ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ವಿಶ್ವಕಪ್ ಫೈನಲ್ ಪಂದ್ಯ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಪಡೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಪಂದ್ಯದಲ್ಲಿ ಮಾತಿನ ಚಕಮಕಿ ನಡೆಯಿತು. ಅಲ್ಲದೆ ಕೆಲವು ಉತ್ತಮ ಕ್ಯಾಚ್‌ಗಳನ್ನು ಸಹ ಪಡೆಯಲಾಯಿತು. ಈ ಬಗ್ಗೆ ವರದಿ ಇಲ್ಲಿದೆ.
ನ್ಯೂಜಿಲೆಂಡ್ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ, ಭಾರತದ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಮತ್ತು ಡ್ಯಾರಿಲ್ ಮಿಚೆಲ್ ನಡುವೆ ಮಾತಿನ ಚಕಮಕಿ ನಡೆಯಿತು. ಮಿಚೆಲ್ ಡಿಫೆಂಡ್ ಮಾಡಿದ ಚೆಂಡು ಅರ್ಶದೀಪ್ ಕಡೆಗೆ ಬಂದಾಗ ಅವರು, ಚೆಂಡನ್ನು ನೇರವಾಗಿ ಬ್ಯಾಟರ್ ಬಳಿ ಎಸೆದರು. ಆಗ ಮಿಚೆಲ್ ಕೊಂಚ ಸಿಟ್ಟಾಗಿ ಕ್ರೀಸ್ ಬಿಟ್ಟು ಮುಂದೆ ಬಂದರು. ನಂತರ ಅರ್ಶ್‌ದೀಪ್ ಸಿಂಗ್ ತಮ್ಮ ರನ್-ಅಪ್‌ಗೆ ಮರಳಿದರು. ಮಿಚೆಲ್ ಅವರ ಕೋಪವನ್ನು ನೋಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ನಂತರ ಆನ್-ಫೀಲ್ಡ್ ಅಂಪೈರ್ ಅರ್ಶ್‌ದೀಪ್ ಸಿಂಗ್ ಅವರೊಂದಿಗೆ ಕಿವಿ ಮಾತು ಹೇಳಿದರು.

ಈ ಓವರ್ ಮುಕ್ತಾಯವಾದ ಬಳಿಕ ಡ್ಯಾರಿಲ್ ಮಿಚೆಲ್ ಮತ್ತು ಅರ್ಶ್‌ದೀಪ್ ಸಿಂಗ್ ಇಬ್ಬರೂ ಕೈಕುಲುಕಿ ಮೈದಾನದಲ್ಲಿ ನಡೆದ ವಾಗ್ವಾದವನ್ನು ಕೊನೆಗೊಳಿಸಿದರು. ಈ ದೃಶ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದೇ ಪಂದ್ಯದಲ್ಲಿ ಇಶಾನ್ ಕಿಶನ್ ಸಹ ಈ ಪಂದ್ಯದಲ್ಲಿ ಮೂರು ಉತ್ತಮ ಕ್ಯಾಚ್‌ಗಳನ್ನು ಪಡೆದರು. ಅದರಲ್ಲೂ ಜಸ್ಪ್ರೀತ್ ಬುಮ್ರಾ ಪವರ್ ಪ್ಲೇನಲ್ಲಿ ನಾಲ್ಕನೇ ಓವರ್ ಮಾಡಲು ಮುಂದಾದರು. ಆಗ ರಚಿನ್ ರವೀಂದ್ರ ಬ್ಯಾಟ್ ಮಾಡುತ್ತಿದ್ದರು. ಬುಮ್ರಾ ಅವರಿಗೆ ಲೆಂಥ್ ಎಸೆತವನ್ನು ಎಸೆದರು. ಈ ಎಸೆತದಲ್ಲಿ ರಚಿನ್ ರವೀಂದ್ರ ಲೆಗ್ ಸೈಡ್‌ನಲ್ಲಿ ದೊಡ್ಡ ಸಿಕ್ಸರ್ ಬಾರಿಸಲು ಮುಂದಾದರು. ಆದರೆ ಚೆಂಡು ಬೌಂಡರಿ ಗೆರೆಯನ್ನು ದಾಟುವಷ್ಟು ಪವರ್ ಇರಲಿಲ್ಲ. ಡೀಪ್ ಸ್ಕ್ವೇರ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಇಶಾನ್ ಕಿಶನ್ ಮುಂಭಾಗದಲ್ಲಿ ಡೈವ್ ಮಾಡಿ ಅಮೋಘ ಕ್ಯಾಚ್ ಪಡೆದರು. ಈ ದೃಶ್ಯವೂ ಸಹ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
9ನೇ ಓವರ್ ಬೌಲ್ ಮಾಡಲು ವರುಣ್ ಚಕ್ರವರ್ತಿ ಮೈದಾನಕ್ಕೆ ಬಂದರು. ಆಗ ಮೊದಲ ಎಸೆತದಲ್ಲೇ ಟೀಮ್ ಸಿಫರ್ಟ್ ಡೀಪ್ ಮಿಡ್ ವಿಕೆಟ್ ಮೇಲಿನಿಂದ ದೊಡ್ಡ ಹೊಡೆತಕ್ಕೆ ಮುಂದಾದರು. ಆದರೆ ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಇಶಾನ್ ಸಮಯೋಚಿತ ಪ್ರದರ್ಶಿಸಿ ಅದ್ಭುತ ಕ್ಯಾಚ್ ಪಡೆದರು. ಈ ಕ್ಯಾಚ್ ಸಹ ವೈರಲ್ ಆಗಿದೆ.
ಇನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುವಾಗ ಕೊನೆಯ ಓವರ್‌ನಲ್ಲಿ ಶಿವಂ ದುಬೆ ಕೊನೆಯ ಓವರ್‌ನಲ್ಲಿ 24 ರನ್ ಸಿಡಿಸಿದರು. ಇದರ ವಿಡಿಯೋ ಸಹ ಸಾಮಾಜಿಕ ತಾಣದಲ್ಲಿ ಲಭ್ಯವಿದ್ದು, ಅಭಿಮಾನಿಗಳು ಇದನ್ನ ಹೆಚ್ಚಾಗಿ ನೋಡಿ ಆನಂದಿಸಿದ್ದಾರೆ.