For Quick Alerts
ALLOW NOTIFICATIONS  
For Daily Alerts
 

Eng Vs Ire: ಐರ್ಲೆಂಡ್ ವಿರುದ್ಧ ಸೋಲಿಗೆ ಕಾರಣ ತಿಳಿಸಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್

T20 World Cup: England Skipper Jos Buttler Reaction After Defeat Against Ireland

ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ತಂಡವು ಐದು ರನ್‌ಗಳ ಅಂತದಲ್ಲಿ ಸೋಲು ಮೂಲಕ ಇಂಗ್ಲೆಂಡ್ ಆಘಾತ ಅನುಭವಿಸಿದೆ. ಸೋಲಿನ ನಂತರ, ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮಾತನಾಡಿ, ಮೊದಲ 10 ಓವರ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. ಇದರಿಂದಾಗಿಯೇ ನಾವು ಡಿಎಲ್‌ಎಸ್ ನಿಯಮದ ಪ್ರಕಾರ ಸೋತೆವು ಎಂದಿದ್ದಾರೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ನಡೆದ ICC T20 ವಿಶ್ವಕಪ್‌ನ ಗ್ರೂಪ್ 1, ಸೂಪರ್ 12 ಪಂದ್ಯದಲ್ಲಿ ಡಕ್‌ವರ್ತ್-ಲೂಯಿಸ್-ಸ್ಟರ್ನ್ (DLS) ವಿಧಾನದ ಪ್ರಕಾರ ಐರ್ಲೆಂಡ್‌ನ ಇಂಗ್ಲೆಂಡ್ ವಿರುದ್ಧ ಐದು ರನ್‌ಗಳಿಂದ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಐರ್ಲೆಂಡ್ ಎರಡು ಅಂಕಗಳನ್ನು ಪಡೆದುಕೊಂಡಿದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಐರ್ಲೆಂಡ್ ಮೊದಲನೇ ಪಂದ್ಯದಲ್ಲಿ ಸೋಲನುಭವಿಸಿತ್ತು. ಇಂಗ್ಲೆಂಡ್ ಎರಡು ಪಂದ್ಯಗಳಲ್ಲಿ ಒಂದು ಗೆಲುವಿನಿ ಮೂಲಕ ಎರಡಿ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ನಾವು ಬೌಲಿಂಗ್ ಮಾಡುವಾಗ ಮೊದಲ 10 ಓವರ್ ಕಳಪೆ ಪ್ರದರ್ಶನ ನೀಡಿದೆವು. ಐರ್ಲೆಂಡ್ ಉತ್ತಮವಾಗಿ ರನ್ ಗಳಿಸಿತು. ಅವರು ಮೊದಲ 10 ಓವರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದಿರು. ನಾವು ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿದ್ದರು, ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ ಎಂದು ಹೇಳಿದರು.

T20 World Cup: England Skipper Jos Buttler Reaction After Defeat Against Ireland

ನಮ್ಮ ಮೇಲೆ ಹೆಚ್ಚಿನ ಒತ್ತಡ ಹೇರಿದರು

ಟಾಸ್ ಗೆದ್ದು ಹವಾಮಾನವನ್ನು ಅರಿತು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡೆವು, ಆದರೆ ನಾವು ಅದರ ಲಾಭವನ್ನು ಪಡೆಯಲಿಲ್ಲ. ಎರಡನೇ 10 ಓವರ್‌ಗಳು ಉತ್ತಮವಾಗಿ ಮಾಡಿದೆವು, ನಾವು ಐರ್ಲೆಂಡ್‌ಗೆ ಮೊದಲ 10 ಓವರ್ ಗಳಲ್ಲಿ 20-30 ರನ್ ಹೆಚ್ಚಿಗೆ ಗಳಿಸಲು ಅವಕಾಶ ಮಾಡಿಕೊಟ್ಟಿದ್ದೇವೆ ಮತ್ತು ಅವರನ್ನು ನಿರ್ಬಂಧಿಸಲು ನಾವು ಒತ್ತಡದಲ್ಲಿದ್ದೆವು ಎಂದು ಹೇಳಿದರು.

ಜೋಶ್ ಲಿಟಲ್ ಎಸೆತದಲ್ಲಿ ಲೊರ್ಕನ್ ಟಕರ್ ಗೆ ಸುಲಭ ಕ್ಯಾಚ್ ನೀಡಿದ ಇಂಗ್ಲೆಂಡ್ ನಾಯಕ ಬಟ್ಲರ್ ಖಾತೆ ತೆರೆಯದೆ ನಿರ್ಗಮಿಸಿದರು. ಬಟ್ಲರ್ ಮೊದಲ ಓವರ್‌ನಲ್ಲಿಯೇ ಔಟಾದ ಬಗ್ಗೆ ಬೇಸರಪಟ್ಟುಕೊಂಡಿದ್ದಾರೆ.

"ನಾನೇ ಮೊದಲ ಓವರ್‌ನಲ್ಲಿ ಔಟಾಗುವುದು ಎಂದಿಗೂ ಸೂಕ್ತವಲ್ಲ. ಅವರು ಚೆನ್ನಾಗಿ ಬೌಲ್ ಮಾಡಿದರು ಮತ್ತು ವಿಕೆಟ್ ಅನ್ನು ಚೆನ್ನಾಗಿ ಬಳಸಿದರು. ಮಳೆ ನಮಗೆ ಮುಳುವಾಯಿತು, ನಾವು ಟಾಸ್ ಗೆದ್ದಿದ್ದೇವೆ ಮತ್ತು ಬ್ಯಾಟ್‌ನೊಂದಿಗೆ ಏನು ಮಾಡಬೇಕೆಂದು ತಿಳಿಯುವ ಅನುಕೂಲದಿಂದ ಬೌಲಿಂಗ್ ಆಯ್ಕೆ ಮಾಡಿದೆವು ಎಂದು ಇಂಗ್ಲೆಂಡ್ ನಾಯಕ ಹೇಳಿದರು.

T20 World Cup: England Skipper Jos Buttler Reaction After Defeat Against Ireland

ಐರ್ಲೆಂಡ್ ಉತ್ತಮವಾಗಿ ಆಡಿತು

ಐರ್ಲೆಂಡ್ ತಂಡವನ್ನು ಹೊಗಳಿದ ಬಟ್ಲರ್, ಐರಿಶ್ ತಂಡವು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅವರನ್ನು ಮೀರಿಸಿದೆ ಎಂದು ಹೇಳಿದರು.

"ಆ ವಿಕೆಟ್‌ನಲ್ಲಿ ಹೇಗೆ ಬೌಲ್ ಮಾಡಬೇಕೆಂದು ಅವರು ನಮಗೆ ತೋರಿಸಿದರು. ಅವರು ಆಟದ ಎಲ್ಲಾ ಮೂರು ಅಂಶಗಳಲ್ಲಿ ನಮ್ಮನ್ನು ಮೀರಿಸಿದರು ಮತ್ತು ಉತ್ತಮ ತಂಡವು ಗೆದ್ದಿತು. ನಾವು ಇಲ್ಲಿ ತಪ್ಪು ಮಾಡಿದ್ದೇವೆ ಮತ್ತು ನಮ್ಮ ಮೇಲೆ ಹೆಚ್ಚು ಒತ್ತಡವನ್ನು ಹಾಕಿದರು" ಎಂದು ಹೇಳಿದ್ದಾರೆ.

ಸೋಲಿನ ಹೊರತಾಗಿಯೂ ಇಂಗ್ಲೆಂಡ್‌ಗೆ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲು ಇನ್ನೂ ಅವಕಾಶವಿದೆ, ಶುಕ್ರವಾರ ಎಂಸಿಜಿಯಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

Story first published: Wednesday, October 26, 2022, 16:58 [IST]
Other articles published on Oct 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+