
ಇಂಗ್ಲೆಂಡ್ ತಂಡದ ವಿರುದ್ಧ ಐರ್ಲೆಂಡ್ ಅದ್ಭುತ ಆರಂಭವನ್ನು ಪಡೆದುಕೊಂಡರೂ ಅಂತಿಮ ಹಂತದಲ್ಲಿ ಕುಸಿದ ಪರಿಣಾಮವಾಗಿ ಸಾಧಾರಣ ಗುರಿ ನೀಡಲು ಸಾಧ್ಯವಾಗಿದೆ. 19.2 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡ ಐರ್ಲೆಂಡ್ ತಂಡ 159 ರನ್‌ಗಳನ್ನು ಗಳಿಸಲು ಯಶಸ್ವಿಯಾಗಿದೆ. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಇಂಗ್ಲೆಂಡ್ ತಂಡ ಗೆಲುವಿಗಾಗಿ 158 ರನ್‌ಗಳನ್ನು ಗಳಿಸುವ ಸವಾಲು ಸ್ವೀಕರಿಸಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಐರ್ಲೆಂಡ್ ತಂಡ ಮೊದಲ ವಿಕೆಟ್‌ಅನ್ನು ಶೀಘ್ರವಾಗಿ ಕಳೆದುಕೊಂಡಿದ್ದರೂ ಎರಡನೇ ವಿಕೆಟ್‌ಗೆ ಭರ್ಜರಿ ಪ್ರದರ್ಶನ ನೀಡಿತು. ನಾಯಕ ಬಲ್ಬರ್ನೈ ಹಾಗೂ ಲೂರ್ಕಾನ್ ಟಕ್ಕರ್ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಭರ್ಜರಿ ಪ್ರತ್ಯುತ್ತರ ನೀಡುತ್ತಾ 12 ಓವರ್‌ಗಳ ವೇಳೆಗೆ 103 ರನ್‌ಗಳನ್ನು ಗಳಿಸಲು ಕಾರಣವಾದರು. ಈ ಸಂದರ್ಭದಲ್ಲಿ ಈ ಜೋಡಿ ಬೇರ್ಪಟ್ಟಿತು.
ನಂತರವೂ ಬರ್ಬರ್ನೈ ಬ್ಯಾಟಿಂಗ್ ಮುಂದುವರಿಸಿದ್ದು ಭರ್ಜರಿ ಅರ್ಧ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು. 47 ಎಸೆತಗಳಲ್ಲಿ ಐರ್ಲೆಂಡ್ ನಾಯಕ 62 ರನ್ ಸಿಡಿಸಿ ವಿಕೆಟ್ ಕಳೆದುಕೊಂಡರು. ಆದರೆ ನಂಯತರ ಬಂದ ಆಟಗಾರರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಹೀಗಾಗಿ ಇಂಗ್ಲೆಂಡ್ ಬೌಲಿಂಗ್ ವಿಭಾಗ ಸಂಪೂರ್ಣ ಮೇಲುಗೈ ಸಾಧಿಸಿತು. 19.2 ಓವರ್‌ಗಳಲ್ಲಿ ಆಲೌಟ್ ಆದ ಐರ್ಲೆಂಡ್ ತಂಡ 159 ರನ್ ಗಳಿಸಿದೆ.
ಇಂಗ್ಲೆಂಡ್ ತಂಡದ ಪರವಾಘಿ ಬೌಲಿಂಗ್‌ನಲ್ಲಿ ಮಾರ್ಕ್‌ವುಡ್ ಹಾಗೂ ಲಿವಿಂಗ್‌ಸ್ಟನ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರು ಕೂಡ ಐರ್ಲೆಂಡ್ ತಂಡದ ತಲಾ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಸ್ಯಾಮ್ ಕರನ್ ಎರಡು ವಿಕೆಟ್ ಪಡೆದರೆ ಒಂದು ವಿಕೆಟ್ ಬೆನ್ ಸ್ಟೋಕ್ಸ್ ಪಾಲಾಯಿತು.
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್
ಬೆಂಚ್: ಸ್ಟೀಫನ್ ಡೊಹೆನಿ, ಕಾನರ್ ಓಲ್ಫರ್ಟ್, ಗ್ರಹಾಂ ಹ್ಯೂಮ್, ಸಿಮಿ ಸಿಂಗ್
ಇಂಗ್ಲೆಂಡ್ ಆಡುವ ಬಳಗ: ಜೋಸ್ ಬಟ್ಲರ್(ವಿಕೆಟ್ ಕೀಪರ್/ ನಾಯಕ), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್
ಬೆಂಚ್: ಫಿಲಿಪ್ ಸಾಲ್ಟ್, ಕ್ರಿಸ್ ಜೋರ್ಡಾನ್, ಡೇವಿಡ್ ವಿಲ್ಲಿ, ಟೈಮಲ್ ಮಿಲ್ಸ್