Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೌಲಿಂಗ್ ಅಲ್ಲ: ಭಾರತದ ದೊಡ್ಡ ತಲೆನೋವು ಇದು ಎಂದ ಮಾಜಿ ಕೋಚ್ ರವಿ ಶಾಸ್ತ್ರಿ!

T20 world cup: Former coach Ravi Shastri warns Team India said need to work hard on fielding

ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಬಹುತೇಕ ತಂಡಗಳು ಈಗ ಆಸ್ಟ್ರೇಲಿಯಾವನ್ನು ತಲುಪಿದ್ದು ಅಭ್ಯಾಸವನ್ನು ನಡೆಸುತ್ತಿದೆ. ಟೂರ್ನಿಗೆ ಅಂತಿಮ ಹಂತದ ತಯಾರಿಗಳನ್ನು ನಿರ್ವಹಿಸುತ್ತಿದೆ. ಭಾರತ ತಂಡ ಕೂಡ ಟೂರ್ನಿಗೆ ತಯಾರಿಯ ನಿಟ್ಟಿನಲ್ಲಿ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ತಂಡಕ್ಕೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ವಿಶ್ವಕಪ್ ಟೂರ್ನಿಗೆ ಇದೀಗ ಕೆಲವೇ ದಿನಗಳಿರುವಾಗ ಭಾರತ ತಂಡ ಒಂದು ವಿಭಾಗದಲ್ಲಿ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸಬೇಕು ಎಂದಿದ್ದಾರೆ. ಆ ಒಂದು ವಿಭಾಗದಲ್ಲಿ ಟೀಮ್ ಇಂಡಿಯಾ ಕಠಿಣ ಪರಿಶ್ರಮವನ್ನು ಹಾಕಿದರೆ ಮಾತ್ರ ಟಿ20 ವಿಶ್ವಕಪ್‌ನಲ್ಲಿ ಯಶಸ್ಸು ಸಾಧ್ಯ ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ. ಅಂದ ಹಾಗೆ ರವಿ ಶಾಸ್ತ್ರಿ ಹೀಗೆ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದ ಬೌಲಿಂಗ್ ವಿಭಾಗದ ಬಗ್ಗೆ ಅಲ್ಲ... ಹಾಗಾದರೆ ಮತ್ಯಾವುದು? ಮುಂದೆ ಓದಿ..

ಫೀಲ್ಡಿಂಗ್ ಬಗ್ಗೆ ಎಚ್ಚರಿಕೆ ನೀಡಿದ ಶಾಸ್ತ್ರಿ

ಫೀಲ್ಡಿಂಗ್ ಬಗ್ಗೆ ಎಚ್ಚರಿಕೆ ನೀಡಿದ ಶಾಸ್ತ್ರಿ

ಟೀಮ್ ಇಂಡಿಯಾದ ಮಾಜಿ ಕೋಚ್ ಹಾಗೂ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ ಫಿಲ್ಡಿಂಗ್ ವಿಭಾಗದ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಟಿ20 ವಿಶ್ವಕಪ್‌ನ ಆರಂಭಕ್ಕೂ ಮುನ್ನ ಭಾರತ ತಂಡ ಫೀಲ್ಡಿಂಗ್ ವಿಭಾಗದಲ್ಲಿ ಪ್ರಗತಿಯನ್ನು ಕಾಣಲೇಬೇಕು ಎಂದಿದ್ದಾರೆ ರವಿ ಶಾಸ್ತ್ರಿ. ಆಸ್ಟ್ರೇಲಿಯಾ ಇಂಗ್ಲೆಂಡ್‌ನ ಮಟ್ಟಕ್ಕೆ ಭಾರತ ತನ್ನ ಫಿಲ್ಡಿಂಗ್‌ನ ಗುಣಮಟ್ಟವನ್ನು ಸುಧಾರಿಸಿಕೊಳ್ಳಬೇಕಿರುವುದು ಬಹಳ ಅಗತ್ಯವಾಗಿದೆ ಎಂದಿದ್ದಾರೆ ರವಿ ಶಾಸ್ತ್ರಿ. ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಕೋಚ್ ಆಗಿದ್ದ ರವಿ ಶಾಸ್ತ್ರಿ ಬಳಿಕ ನಿವೃತ್ತರಾದರು.

ಫಿಲ್ಡಿಂಗ್‌ನಲ್ಲಿ ರನ್‌ ಉಳಿಸುವುದು ತಂಡಕ್ಕೆ ನೆರವಾಗಲಿದೆ

ಫಿಲ್ಡಿಂಗ್‌ನಲ್ಲಿ ರನ್‌ ಉಳಿಸುವುದು ತಂಡಕ್ಕೆ ನೆರವಾಗಲಿದೆ

ಭಾರತ ತಂಡ ಉತ್ತಮವಾಗು ಫೀಲ್ಡಿಂಗ್ ಮಾಡಿ ರನ್‌ಗಳನ್ನು ಉಳಿಸಿದರೆ ಖಂಡಿತವಾಗಿಯೂ ಭಾರತ ತಂಡಕ್ಕೆ ಅದು ನೆರವಾಗಲಿದೆ ಎಂದಿದ್ದಾರೆ ರವಿ ಶಾಸ್ತ್ರಿ. "ಭಾರತ ತಂಡ ಪ್ರಗತಿ ಕಾಣಬೇಕಿರುವ ಒಂದು ಪ್ರಮುಖ ವಿಭಾಗವೆಂದರೆ ಫೀಲ್ಡಿಂಗ್. ಅವರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಕ್ಕೂ ಮುನ್ನ ಕಠಿಣವಾದ ಪರಿಶ್ರಮವನ್ನು ಹಾಕಲೇಬೇಕಿದೆ. ಫಿಲ್ಡಿಂಗ್‌ನಲ್ಲಿ ಉಳಿದುವ 15-20 ರನ್‌ಗಳನ್ನುಯ ಬಹಳಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ. ಇಲ್ಲವಾದರೆ ಪ್ರತಿ ಬಾರಿಯೂ ನೀವು ಬ್ಯಾಟಿಂಗ್ ನಡೆಸುವಾಗ 15-20 ರನ್‌ಗಳನ್ನು ಹೆಚ್ಚಾಗಿ ಗಳಿಸಬೇಕಿರುವುದು ತಂಡಕ್ಕೆ ಅನಿವಾರ್ಯವಾಗಲಿದೆ" ಎಂದಿದ್ದಾರೆ ರವಿ ಶಾಸ್ತ್ರಿ.

ಭಾರತದ ಬ್ಯಾಟಿಂಗ್ ಹಿಂದೆಂದಿಗಿಂತಲೂ ಬಲಿಷ್ಠ

ಭಾರತದ ಬ್ಯಾಟಿಂಗ್ ಹಿಂದೆಂದಿಗಿಂತಲೂ ಬಲಿಷ್ಠ

ಇನ್ನು ಇದೇ ಸಂದರ್ಭದಲ್ಲಿ ಟಿ20 ಮಾದರಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಹಿಂದೆಂದಿಗಿಂತಲೂ ಈಗ ಅತ್ಯಂತ ಬಲಿಷ್ಠವಾಗಿದೆ ಎಂದಿದ್ದಾರೆ. "ಕಳೆದ ಆರೇಳು ವರ್ಷಗಳಿಂದ ಭಾರತ ತಂಡದ ಭಾಗವಾಗಿದ್ದೇನೆ. ಮೊದಲಿಗೆ ಕೋಚ್ ಆಗಿದ್ದು ಈಗ ತಂಡವನ್ನು ಹೊರಗಿನಿಂದ ಗಮನಿಸುತ್ತಿದ್ದೇನೆ. ಟಿ20 ಕ್ರಿಕೆಟ್ ಮಾದರಿಯಲ್ಲಿ ಭಾರತ ತಂಡ ಹೊಂದಿರುವ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಇದಾಗಿದೆ ಎಂಬುದು ನನ್ನ ಭಾವನೆ. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ, ಹಾರ್ದಿಕ್ ಐದನೇ ಕ್ರಮಾಂಕದಲ್ಲಿ ಹಾಗೂ ಆರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ರಿಷಭ್ ಪಂತ್ ಇದ್ದಾರೆ. ಇದು ಬಹಳಷ್ಟು ದೊಡ್ಡ ವ್ಯತ್ಯಾಸವನ್ನು ಮಾಡಬಲ್ಲದು. ಅಗ್ರ ಕ್ರಮಾಂಕಸ ಆಟಗಾರರು ತಮ್ಮ ಸಹಜ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಲು ಇದು ಅನುಕೂಲ ಮಾಡಿಕೊಡಲಿದೆ" ಎಂದಿದ್ದಾರೆ ರವಿ ಶಾಸ್ತ್ರಿ.

ಅಭ್ಯಾಸ ನಡೆಸುತ್ತಿದೆ ಟೀಮ್ ಇಂಡಿಯಾ

ಅಭ್ಯಾಸ ನಡೆಸುತ್ತಿದೆ ಟೀಮ್ ಇಂಡಿಯಾ

ಇನ್ನು ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಈಗಾಗಲೇ ಅಭ್ಯಾಸವನ್ನು ನಡೆಸುತ್ತಿದೆ. ಸದ್ಯ ಪರ್ತ್‌ನಲ್ಲಿರುವ ಭಾರತ ತಂಡ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಎರಡು ಪಂದ್ಯಗಳ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿದೆ. ಅದಾದ ಬಳಿಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ ಭಾರತ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು ನಂತರ ಸೂಪರ್ 12 ಹಂತದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಇನ್ನು ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ ಜಸ್ಪ್ರೀತ್ ಬೂಮ್ರಾ ಗಾಯಗೊಂಡು ಹೊರಬಿದ್ದಿರುವ ಕಾರಣ ಇನ್ನಷ್ಟೇ ಬದಲಿ ಆಟಗಾರನನ್ನು ಘೋಷಣೆ ಮಾಡಬೇಕಿದೆ. ಮೊಹಮ್ಮದ್ ಶಮಿ ಬದಲಿ ಆಟಗಾರನಾಗಿ ಅಂತಿಮ 15ರ ಬಳಗವನ್ನು ಕೂಡಿಕೊಳ್ಳಳು ಸಜ್ಜಾಗಿದ್ದು ಅವರು ಕೂಡ ಈಗಾಗಲೇ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದಾರೆ.

Story first published: Thursday, October 13, 2022, 11:31 [IST]
Other articles published on Oct 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+