T20 World Cup 2024: ಭಾರತ ವಿರುದ್ಧ ಪಾಕಿಸ್ತಾನ ಸೋತರೆ ಟೂರ್ನಿಯಿಂದ ಹೊರಗುಳಿಯುವುದಿಲ್ಲ; ಏನಿದು ಲೆಕ್ಕಾಚಾರ!
ಜೂನ್ 9 ಭಾನುವಾರ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಉಭಯ ತಂಡಗಳ ಮೆಗಾಫೈಟ್‌ಗಾಗಿ ವಿಶ್ವದೆಲ್ಲದೆಡೆ ಅಭಿಮಾನಿಗಳು ಕಾಯುತ್ತಿದ್ದರು.
ಇಂದು (ಜೂನ್ 9) ನ್ಯೂಯಾರ್ಕ್ ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡೂ ತಂಡಗಳ ತಮ್ಮ ಪ್ರತಿಷ್ಠೆಯ ಗೆಲುವಿಗಾಗಿ ಸೆಣಸಾಡಲಿವೆ. ತನ್ನ ಆರಂಭಿಕ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಪಾಕಿಸ್ತಾನ ಸೋತು ದೊಡ್ಡ ಅಘಾತ ಅನುಭವಿಸಿದೆ.

ಆದರೆ ಭಾರತ ತಂಡವು ಐರ್ಲೆಂಡ್ ಅನ್ನು ಸೋಲಿಸುವ ಮೂಲಕ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಿದೆ. ಆದಾಗ್ಯೂ, ಎರಡೂ ತಂಡಗಳು ತಮ್ಮ ಎರಡನೇ ಪಂದ್ಯವನ್ನು ಗೆಲ್ಲಲು ಕಣ್ಣಿಟ್ಟಿವೆ.
ಪಾಕಿಸ್ತಾನವು ಈ ಪಂದ್ಯವನ್ನು ಸೋತರೆ ಸೂಪರ್-8 ತಲುಪುವ ಹಾದಿಯು ಕಷ್ಟಕರವಾಗುತ್ತದೆ. ಆದರೆ ಪಾಕಿಸ್ತಾನ ಸೋಲಿನ ನಂತರವೂ ಸೂಪರ್ -8 ಗೆ ಪ್ರವೇಶಿಸುವ ಲೆಕ್ಕಚಾರ ಇಲ್ಲಿದೆ.
ಆತಿಥೇಯ ಅಮೆರಿಕ ಜೊತೆಗೆ ಭಾರತ, ಪಾಕಿಸ್ತಾನ, ಐರ್ಲೆಂಡ್ ಮತ್ತು ಕೆನಡಾ ತಂಡಗಳು ಟಿ20 ವಿಶ್ವಕಪ್‌ನ ಎ ಗುಂಪಿನಲ್ಲಿವೆ. ಅಮೆರಿಕ ಎರಡು ಪಂದ್ಯಗಳನ್ನು ಆಡಿದ್ದು, ಎರಡು ಗೆಲುವಿನೊಂದಿಗೆ 4 ಅಂಕಗಳೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಭಾರತ ಆಡಿರುವ ಒಂದು ಪಂದ್ಯದಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಕೆನಡಾ 2 ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ 2 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಆಡಿರುವ ಒಂದು ಪಂದ್ಯದಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದೆ.
ಐರ್ಲೆಂಡ್ 2 ಪಂದ್ಯಗಳನ್ನು ಆಡಿದ್ದು, ಯಾವುದೇ ಗೆಲುವು ಸಾಧಿಸದೆ ಕೊನೆಯ ಸ್ಥಾನದಲ್ಲಿದೆ. ಗುಂಪಿನ ಅಗ್ರ-2 ತಂಡಗಳು ಸೂಪರ್-8 ಗೆ ಅರ್ಹತೆ ಪಡೆಯುತ್ತವೆ ಎಂಬುದು ಗೊತ್ತಿರುವ ವಿಚಾರ.
ಭಾರತ ಗೆದ್ದರೆ ಅಂಕಪಟ್ಟಿಯಲ್ಲಿ ಬದಲಾವಣೆ
ಪಾಕಿಸ್ತಾನವನ್ನು ಟೀಮ್ ಇಂಡಿಯಾ ಸೋಲಿಸಿದರೂ ಸಹ, ಬಾಬರ್ ಅಜಮ್ ತಂಡವು ಸೂಪರ್-8 ತಲುಪವು ಅವಕಾಶ ಹೊಂದಿರುತ್ತದೆ. ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೆ 4 ಅಂಕ ಗಳಿಸಿ ಮೊದಲ ಸ್ಥಾನಕ್ಕೇರಲಿದೆ.
ಪಾಕಿಸ್ತಾನ ಸೂಪರ್-8 ತಲುಪುವ ಲೆಕ್ಕಚಾರ
ಟೀಮ್ ಎದುರು ಪಾಕಿಸ್ತಾನ ಸೋಲು ಕಂಡರೆ ಸೂಪರ್-8ಗೆ ತಲುಪಲು ಉಳಿದೆರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿರುತ್ತದೆ. ಪಾಕಿಸ್ತಾನ ತಂಡ ಐರ್ಲೆಂಡ್ ಮತ್ತು ಕೆನಡಾವನ್ನು ಸೋಲಿಸಿದರೆ 4 ಅಂಕಗಳನ್ನು ಪಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ದೊಡ್ಡ ಅಂತರದಿಂದ ಗೆಲ್ಲುವ ಅನಿರ್ವಾಯ ಎದುರಾಗಲಿದೆ.
ಏಕೆಂದರೆ ತಲಾ 4 ಅಂಕಗಳನ್ನು ಹೊಂದಿರುವ ಭಾರತ ಮತ್ತು ಅಮೆರಿಕಕ್ಕೆ ಹೋಲಿಸಿದರೆ ಪಾಕಿಸ್ತಾನ ತನ್ನ ರನ್ ರೇಟ್ ಅನ್ನು ಸುಧಾರಿಸಬೇಕಾಗುತ್ತದೆ. ಇದರ ನಂತರವೂ, ಯುಎಸ್ ತಂಡವು ಭಾರತ ಮತ್ತು ಐರ್ಲೆಂಡ್ ವಿರುದ್ಧದ ತನ್ನ ಉಳಿದ ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಸೋಲುವಂತೆ ಪಾಕಿಸ್ತಾನವು ಪ್ರಾರ್ಥಿಸಬೇಕಾಗುತ್ತದೆ.
ಇದರಿಂದ ಯುಎಸ್‌ಎ ರನ್ ರೇಟ್ ಪಾಕಿಸ್ತಾನ ತಂಡಕ್ಕಿಂತ ಕಡಿಮೆಯಾಗಲಿದ್ದು, ಇದೆಲ್ಲ ನಡೆದರೆ ಉತ್ತಮ ರನ್ ರೇಟ್ ಆಧಾರದ ಮೇಲೆ ಭಾರತದೊಂದಿಗೆ ಪಾಕಿಸ್ತಾನ ಸೂಪರ್-8ಗೆ ಅರ್ಹತೆ ಪಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications