For Quick Alerts
ALLOW NOTIFICATIONS  
For Daily Alerts
 

T20 World Cup: ಪಾಂಡ್ಯ ಬೌಲಿಂಗ್‌ನಲ್ಲಿ ಸುಧಾರಣೆಯಾಗಬೇಕು ಎಂದ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ

T20 World Cup: Hardik Pandya Can Be More Consistent With The Ball : Lance Klusener

ಹಾರ್ದಿಕ್ ಪಾಂಡ್ಯ ತಮ್ಮ ಬೌಲಿಂಗ್‌ ಬಗ್ಗೆ ಇನ್ನೂ ಗಮನ ಹರಿಸಿದರೆ ಟೀಂ ಇಂಡಿಯಾದಲ್ಲಿ ಉತ್ತಮ ಬೌಲರ್ ಆಗಿ ತಮ್ಮ ಸ್ಥಾನವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬಹುದು ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಲ್ಯಾನ್ಸ್ ಕ್ಲುಸೆನರ್ ಅಭಿಪ್ರಾಯಪಟ್ಟಿದ್ದಾರೆ. ಪಾಂಡ್ಯ ಸ್ಥಿರವಾಗಿರುವುದು ಟಿ20 ಮತ್ತು 50-ಓವರ್ ಕ್ರಿಕೆಟ್ ಎರಡರಲ್ಲೂ ತನ್ನ ಸಂಪೂರ್ಣ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಲು ಸಜ್ಜಾಗಬೇಕು ಎಂದು ಎಂದು ಕ್ಲುಸೆನರ್ ಅಭಿಪ್ರಾಯಪಟ್ಟಿದ್ದಾರೆ.

ಸೀಮಿತ ಕ್ರಿಕೆಟ್ ಮಾದರಿಯಲ್ಲಿ ಪಾಂಡ್ಯ ಭಾರತದ ಅತ್ಯಂತ ಅಮೂಲ್ಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಅವರು ಬೌಲಿಂಗ್‌ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ, ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ ಭಾರತದ ಟಿ20 ಸರಣಿಯ ಗೆಲುವಿನಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. ಗಾಯದಿಂದ ಯಶಸ್ವಿಯಾಗಿ ಹಿಂದಿರುಗಿದ ಅವರು ಭಾರತ ತಂಡವನ್ನು ಸಮತೋಲನಗೊಳಿಸಿದ್ದಾರೆ ಮತ್ತು ಬೌಲರ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಲ್ಯಾನ್ಸ್ ಕ್ಲೂಸೆನರ್, ಪಾಂಡ್ಯ ಈಗಿರುವ ರೀತಿಯಲ್ಲಿ ಬ್ಯಾಟಿಂಗ್ ಮುಂದುವರಿಸಬೇಕು ಆದರೆ ಬೌಲಿಂಗ್‌ನಲ್ಲಿ ಕೂಡ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು. ಒಮ್ಮೆ ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಇದೇ ರೀತಿಯ ಪಾತ್ರವನ್ನು ನಿರ್ವಹಿಸಿದ ಕ್ಲೂಸೆನರ್, ಚೆಂಡಿನೊಂದಿಗೆ ಹೆಚ್ಚು ಸ್ಥಿರತೆಯು ಪಾಂಡ್ಯರ ಅತ್ಯುತ್ತಮ ಆಲ್‌ರೌಂಡರ್‌ಗಳ ಸ್ಥಾನಮಾನವನ್ನು ಖಚಿತಪಡಿಸುತ್ತದೆ ಎಂದು ಭಾವಿಸುತ್ತಾರೆ.

T20 World Cup: Hardik Pandya Can Be More Consistent With The Ball : Lance Klusener

ಹಾರ್ದಿಕ್ ಪಾಂಡ್ಯ ಅದ್ಭುತ ಆಟಗಾರ

"ಹಾರ್ದಿಕ್ ಒಬ್ಬ ಅದ್ಭುತ ಆಟಗಾರ ಎಂದು ನಾನು ಭಾವಿಸುತ್ತೇನೆ. ಬ್ಯಾಟ್‌ನಲ್ಲಿ ಆತನ ಆಟದ ಬಗ್ಗೆ ನನಗೆ ಅನುಮಾನ ಇಲ್ಲ ಮತ್ತು ಅವರು ಆಡುವ ರೀತಿ ಅದ್ಭುತವಾಗಿದೆ. ಬಹುಶಃ ಚೆಂಡಿನೊಂದಿಗೆ ಸ್ವಲ್ಪ ಹೆಚ್ಚು ಪ್ರದರ್ಶನವನ್ನು ಸ್ವಲ್ಪ ಹೆಚ್ಚು ಸ್ಥಿರವಾದ ಪ್ರದರ್ಶನವನ್ನು ನೀಡಬೇಕಾಗಿದೆ. ಸೀಮಿತ ಓವರ್ ಗಳ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಲ್ಲಿ ಅವನ ಕೋಟಾದ ಓವರ್‌ಗಳನ್ನು ಮುಗಿಸಬೇಕು" ಎಂದು ಅವರು ಹೇಳಿದರು.

"ಆತ ತನ್ನ ಬೌಲಿಂಗ್ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ, ಏಕದಿನ ಕ್ರಿಕೆಟ್‌ನಲ್ಲಿ ಆತನಿಂದ 10 ಓವರ್ ಬೌಲಿಂಗ್ ಮಾಡಿಬಹುದು. ಆತನಿಗೆ ಬ್ಯಾಟಿಂಗ್‌ನಲ್ಲಿ ಕೂಡ ಬಡ್ತಿ ನೀಡುವ ಮೂಲಕ ಅವನು ಅತ್ಯುತ್ತಮ ಆಲ್‌ರೌಂಡರ್ ಆಗಲು ಪ್ರಯತ್ನಿಸಬಹುದು. ಬರೀ ಬ್ಯಾಟಿಂಗ್ ಮಾಡಿದರೆ ಉತ್ತಮ ಆಲ್‌ರೌಂಡರ್ ಆಗಲಾರ ಎಂದು ಕ್ಲುಸೆನರ್ ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 148.49 ಸರಾಸರಿಯಲ್ಲಿ ರನ್ ಗಳಿಸುವ ಪಾಂಡ್ಯ, ಮುಂಬರುವ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಆಟಗಾರನಾಗಿದ್ದಾರೆ. ಬರೋಡಾ ಮೂಲದ ಆಲ್ ರೌಂಡರ್ ಭಾರತದ 2021 ರ ಟಿ 20 ವಿಶ್ವಕಪ್ ತಂಡದ ಭಾಗವಾಗಿದ್ದರು ಆದರೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾದರು.

Story first published: Saturday, October 15, 2022, 23:29 [IST]
Other articles published on Oct 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+