ಆತ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ಜೊತೆಗೆ ಪ್ರಯಾಣಿಸಲೇಬೇಕು: ಕೆವಿನ್ ಪೀಟರ್ಸನ್ ಹೇಳಿದ್ದು ಯಾರಿಗೆ?
ಜೂನ್1 ರಿಂದ ಶುರುವಾಗುತ್ತಿರುವ 2024ರ ಟಿ20 ವಿಶ್ವಕಪ್ ಟೂರ್ನಿಗೆ ಜಗತ್ತಿನ 20 ತಂಡಗಳು ಸಜ್ಜಾಗಿವೆ. ಹಾಗಿಯೇ ತಂಡವನ್ನು ಬಲಿಷ್ಠವಾಗಿ ಕಟ್ಟುವ ಕಡೆ ಗಮನನ ಹರಿಸಿವೆ. ಟೀಮ್ ಇಂಡಿಯಾ ಕೂಡ 2024ರ ಟಿ20 ವಿಶ್ವಕಪ್‌ಗೆ ಸಜ್ಜಾಗುತ್ತಿದೆ.
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕೆಲವು ಟೀಮ್ ಇಂಡಿಯಾ ಆಟಗಾರರನ್ನು ಹೊರೆತುಪಡೆಸಿದರೆ, ಬಹುತೇಕ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಜೊತೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಮನ ಸೆಳೆದಿದ್ದಾರೆ.

ಈ ಆಟಗಾರರ ಪೈಕಿ ಇದೀಗ ಕೇವಲ ಒಂದು ಹೆಸರು ಜೋರಾಗಿ ಕೇಳಿ ಬರುತ್ತಿದೆ. ಹಲವು ಪ್ರತಿಷ್ಠಿತ ಟೂರ್ನಿಗಳಿಂದ ಅವಕಾಶ ಸಿಗದೆ ದೂರ ಉಳಿದಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು 2024ರ ಟಿ20 ವಿಶ್ವಕಪ್‌ನ ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ದಿಗ್ಗಜರು ಬಿಸಿಸಿಗೆ ಮನವಿ ಮಾಡಿದ್ದಾರೆ.
ಅದರಂತೆ ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಕೆವಿನ್ ಪೀಟರ್ಸನ್ ಸಂಜು ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಯುವ 2024ರ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ಜೊತೆಗೆ ಸಂಜು ಪ್ರಯಾಣಿಸಲೇಬೇಕು. ಒಂದು ವೇಳೆ ನಾನು ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಇದ್ದಿದರೆ ಸಂಜು ನನ್ನು ಮೊದಲಿಗೆ ಆಯ್ಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಸಿಸಿಐಗೆ ಸಂಜು ಸೆಲೆಕ್ಟ್ ಮಾಡುವಂತೆ ಆಗ್ರಹಿಸಿದ್ದಾರೆ.
ಐಪಿಎಲ್‌ನಲ್ಲಿ ಸಂಜು ಓಟ :
ಐಪಿಎಲ್ 2024ರಲ್ಲಿ ಸಂಜು ಸ್ಯಾಮ್ಸನ್ ಮುನ್ನೆಡೆಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್‌ಗೆ ಹೆಜ್ಜೆ ಇಟ್ಟಿದೆ. ನಾಯಕನಾಗಿ ಸಂಜು ಹೆಚ್ಚು ರನ್ ಹೊಡೆಯುವ ಈ ಋತುವಿನಲ್ಲಿ ಅಬ್ಬರಿಸುತ್ತಿದ್ದಾರೆ. ಸಂಜು ಆಡಿರುವ 9 ಪಂದ್ಯಗಳಿಂದ 385 ರನ್ ಹೊಡೆದಿದ್ದಾರೆ. ಇದರಲ್ಲಿ ನಾಲ್ಕು ಅರ್ಕಷಕ ಅರ್ಧಶತಕ ಕೂಡಿದ್ದು, ಅಜೇಯ 82* ರನ್ ಅವರ ಬೆಸ್ಟ್ ಸ್ಕೋರ್ ಆಗಿದೆ. ಜೊತೆಗೆ ಅತಿ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ ಸಂಜು ಎರಡನೇ ಸ್ಥಾನದಲ್ಲಿದ್ದಾರೆ.
ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ 2024ರ 44ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 196 ರನ್‌ಗಳ ಗುರಿ ನೀಡಿತ್ತು. ಲಕ್ನೋ ಪರ ನಾಯಕ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದರು.
ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡವು 19 ಓವರ್‌ಗೆ 3 ವಿಕೆಟ್ ಕಳೆದುಕೊಂಡು 199 ರನ್ ಗಳಿಸುವ ಮೂಲಕ ಅಬ್ಬರದ ಗೆಲುವು ಸಾಧಿಸಿತು. ಈ ಮೂಲಕ ರಾಜಸ್ಥಾನ್ ಬಹುತೇಕ ಪ್ಲೇ ಆಫ್‌ಗೆ ಹತ್ತಿರವಾಗಿದ್ದು, ಒಂದು ಹೆಜ್ಜೆ ಹಿಂದಿದೆ. ರಾಜಸ್ಥಾನ್ ಪರ ನಾಯಕ ಸಂಜು ಅಜೇಯ 71 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications