ಈ ಇಬ್ಬರು ದಕ್ಷಿಣ ಆಫ್ರಿಕಾಗೆ ವಿಶ್ವಕಪ್ ಗೆಲ್ಲಿಸಿಕೊಡಲಿದ್ದಾರೆ ಎಂದ ಡೇಲ್ ಸ್ಟೇಯ್ನ್

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೂಡ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠ ತಂಡವಾಗಿದ್ದು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್ ಈ ಮೂರು ವಿಭಾಗದಲ್ಲಿಯೂ ದಕ್ಷಿಣ ಆಫ್ರಿಕಾ ತಂಡ ಅತ್ಯಂತ ಬಲಿಷ್ಠವಾಗಿ ಕಾಣಿಸುತ್ತಿದೆ. ಹೀಗಾಗಿ ಎಲ್ಲಾ ಎದುರಾಳಿಗಳು ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ವಿಶೇಷ ಯೋಜನೆಗಳನ್ನು ರೂಪಿಸಿಕೊಂಡೇ ಕಣಕ್ಕಿಳಿಯುತ್ತವೆ.
ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ದಿಗ್ಗಜ ಬೌಲರ್ ಡೇಲ್ ಸ್ಟೇಯ್ನ್ ತಂಡದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸ್ಟೇಯ್ನ್ ದಕ್ಷಿಣ ಫ್ರಿಕಾ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಲು ಇಬ್ಬರ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು ಆ ಇಬ್ಬರು ಆಟಗಾರರು ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡಲಿದ್ದಾರೆ ಎಂದಿದ್ದಾರೆ.

ವೇಗಿಗಳ ಬಗ್ಗೆ ಸ್ಟೇಯ್ನ್ ವಿಶ್ವಾಸ
ದಕ್ಷಿಣ ಆಫ್ರಿಕಾದ ದಿಗ್ಗಜ ಬೌಲರ್ ಡೇಲ್ ಸ್ಟೇಯ್ನ್ ತಂಡದ ವೇಗದ ಬೌಲರ್‌ಗಳಾದ ಕಗಿಸೋ ರಬಾಡ ಹಾಗೂ ಅನ್ರಿಕ್ ನೋರ್ಕಿಯಾ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ಈ ಇಬ್ಬರು ಆಟಗಾರರು ದಕ್ಷಿಣ ಆಫ್ರಿಕಾ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ವಿಶ್ವಾಸವಿದೆ ಎಂದಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಈ ಆಟಗಾರರು ತಂಡದ ಬೃಹತ್ ಗೆಲುವಿಗೆ ಕಾರಣವಾಗಿದ್ದರು.

ಆ ಜೋಡಿಯ ಆಟ ಅದ್ಭುತ ಎಂದ ಸ್ಟೇಯ್ನ್
ಕಗಿಸೋ ರಬಾಡ ಹಾಗೂ ಅನ್ರಿಕ್ ನಾರ್ಕಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು ಈ ವಿಶ್ವಕಪ್‌ನಲ್ಲಿ ವಿಶೇಷ ಪ್ರದರ್ಶನ ನಿಡಲಿದ್ದಾರೆ ಎಂದಿದ್ದಾರೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ. "ರಬಾಡ ದಕ್ಷಿಣ ಆಫ್ರಿಕಾ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಆಟಗಾರ. ಅನ್ರಿಕ್ ನಾರ್ಕಿಯಾ ಅವರೊಂದಿಗೆ ರಬಾಡಾ ಬಲ ದ್ವಿಗುಣಗೊಳ್ಳಲಿದೆ. ಅವರಿಗೆ ಉಳಿದ ಬೌಲರ್‌ಗಳು ಕೂಡ ಉತ್ತಮವಾಗಿ ಸಾಥ್ ನೀಡುವ ವಿಶ್ವಾಸವಿದೆ. ನನ್ನ ಪ್ರಕಾರ ಈ ಇಬ್ಬರು ಬೌಲರ್‌ಗಳ ಜೋಡಿ ಅತ್ಯದ್ಬುತ ಎಂದಿದ್ದಾರೆ ಸ್ಟೇಯ್ನ್.

ರಡಾಬಾ ನೋರ್ಕಿಯಾ ಸಾಮರ್ಥ್ಯ ಹೇಳಿದ ಸ್ಟೇಯ್ನ್
ಇನ್ನು ಆಸ್ಟ್ರೇಲಿಯಾ ನೆಲದಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು ವೇಗಿಗಳು ಯಶಸ್ಸು ಸಾಧಿಸಬೇಕಾದರೆ ಇರುವ ಪ್ರಮುಖ ಅಂಶ ಯಾವುದು ಎಂಬುದನ್ನು ಸ್ಟೇಯ್ನ್ ವಿವರಿಸಿದ್ದಾರೆ. "ಅವರಿಬ್ಬರಲ್ಲಿ ಕೂಡ ಅದ್ಭುತವಾದ ವೇಗವಿದೆ, ಉತ್ತಮವಾದ ಕೌಶಲ್ಯವಿದೆ. ಅದರಲ್ಲೂ ಆಸ್ಟ್ರೇಲಿಯಾದ ಪಿಚ್‌ನಲ್ಲಿ ಅವರು ಅತ್ಯಂತ ಪರಿಣಾಮಕಾರಿಯಾಗಿ ದಾಳಿ ಮಾಡಬಲ್ಲವರಾಗಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾಗೆ ಯಾವಾಗ ಪ್ರವಾಸ ಮಾಡಿದಾಗಲೂ ರಬಡಾ ಪ್ರದರ್ಶನ ಒಂದು ಹಂತ ಮೇಲಿರುತ್ತದೆ. ಆದ್ದರಿಂದ ಅವರಿಂದ ನಾನು ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದ್ದೇನೆ. ಈ ಇಬ್ಬರು ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲು ಸಹಾಯ ಮಾಡಲಿದ್ದಾರೆ" ಎಂದಿದ್ದಾರೆ ಡೇಲ್ ಸ್ಟೇಯ್ನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications