಬ್ವೆ ಸಂಭಾವ್ಯ ಆಡುವ ಬಳಗ: ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ನಾಯಕ), ಮಿಲ್ಟನ್ ಶುಂಬಾ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ರಿಚರ್ಡ್ ನಾಗರವಾ, ಬ್ಲೆಸಿಂಗ್ ಮುಜರಬಾನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications