ತಂಡದ ಅಗತ್ಯಕ್ಕೆ ತಕ್ಕಂತೆ ಆಡುವುದೇ ನನ್ನ ಗುರಿ: ಅರ್ಶ್‌ದೀಪ್ ಸಿಂಗ್

ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆದಿರುವ ಯುವ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿಯೂ ಎದುರಾಳಿ ತಂಡಗಳಿಗೆ ಆಘಾತ ನೀಡುವಲ್ಲಿ ಅರ್ಶ್‌ದೀಪ್ ಸಿಂಗ್ ಯಶಸ್ವಿಯಾಗುತ್ತಿದ್ದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದರ್ಶನದ ಬಳಿಕ ಮಾತನಾಡಿದ ಅರ್ಶ್‌ದೀಒ್ ಸಿಂಗ್ ತಾವು ಯಾವಾಗಲೂ ಸ್ಥಿರ ಪ್ರದರ್ಶನ ನೀಡುವತ್ತ ಗಮನಹರಿಸುವುದಾಗಿ ಹೇಳಿದ್ದಾರೆ.
ಯುವ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ತಾನು ಯಾವಾಗಲೂ ಸ್ಥಿರವಾಗಿ ಪ್ರದರ್ಶನ ನೀಡುವುದಕ್ಕೆ ಗಮನ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಅಂತಾಋಆಷ್ಟ್ರೀಯ ಮಟ್ಟದಲ್ಲಿ ವೇಗದ ಬೌಲರ್ ಆಗಿ ಹೆಚ್ಚು ದುರ್ಬಲ ಎಸೆತಗಳನ್ನು ಎಸೆಯುವುದು ಹಿನ್ನಡೆಯುಂಟಾಗುತ್ತದೆ ಎಂದಿದ್ದಾರೆ ಆರ್ಶ್‌ದೀಪ್ ಸಿಂಗ್.
ಟೀಮ್ ಇಂಡಿಯಾಗೆ ಸೀಮಿತ ಓವರ್‌ಗಳ ಮಾದರಿಯಲ್ಲಿ ಹೊಸ ಚೆಂಡಿನೊಂದಿಗೆ ಹಾಗೂ ಡೆತ್ ಓವರ್‌ನಲ್ಲಿ ದಾಲಿ ನಡೆಸುವ ಎಡಗೈ ವೇಗಿಯ ಅಗತ್ಯವಿತ್ತು. ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಸೇರ್ಪಡೆಯಾಗಿರುವ ಆರ್ಶ್‌ದೀಪ್ ಸಿಂಗ್ ಭಾರತ ತಂಡದ ಪರವಾಗಿ ಸಮರ್ಥವಾಗಿ ಪ್ರದರ್ಶನ ನೀಡಲು ಯಶಸ್ವಿಯಾಗುತ್ತಿರುವುದು ತಂಡಕ್ಕೆ ನಿರಾಳತೆ ಮೂಡಿಸಿದೆ. ಇನ್ನೀಂಗ್ಸ್‌ನ ಆರಂಭದಲ್ಲಿ ಮಾತ್ರವಲ್ಲದೆ ಡೆತ್ ಓವರ್‌ನಲ್ಲಿಯೂ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಿರುವ ಯುವ ವೇಗಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ.
ಸ್ಟಾರ್‌ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ನನ್ನ ಗಮನ ಯಾವಾಗಲೂ ಸ್ಥಿರತೆಯ ಮೇಲಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮಗೆ ಹೆಚ್ಚು ದರ್ಬಲ ಎಸೆತಗಳನ್ನು ಎಸೆಯಲು ಅವಕಾಶವಿರುವುದಿಲ್ಲ. ನಾನು ಹೊಸ ಚೆಂಡು ಹಾಗೂ ಹಳೆ ಚೆಂಡಿನಲ್ಲಿ ಪರಿಣಾಮಕಾರಿಯಾಗಲು ಬಯಸುತ್ತೇನೆ. ತಂಡದ ಅಗತ್ಯಕ್ಕೆ ತಕ್ಕನಾಗಿ ವಿಕೆಟ್ ಪಡೆಯುವುದು ಅಥವಾ ರನ್ ನಿಯಂತ್ರಿಸುವುದನ್ನು ನಾನು ಬಯಸುತ್ತೇನೆ" ಎಂದಿದ್ದಾರ ಅರ್ಶ್‌ದೀಪ್.
ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಯುವ ವೇಗದ ಬೌಲರ್ ಅರ್ಶದೀಪ್ ಸಿಂಗ್ ತಮ್ಮ ಯಶಸ್ಸಿಗೆ ಕಾರೆಣ ತಮಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಎಂದು ಇತ್ತೀಚೆಗಷ್ಟೇ ಹೇಳಿಕೆ ನಿಡಿದ್ದರು. ಭುವನೇಶ್ವರ್ ಕುಮಾರ್ ಜೊತೆಗೆ ಹೊಸ ಚೆಂಡು ಹಂಚಿಕೊಂಡು ಉತ್ತಮ ಪ್ರದರ್ಶನ ನೀಡುತ್ತಿರುವ ಅರ್ಶದೀಪ್ ಸಿಂಗ್ ಯಶಸ್ಸಿನ ಶ್ರೇಯಸ್ಸನ್ನು ಅನುಭವಿ ಬೌಲರ್‌ಗೆ ನೀಡಿದ್ದರು. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಅರ್ಶದೀಪ್ 9 ವಿಕೆಟ್ ಕಿತ್ತು ಮಿಂಚಿದ್ದಾರೆ ಎಂಬುದು ಗಮನಾರ್ಹ ಅಂಶ.
ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್(ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications