ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಕಂಟಕ?!

ನವದೆಹಲಿ, ಏಪ್ರಿಲ್ 27: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರ ಮುಖ್ಯ ಕಾರ್ಯನಿರ್ವಾಹಕ ಸಮಿತಿಯ ಸಭೆ ನಡೆಸಿತ್ತು. ಆದರೆ ಈ ವರ್ಷದ ಅಂತ್ಯಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಗ್ಗೆ ಇನ್ನೂ ಐಸಿಸಿ ಸ್ಪಷ್ಟ ನಿರ್ಧಾರ ತಾಳಿಲ್ಲ. ಪ್ರತಿಷ್ಠಿತ ಟೂರ್ನಿ ಬಗ್ಗೆ ಸ್ಪಷ್ಟ ನಿರ್ದೇಶನವನ್ನೇ ಐಸಿಸಿ ಪ್ರಕಟಿಸಿಲ್ಲ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಇನ್ ಇಂಡಿಯಾ (ಬಿಸಿಸಿಐ) ಅಧಿಕಾರಿಗಳು ಕೂಡ ಕೊರೊನಾವೈರಸ್ ಕಾರಣ ಐಸಿಸಿ ವಿಶ್ವಕಪ್ ಟೂರ್ನಿ ಅಕ್ಟೋಬರ್‌ನಲ್ಲಿ ನಡೆಯೋದು ಅನುಮಾನವೆಂಬಂತೆ ಮಾತನಾಡಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ನಡೆಯುತ್ತೆ ಅನ್ನೋದು ಅಪ್ರಾಯೋಗಿಕ ಎಂದು ಅಧಿಕಾರಿಗಳು ನುಡಿದಿದ್ದಾರೆ.
ಐಎಎನ್‌ಎಸ್ ಜೊತೆ ಮಾತನಾಡಿರುವ ಬಿಸಿಸಿಐ ಅಧಿಕಾರಿಗಳು, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕವೇ ಎಲ್ಲಾ ನಿರ್ಧಾರವಾಗಲಿದೆ. ದೇಶದಿಂದ ದೇಶಕ್ಕೆ ಪ್ರಯಾಣಿಸಲು ನಿರ್ಬಂಧವಿರುವುದರಿಂದ ಮತ್ತು ಎಲ್ಲಾ ರಾಷ್ಟ್ರಗಳಿಂದ ಹೊಸ ನಿರ್ದೇಶನಗಳು ಬರಲಿರುವುದರಿಂದ ವಿಶ್ವಕಪ್, ಈಗ ನಿಗದಿಯಾಗಿರುವ ದಿನಾಂಕಕ್ಕೆ ನಡೆಯೋ ಸಾಧ್ಯತೆ ಕಡಿಮೆಯಿದೆ ಎಂದಿದ್ದಾರೆ.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ ಟಿ20 ವಿಶ್ವಕಪ್ ಅಕ್ಟೋಬರ್‌ನಲ್ಲಿ ನಡೆಯೋದು ಅಪ್ರಾಯೋಗಿಕ. ಯಾಕೆಂದರೆ ಟೂರ್ನಿಗೆ ಹಲವಾರು ಪ್ರೇಕ್ಷಕರು ಸೇರುವುದರಿಂದ ಇದನ್ನು ಈಗಿನ ಪರಿಸ್ಥಿತಿಯಲ್ಲಿ ಯೋಚಿಸುವುದೂ ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣವೂ ಸಾಧ್ಯವಿಲ್ಲ. ಕೊರೊನಾ ಕಡಿಮೆಯಾದಾಗ ವಿಶ್ವಕಪ್ ನಡೆಯಬಹುದು,' ಎಂದು ಬಿಸಿಸಿಐ ಅಧಿಕಾಯಿಯೊಬ್ಬರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications