ಭಾರತ, ನ್ಯೂಜಿಲೆಂಡ್ ನಡುವಣ ಟಿ20 ವಿಶ್ವಕಪ್ ಫೈನಲ್ ಟಿಕೆಟ್ ಪಡೆಯವುದು ಹೇಗೆ? ಬೆಲೆ ಎಷ್ಟು?
ಟಿ20 ವಿಶ್ವಕಪ್ ಫೈನಲ್ ಪಂದ್ಯ ಭಾನುವಾರ ಅಹಮದಾಬಾದ್ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿಲಿವೆ. ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ, ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಪಡೆಯುವುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಮುಂಬೈನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ ಫೈನಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ಪ್ರಶಸ್ತಿ ಸುತ್ತಿನ ಪಂದ್ಯಗಳ ಟಿಕೆಟ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿರುತ್ತದೆ. ಅಲ್ಲದೆ ಈ ಪಂದ್ಯದ ಟಿಕೆಟ್‌ಗಳನ್ನು ಈ ಮೊದಲೇ ಐಸಿಸಿ ಮಾರಾಟ ಮಾಡಿರುತ್ತದೆ. ಅಲ್ಲದೆ ಇನ್ನು ಟಿಕೆಟ್‌ಗಳು ಇದಲ್ಲಿ ಮಾರಾಟ ಮಾಡಲು ಮುಂದಾಗುತ್ತದೆ. ಅದಕ್ಕಾಗಿ ಅಭಿಮಾನಿಗಳು ಏನು ಮಾಡಬೇಕು ಎಂಬ ಬಗ್ಗೆ ವರದಿ ಇಲ್ಲಿದೆ.

ಫೈನಲ್‌ಗಾಗಿ ಟಿಕೆಟ್‌ಗಳನ್ನು ಅಧಿಕೃತವಾಗಿ ಬುಕ್‌ಮೈಶೋ ಮತ್ತು ಐಸಿಸಿ ಪೋರ್ಟಲ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಫೈನಲ್‌ಗೆ ಅರ್ಹತೆ ಪಡೆದಿದ್ದರಿಂದ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ ಹಲವು ವಿಭಾಗದ ಟಿಕೆಟ್ ಮಾರಾಟವಾಗಿವೆ. ಆದಾಗ್ಯೂ, ಅಭಿಮಾನಿಗಳಲ್ಲಿ ಭರವಸೆ ಇರುತ್ತದೆ.
ಪ್ರಮುಖ ಪಂದ್ಯಗಳ 24 ಹಾಗೂ 48 ಗಂಟೆಗಳ ಮುನ್ನ ಮತ್ತೆ ಟಿಕೆಟ್ ಮಾರಾಟ ಆರಂಭಿಸಲಾಗುತ್ತದೆ. ಈ ರೀತಿಯ ಟಿಕೆಟ್ ಮಾರಾಟವನ್ನು ಸೆಮಿಫೈನಲ್ ಪಂದ್ಯದ ವೇಳೆ ಮುಂಬೈನ ವಾಂಖೆಡೆಯಲ್ಲಿ ನೋಡಲಾಗಿತ್ತು. ಹೀಗಾಗಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಹೀಗಾಗಿ ಅಭಿಮಾನಿಗಳು ಅಧಿಕೃತ ವೆಬ್‌ಸೈಟ್‌ನತ್ತ ಗಮನಹರಿಸಲು ಸೂಚಿಸಲಾಗಿದೆ.
ಟಿಕೆಟ್ ಬೆಲೆ ಎಷ್ಟು?
ಮೇಲ್ಭಾಗದ ಸ್ಟ್ಯಾಂಡ್‌ಗಳಿಗೆ ಟಿಕೆಟ್ ಬೆಲೆ ಸುಮಾರು ₹3,000 ರಿಂದ ಪ್ರಾರಂಭವಾಗುತ್ತವೆ. ಮತ್ತೆ 75 ಸಾವಿರ ರೂ. ವರೆಗೂ ಟಿಕಟ್ ದರಗಳಿವೆ. ಸುಮಾರು 1.3 ಲಕ್ಷ ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಹೊಂದಿದೆ. ದೊಡ್ಡ ಜನಸಂದಣಿಯು ಮೊಬೈಲ್ ನೆಟ್‌ವರ್ಕ್‌ಗಳ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದ ಅಭಿಮಾನಿಗಳು ಮೊದಲೇ ತಮ್ಮ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ.
ಯಾವೆಲ್ಲಾ ವಸ್ತುಗಳಿಗೆ ನಿಷೇಧ?
ಪವರ್ ಬ್ಯಾಂಕ್‌ಗಳು, ಬ್ಯಾಗ್‌ಗಳು, ನೀರಿನ ಬಾಟಲಿಗಳು ಮತ್ತು ಛತ್ರಿಗಳಂತಹ ವಸ್ತುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪಂದ್ಯ 7 ಗಂಟೆಗೆ ಆರಂಭವಾಗಲಿದ್ದು, ಅಭಿಮಾನಿಗಳಿಗೆ ಮೂರು ಗಂಟೆಗಳ ಮುಂಚಿತವಾಗಿಯೇ ಮೈದಾನಕ್ಕೆ ಬರುವಂತೆ ಸೂಚಿಸಲಾಗಿದೆ. ಇನ್ನು ಮೊಬೈಲ್ ಹಾಗೂ ಪರ್ಸ್‌ಗಳನ್ನು ಮಾತ್ರ ಒಳಗಡೆ ಬಿಡಲಾಗುತ್ತದೆ.
ಭಾರತ ಸತತ ಎರಡನೇ ಬಾರಿಗೆ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆದಿದ್ದು, ಅಭಿಮಾನಿಗಳು ಫೈನಲ್ ಪಂದ್ಯವನ್ನು ಕಣ್ಣು ತುಂಬಿಕೊಳ್ಳುವ ಕನಸು ಹೊಂದಿದ್ದಾರೆ. ಈ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರಿಂದ ಪ್ರಶಸ್ತಿ ಯಾರ ಪಾಲಾಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications