ಪಾಕ್ ವಿರುದ್ಧದ ಪಂದ್ಯವೇ ಅಂತಿಮ ಗುರಿಯಲ್ಲ ಭಾರತಕ್ಕೆ ಅದೊಂದು ಹೆಜ್ಜೆಯಷ್ಟೇ: ಗೌತಮ್ ಗಂಭೀರ್

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 12 ಹಂತದ ಪಂದ್ಯಕ್ಕೂ ಮುನ್ನ ಸಹಜವಾಗಿಯೇ ಅಭಿಮಾನಿಗಳ ಕುತೂಹಲ ಕಾತುರತೆ ಹೆಚ್ಚಿರುತ್ತದೆ. ಇದು ಆಟಗಾರರ ಮೇಲೆ ಕೂಡ ಒತ್ತಡಗಳನ್ನು ಉಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿದ್ದು ಈ ಪಂದ್ಯದ ಮೇಲಿನ ನಿರೀಕ್ಷೆಯ ಬಗ್ಗೆ ಕುತೂಹಲಕಾರಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನದ ವಿರುದ್ಧ ನಡಯಲಿರುವ ಈ ಪಂದ್ಯವನ್ನು ಇದು ಕೂಡ ಇತರ ಪಂದ್ಯಗಳ ರೀತಿಯಲ್ಲೇ ಒಂದು ಎಂಬುದನ್ನು ನೋಡಬೇಕಿದ ಎಂದಿದ್ದಾರೆ. ಮೆಲ್ಬರ್ನ್‌ನಲ್ಲಿ ಅಕ್ಟೋಬರ್ 23ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಈ ಮಾತು ಹೇಳಿದ್ದಾರೆ ಗೌತಮ್ ಗಂಭೀರ್.

ಪಾಕಿಸ್ತಾನ ಪಂದ್ಯವೇ ಅಂತಿಮ ಗುರಿಯಲ್ಲಿ
ಶ್ರೀಲಂಕಾ ಹಾಗೂ ಐರ್ಲೆಂಡ್ ನಡುವಿನ ಪಂದ್ಯದ ಸಂದರ್ಭದಲ್ಲಿ ಗೌತಮ್ ಗಂಭೀರ್ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯ ಮಾತ್ರವೇ ಭಾರತದ ಗುರಿಯಲ್ಲ. ಇದು ಭಾರತದ ಗುರಿಯತ್ತ ತೆರಳಲು ಇರುವ ಒಂದು ಹೆಜ್ಜೆ ಮಾತ್ರ" ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಈ ಒಂದು ಪಂದ್ಯದ ಮೇಲೆ ಮಾತ್ರವೇ ನಿರೀಕ್ಷೆ ಇಒಟ್ಟುಕೊಳ್ಳುವುದು ಸೂಕ್ತವಲ್ಲ ಎಂದಿದ್ದಾರೆ ಗೌತಮ್ ಗಂಭೀರ್.

ಕಡಿಮೆಯಾಯ್ತು ಮಳೆಯ ಆತಂಕ
ಇನ್ನು ಈ ಹಿಂದೆ ಹವಾಮಾನ ವರದಿಗಳ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಭೀತಿಯಿದೆ ಎನ್ನಲಾಗಿತ್ತು. ಆದರೆ ಶನಿವಾರ ರಾತ್ರಿಯಿಂದ ಮೆಲ್ಬರ್ನ್ ಕ್ರೀಡಾಂಗಣದ ಪರಿಸರದಲ್ಲಿ ಮಳೆಯಾಗಿಲ್ಲ. ಮೋಡಕವಿದ ವಾತಾವರಣವಿದ್ದರೂ ಮಳೆಯಾಗಿಲ್ಲ. ಈ ಪರಿಸ್ಥಿತಿ ಮುಂದುವರಿದರೆ ಸಂಪೂರ್ಣ ಪಂದ್ಯವನ್ನು ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದೆ.

ಕಠಿಣ ಅಭ್ಯಾಸದಲ್ಲಿ ತೊಡಗಿದ ಇತ್ತಂಡಗಳ ಆಟಗಾರರು
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಎರಡು ತಂಡಗಳ ಆಟಗಾರರು ಕೂಡ ಸಾಕಷ್ಟು ಅಭ್ಯಾಸವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನ ತಂಡ ಉತ್ತಮವಾದ ತಂಡವಾಗಿದೆ ಎಂದಿದ್ದು ಈ ಸವಾಲನ್ನು ನಾವು ಸ್ವೀಕರಿಸಲು ಸಿದ್ಧವಾಗಿದ್ದೇವೆ ಎಂದಿದ್ದಾರೆ. ಇನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಕೂಡ ಮಾತನಾಡಿದ್ದು ಯಾವುದೇ ರೀತಿಯ ಪರಿಸ್ಥಿತಿಯಿದ್ದರೈ ನಮ್ಮ ತಂಡ 100 ಶೇಕಡಾ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ಧವಾಗಿದ್ದೇವೆ" ಎಂದಿದ್ದಾರೆ.

ಪಾಕಿಸ್ತಾನದ ಬೌಲಿಂಗ್ ವಿಭಾಗವನ್ನು ಹೊಗಳಿದ ಗಂಭೀರ್
ಇನ್ನು ಇದೇ ಸಂದರ್ಭದಲ್ಲಿ ಗೌತಮ್ ಗಂಭೀರ್ ಈ ಪಂದ್ಯ ಏಕಮುಖವಾಗಿ ನಡೆಯಲಿದೆ ಎಂಬುದನ್ನು ಒಪ್ಪಿಕೊಳ್ಳಲಾರೆ ಎಂದಿದ್ದಾರೆ. "ಪಾಕಿಸ್ತಾನ ತಂಡ ಅತ್ಯಂತ ಬಲಿಷ್ಠವಾದ ಬೌಲಿಂಗ್ ವಿಭಾಗವನ್ನು ಹೊಂದಿದೆ. ವೇಗಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಈ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠವಾದ ಬೌಲಿಂಗ್ ವಿಭಾಗವನ್ನು ಹೊಂದಿದೆ. 140ಕ್ಕೂ ಅಧಿಕ ವೇಗದಲ್ಲಿ ಬೌಲಿಂಗ್ ದಾಳಿ ನಡೆಸಬಲ್ಲ ಮೂವರು ವೇಗಳು ಪಾಕಿಸ್ತಾನ ತಂಡದಲ್ಲಿದ್ದಾರೆ" ಎಂದು ಗೌತಮ್ ಗಂಭೀರ್ ಪಾಕಿಸ್ತಾನ ಬೌಲಿಂಗ್ ವಿಭಾಗದ ಬಗ್ಗೆ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications