ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಈ ವರ್ಷದ ಜೂನ್‌ನಲ್ಲಿ ನಡೆಯಲಿರುವ ಐಪಿಎಲ್ 2024 ಮತ್ತು 2024 ರ ಟಿ20 ವಿಶ್ವಕಪ್‌ನಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ. ಪಾದದ ಗಾಯದಿಂದ ಶಮಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಶಮಿ ಅಲ್ಲದೆ, ರಿಷಬ್ ಪಂತ್ ಬಗ್ಗೆಯೂ ಒಂದು ಬಿಗ್ ಅಪ್‌ಡೇಟ್ ಬಂದಿದೆ. ಪಂತ್ 2024ರ ಟಿ20 ವರ್ಲ್ಡ್ ಆಡಬಹುದು. ಪಂತ್ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಮಾತನಾಡಿದ್ದಾರೆ. ಅವರ ಆರೋಗ್ಯ ಚೇತರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಫಿಟ್ ಎಂದು ಘೋಷಿಲಾಗುವುದು. ಅವರು ಟಿ 20 ವಿಶ್ವಕಪ್ ಆಡಿದರೆ, ನಮ್ಮ ತಂಡಕ್ಕೆ ದೊಡ್ಡ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

2023ರ ODI ವಿಶ್ವಕಪ್‌ನಿಂದ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಇತ್ತೀಚೆಗಷ್ಟೇ ಶಮಿ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬ್ರಿಟನ್‌ಗೆ ತೆರಳಿದ್ದರು. ಶಮಿ ಬಗ್ಗೆ ಮಾತನಾಡಿರುವ ಜಯ್ ಶಾ, "ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಭಾರತಕ್ಕೆ ಮರಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಗೆ ಶಮಿ ಮರಳುವ ಸಾಧ್ಯತೆಯಿದೆ. ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿಯ ಅಗತ್ಯವಿದೆ, ಅವರು ರಿಹ್ಯಾಬ್ ಪ್ರಾರಂಭಿಸಿದ್ದಾರೆ. ಮತ್ತು ಎನ್‌ಸಿಎಯಲ್ಲಿದ್ದಾರೆ" ಎಂದು ತಿಳಿಸಿದ್ದಾರೆ.

ರಿಷಬ್ ಪಂತ್‌ಗಾಗಿ ಟಿ20 ವಿಶ್ವಕಪ್ ತಂಡದ ಬಾಗಿಲು ತೆರೆದಿದೆ ಎಂದು ಜಯ್ ಶಾ ನಂಬಿದ್ದಾರೆ. ಅವರು ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾದರೆ, ಅವರು ವಿಶ್ವಕಪ್ ಆಡಬಹುದು. ಮೊದಲು ಅವರು ಐಪಿಎಲ್ 2024 ರಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ನೋಡಬೇಕಿದೆ ಎಂದಿದ್ದಾರೆ.
ಜಿತೇಶ್ ಶರ್ಮಾ ಭಾರತ ಪರ ಕೆಲ ಕಾಲ ನಿರಂತರವಾಗಿ ಟಿ20 ಕ್ರಿಕೆಟ್ ಆಡುತ್ತಿದ್ದಾರೆ. ಕೆಲ ಸಮಯದ ಹಿಂದೆ ಜಿತೇಶ್ ಟಿ20 ವಿಶ್ವಕಪ್ ಆಡುವುದು ಖಚಿತ ಎಂದು ಭಾವಿಸಲಾಗಿತ್ತು. ಜಿತೇಶ್ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಬಾರಿಸುವುದರಲ್ಲಿ ನಿಪುಣರು. ಅದಕ್ಕಾಗಿಯೇ ಅವರನ್ನು ಟಿ20 ತಂಡದಲ್ಲಿ ನಿರಂತರವಾಗಿ ಸೇರಿಸಿಕೊಳ್ಳಲಾಗುತ್ತಿದೆ. ಆದರೆ, ಪಂತ್ ಸಂಪೂರ್ಣ ಫಿಟ್ ಆಗಿದ್ದರೆ ಜಿತೇಶ್‌ಗೆ ದೊಡ್ಡ ಪೆಟ್ಟು ಬೀಳಲಿದೆ.