T20 World Cup 2024: ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಯಲ್ಲಿ 3 ಮಾಜಿ ಚಾಂಪಿಯನ್ ತಂಡಗಳು!
ಜೂನ್ 9 ಭಾನುವಾರ, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ 18 ಪಂದ್ಯಗಳು ನಡೆದಿದ್ದು, ಪ್ರತಿಯೊಂದು ಪಂದ್ಯದಲ್ಲೂ ಅಚ್ಚರಿ ಫಲಿತಾಂಶ ಎದುರಾಗಿದೆ.
ಜೊತೆಗೆ ಹಂತ ಹಂತವಾಗಿ ಅಂಕಪಟ್ಟಿಯಲ್ಲಿ ಬದಲಾವಣೆಗಳು ಆಗುತ್ತಿವೆ. ಟಿ20 ವಿಶ್ವಕಪ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೇರಿದಂತೆ ಮೂರು ವಿಜೇತ ತಂಡಗಳ ಸ್ಥಿತಿ ಅಂಕಪಟ್ಟಿಯಲ್ಲಿ ಕೆಟ್ಟದಾಗಿದ್ದು, ಇನ್ನುಳಿದ ಪಂದ್ಯಗಳಲ್ಲಿ ಈ ತಂಡಗಳು ಸೋತರೆ ಟೂರ್ನಿಯಿಂದ ಹೊರಗುಳಿಯಬಹುದು.

ಮೊದಲನೆಯದಾಗಿ ಎ ಗುಂಪಿನಲ್ಲಿ ನೋಡುವುದಾದರೆ, ಆತಿಥೇಯ ಅಮೆರಿಕ ಜೊತೆಗೆ ಭಾರತ, ಪಾಕಿಸ್ತಾನ, ಐರ್ಲೆಂಡ್ ಮತ್ತು ಕೆನಡಾ ತಂಡಗಳು ಟಿ20 ವಿಶ್ವಕಪ್‌ನ ಎ ಗುಂಪಿನಲ್ಲಿವೆ. ಅಮೆರಿಕ ಎರಡು ಪಂದ್ಯಗಳನ್ನು ಆಡಿರುವ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿ 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಭಾರತ ಆಡಿರುವ ಒಂದು ಪಂದ್ಯದಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಕೆನಡಾ 2 ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ 2 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಆಡಿರುವ ಒಂದು ಪಂದ್ಯದಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದೆ. ಐರ್ಲೆಂಡ್ ಆಡಿರುವ 2 ಪಂದ್ಯಗಳಲ್ಲಿ ಗೆಲುವು ಸಾಧಿಸದೆ ಕೊನೆಯ ಸ್ಥಾನದಲ್ಲಿದೆ.

ಪಾಕಿಸ್ತಾನ ಮತ್ತು ಐರ್ಲೆಂಡ್ ಇನ್ನು ಗೆಲುವಿನ ಖಾತೆ ತೆರೆದಿಲ್ಲ. 2009ರ ಚಾಂಪಿಯನ್ ತಂಡ ಪಾಕಿಸ್ತಾನದ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಏಕೆಂದರೆ ಇಂದು ಭಾರತ ವಿರುದ್ಧ ಸೋತರೆ ಸೂಪರ್-8 ಹಾದಿ ಕಷ್ಟಕರವಾಗಲಿದೆ.
ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ಬಲಿಷ್ಠ
ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಆಸ್ಟ್ರೇಲಿಯಾ, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಒಮನ್ ತಂಡಗಳಿವೆ. ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದೆ.
ಸ್ಕಾಟ್ಲೆಂಡ್ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಹೀಗಾಗಿ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಒಮಾನ್ ವಿರುದ್ಧ ಗೆದ್ದಿರುವ ನಮೀಬಿಯಾ 2 ಅಂಕ ಗಳಿಸಿ ಅವರು ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಕೇವಲ 1 ಅಂಕ ಹೊಂದಿದ್ದು, ಉಳಿದಿರುವ ಎರಡು ಪಂದ್ಯಗಳನ್ನು ನಮೀಬಿಯಾ ಮತ್ತು ಒಮನ್ ವಿರುದ್ಧ ಆಡಬೇಕಾಗಿದೆ.
ಎರಡೂ ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದರೂ ಕೇವಲ 5 ಅಂಕ ಪಡೆಯಲು ಸಾಧ್ಯವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಒಂದು ವೇಳೆ ಈ ಫಲಿತಾಂಶಗಳು ಇಂಗ್ಲೆಂಡ್ ವಿರುದ್ಧ ಬಂದರೆ ಟೂರ್ನಿಯಿಂದ ಹೊರ ಬೀಳುಬಹುದು.

ಸಿ ಗುಂಪಿನಲ್ಲಿ ಸಂಕಷ್ಟದಲ್ಲಿರುವ ನ್ಯೂಜಿಲೆಂಡ್
ಸಿ ಗುಂಪಿನಲ್ಲಿ ಆತಿಥೇಯ ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಉಗಾಂಡಾ ಮತ್ತು ಪಪುವಾ ನ್ಯೂಗಿನಿಯಾ ತಂಡಗಳಿವೆ. ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ಎರಡೂ ಪಂದ್ಯಗಳನ್ನು ಗೆದ್ದು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ನ್ಯೂಜಿಲೆಂಡ್ ತಂಡವನ್ನು ಅಫ್ಘಾನಿಸ್ತಾನ ಹೀನಾಯವಾಗಿ ಸೋಲಿಸಿದೆ.
ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ ಪಡೆ ಈಗ ವೆಸ್ಟ್ ಇಂಡೀಸ್, ಉಗಾಂಡಾ ಮತ್ತು ಪಪುವಾ ನ್ಯೂಗಿನಿ ವಿರುದ್ಧ ಗೆಲ್ಲಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಿ ಗುಂಪು ಸಾಕಷ್ಟು ರೋಮಾಂಚನಕಾರಿಯಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ನ್ಯೂಜಿಲೆಂಡ್‌ನ ಸ್ಥಿತಿ ಅತ್ಯಂತ ಕೆಟ್ಟದಾಗಿದೆ.

ಔಟ್ ಆಗುವ ಭೀತಿಯಲ್ಲಿ ಶ್ರೀಲಂಕಾ
2014ರಲ್ಲಿ ಟಿ20 ವಿಶ್ವಕಪ್ ಗೆದ್ದಿರುವ ಶ್ರೀಲಂಕಾ ತಂಡದ ಪ್ರದರ್ಶನ ಈ ಬಾರಿಯೂ ಉತ್ತಮವಾಗಿಲ್ಲ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿದ್ದು, ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಹಂತದಲ್ಲಿದೆ.
ವನಿಂದು ಹಸರಂಗ ನಾಯಕತ್ವದ ತಂಡ ಉಳಿದ ಎರಡು ಪಂದ್ಯಗಳನ್ನು ನೇಪಾಳ ಮತ್ತು ನೆದರ್ಲೆಂಡ್ಸ್ ವಿರುದ್ಧ ಆಡಬೇಕಿದೆ. ಎರಡೂ ಪಂದ್ಯಗಳನ್ನು ಗೆದ್ದರೂ ಮುಂದಿನ ಸುತ್ತಿನಲ್ಲಿ ಅವರ ಸ್ಥಾನ ಖಚಿತವಾಗುವುದಿಲ್ಲ. ಈ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications