For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಸೋತಿದ್ದರಿಂದ ನೆಮ್ಮದಿಯಾಗಿ ನಿದ್ದೆ ಬಂತು: ಜೋಫ್ರಾ ಆರ್ಚರ್

T20 World Cup: Jofra Archer feels glad for England defeat against South Africa

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಸೂಪರ್ 12 ಹಂತದಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಸೆಮಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಅಮೋಘ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಆದರೆ ಇಂಗ್ಲೆಂಡ್ ಈ ಸೋಲನ್ನು ಅನುಭವಿಸಿದ್ದು ತನ್ನನ್ನು ಹೆಚ್ಚು ನಿರಾಳ ಗೊಳಿಸಿತು ಎಂದು ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಹೇಳಿಕೊಂಡಿದ್ದಾರೆ.

ಜೋಫ್ರಾ ಆರ್ಚರ್ ಗಾಯದ ಕಾರಣದಿಮದಾಗಿ ಈ ಬಾರಿಯ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಈ ಸಂದರ್ಭದಲ್ಲಿ ಆರ್ಚರ್ ಇಂಗ್ಲೆಂಡ್ ತಂಡದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ 'ಡೈಲಿಮೇಲ್'ಗೆ ಬರೆದ ಅಂಕಣದಲ್ಲಿ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಗ್ರೂಫ್ ಹಂತದಲ್ಲಿ ಸೋಲು ಅನುಭವಿಸಿದ್ದು ಸಮಾಧಾನ ನೀಡಿತು: ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡ ಗ್ರೂಫ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದ್ದು ತನಗೆ ಸಮಾಧಾನ ನಿಡಿತು ಎಂದಿದ್ದಾರೆ ಆರ್ಚರ್. ಅದಕ್ಕೆ ಅವರು ಕಾರಣವನ್ನು ಕೂಡ ನೀಡಿದ್ದಾರೆ. "ನಾನು ನಿಮ್ಮಲ್ಲಿ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ದೇವೆ. ನನಗೆ ಕೆಲ ವಿಶೇಷ ನಂಬಿಕೆಗಳಿವೆ. ಅದೇ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಸೋಲು ಅನುಭವಿಸಿದ್ದಕ್ಕೆ ಸಂತಸಪಟ್ಟೆ" ಎಂದಿದ್ದಾರೆ ಜೋಫ್ರಾ ಆರ್ಚರ್.

ಸೋಲು ಅನುಭವಿಸದೆ ಟ್ರೋಫಿ ಗೆದ್ದಿಲ್ಲ: "ನನ್ನ ನೆನಪಿನಂತೆ ಈವರೆಗೆ ಯಾವ ತಂಡ ಕೂಡ ಟಿ20 ವಿಶ್ವಕಪ್‌ನಲ್ಲಿ ಒಂದೂ ಸೋಲು ಅನುಭವಿಸದೆ ಚಾಂಪಿಯನ್ ಪಟ್ಟಕ್ಕೇರಿದ ಉದಾಹರಣೆಯಿಲ್ಲ. ಹಾಗಾಗಿ ಇದು ನನ್ನನ್ನು ಕಾಡುತ್ತಲೇ ಇತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದಾಗ ನನಗೆ ನಿರಾಳವಾಯಿತು. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ನಾನು ನಿರಾಳವಾಗಿ ನಿದ್ದೆ ಮಾಡಿದ್ದೇನೆ" ಎಂದು ಜೋಫ್ರಾ ಆರ್ಚರ್ ಬರೆದುಕೊಂಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಡಿಸಿದ್ದು ಆತ ವಿಶ್ವದ ಉತ್ತಮ ಆಟಗಾರರಲ್ಲಿ ಓರ್ವ ಎಂದಿದ್ದಾರೆ. ತನ್ನ ಅದ್ಭುತವಾದ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ಬಟ್ಲರ್ ದುಸ್ವಪ್ನವಾಗಿ ಕಾಡುತ್ತಾರೆ ಎಂದು ಜೋಫ್ರಾ ಆರ್ಚರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ತಂಡ ಸೆಮಿಫೈನಲ್‌ನಲ್ಲಿ ನ್ಯೂಜೊಲೆಂಡ್ ವಿರುದ್ಧ ಸೆಣೆಸಾಟವನ್ನು ನಡೆಸುತ್ತಿದ್ದು ಫೈನಲ್ ಹಂತಕ್ಕೇರಲು ಸರ್ವ ಪ್ರಯತ್ನ ನಡೆಸುತ್ತಿದೆ. ಆದರೆ ಇಂಗ್ಲೆಂಡ್‌ಗೆ ಗಾಯದ ಸಮಸ್ಯೆ ಸತವಾಗಿ ಬಾಧಿಸುತ್ತಿದೆ. ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್‌ರಂತಾ ಆಟಗಾರರು ಟೂರ್ನಿಗೂ ಮುನ್ನವೇ ಅಲಭ್ವಾಗಿದ್ದರು. ಟೂರ್ನಿ ಆರಂಭವಾದ ಬಳಿಕವೂ ಈ ಗಾಯದ ಸಮಸ್ಯೆ ಮುಂದುವರಿದಿದೆ. ಸೆಮಿಫಯನಲ್ ಪಂದ್ಯಕ್ಕೂ ಮುನ್ನ ಆರಂಭಿಕ ಆಟಗಾರ ಜೇಸನ್ ರಾಯ್ ಕೂಡ ಗಾಯಗೊಂಡಿದ್ದು ಸೆಮಿಫೈನಲ್ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಹೀಗಾಗಿ ಜಾನಿ ಬೈರ್‌ಸ್ಟೋವ್ ಹಾಗೂ ಜೋಸ್ ಬಟ್ಲರ್ ಆರಂಬಿಕರಾಗಿ ಕಣಕ್ಕಿಳಿದಿದ್ದರು.

ಸೆಮಿಫಯನಲ್‌ನಲ್ಲಿ ಕಣಕ್ಕಿಳಿದ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಮೊಯಿನ್ ಅಲಿ, ಇಯಾನ್ ಮಾರ್ಗನ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಮಾರ್ಕ್ ವುಡ್

Story first published: Thursday, November 11, 2021, 9:54 [IST]
Other articles published on Nov 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+