ಟಿ20 ವಿಶ್ವಕಪ್: ಗಾಯಗೊಂಡ ಜಾನಿ ಬೈರ್‌ಸ್ಟೋವ್ ಬದಲಿಗೆ ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆ

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು ಕೆಲ ತಂಡಗಳ ಆಟಗಾರರ ಪಟ್ಟಿಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಅದರಲ್ಲಿ ಇಂಗ್ಲೆಂಡ್ ಕೂಡ ಒಂದು. ಆದರೆ ತಂಡ ಪ್ರಕಟಗೊಳಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಪ್ರಮುಖ ಆಟಗಾರ ಜಾನಿಬೈರ್‌ಸ್ಟೋವ್ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಇಂಗ್ಲೆಂಡ್ ಈಗ ಘೋಷಣೆ ಮಾಡಿದೆ. ಮೂರು ವರ್ಷಗಳ ಬಳಿಕ ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ಟಿ20 ತಂಡಕ್ಕೆ ಮರಳಿದ್ದಾರೆ.
ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ಪರವಾಗಿ ಕೊನೆಯ ಬಾರಿಗೆ ಟಿ20 ಮಾದರಿಯಲ್ಲಿ ಕಣಕ್ಕಿಳಿದಿದ್ದು 2019ರಲ್ಲಿ. ಇದೀಗ ಜಾನಿ ಬೈರ್‌ಸ್ಟೋವ್ ಗಾಯಗೊಂಡಿರುವ ಕಾರಣ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಹೇಲ್ಸ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗಾಲ್ಫ್ ಆಡುತ್ತಿದ್ದ ವೇಳೆ ಜಾನಿ ಬೈರ್‌ಸ್ಟೋವ್ ಗಾಯಗೊಂಡಿದ್ದು ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.
ಇಸಿಬಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು ಅಲೆಕ್ಸ್ ಹೇಲ್ಸ್ ಸೇರ್ಪಡೆ ಬಗ್ಗೆ ಮಾಹಿತಿ ನೀಡಿದೆ. "ನಾಟಿಂಗ್‌ಹ್ಯಾಮ್‌ಶೈರ್ ಬ್ಯಾಟರ್ ಅಲೆಕ್ಸ್ ಹೇಲ್ಸ್ ಅವರನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್ ತಂಡಕ್ಕೆ ಯಾರ್ಕ್‌ಷೈರ್‌ನ ಜಾನಿ ಬೈರ್‌ಸ್ಟೋವ್ ಅವರಿಗೆ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಕಳೆದ ವಾರ ಎಡ ಪಾದದ ಗಾಯಕ್ಕೆ ತುತ್ತಾಗಿರುವ ಕಾರಣ ವಿಶ್ವಕಪ್‌ನಲ್ಲಿ ಆಡಲು ಅಸಮರ್ಥವಾಗಿದ್ದಾರೆ" ಎಂದು ಇಸಿಬಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
2019 ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದ್ದ 33 ವರ್ಷದ ಹೇಲ್ಸ್ ಅವರನ್ನು ಪಾಕಿಸ್ತಾನ ಪ್ರವಾಸಕ್ಕೂ T20 ತಂಡಕ್ಕೆ ಸೇರಿಸಲಾಗಿದೆ ಎಂದು ಇಸಿಬಿ ಸ್ಪಷ್ಟಪಡಿಸಿದೆ. ಹೇಲ್ಸ್ ಇದುವರೆಗೆ 60 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು ಎಂಟು ಅರ್ಧಶತಕ ಮತ್ತು ಒಂದು ಶತಕ ಗಳಿಸಿದ್ದಾರೆ.
ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ, ವಿಕೆಟ್ ಕೀಪರ್), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್‌ಟನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್
ಮೀಸಲು ಆಟಗಾರರು: ಲಿಯಾಮ್ ಡಾಸನ್, ರಿಚರ್ಡ್ ಗ್ಲೀಸನ್, ಟೈಮಲ್ ಮಿಲ್ಸ್
ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆಯಾಗಿರುವ ಇಂಗ್ಲೆಂಡ್ T20 ತಂಡ: ಜೋಸ್ ಬಟ್ಲರ್ (ನಾಯಕ, ವಿಕೆಟ್ ಕೀಪರ್), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಜೋರ್ಡಾನ್ ಕಾಕ್ಸ್, ಸ್ಯಾಮ್ ಕರನ್, ಬೆನ್ ಡಕೆಟ್, ಲಿಯಾಮ್ ಡಾಸನ್, ರಿಚರ್ಡ್ ಗ್ಲೀಸನ್, ಅಲೆಕ್ಸ್ ಹೇಲ್ಸ್, ಟಾಮ್ ಹೆಲ್ಮ್, ವಿಲ್ ಜಾಕ್ಸ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಓಲಿ ಸ್ಟೋನ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಲ್ಯೂಕ್ ವುಡ್, ಮಾರ್ಕ್ ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications