For Quick Alerts
ALLOW NOTIFICATIONS  
For Daily Alerts
 

T20 World Cup: ಮಾಸ್ಟರ್‌ ಪ್ಲ್ಯಾನ್‌ ಮಾಡಿರುವ ಬಿಸಿಸಿಐ: ಮೊದಲೇ ನ್ಯೂಯಾರ್ಕ್‌ಗೆ ಕಳುಹಿಸುವ ಯೋಜನೆ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ ಸೋಲನ ಬಳಿಕ, ಟೀಮ್ ಇಂಡಿಯಾ ವೆಸ್ಟ್‌ ಇಂಡೀಸ್ ಹಾಗೂ ಅಮೆರಲದಲ್ಲಿ ನಡೆಯುವ ಟಿ20 ವಿಶ್ವಕಪ್ ಮೇಲೆ ಕಣ್ಣು ನೆಟ್ಟಿದೆ. ಸುಮಾರು 13 ವರ್ಷಗಳಿಂದ ಟೀಮ್ ಇಂಡಿಯಾವನ್ನು ಕಾಡಿದ್ದ ವಿಶ್ವಕಪ್‌ನ್ನು ತನ್ನ ಅಂಗಳದಲ್ಲಿ ಕಟ್ಟಿ ಹಾಕಲು ಪ್ಲ್ಯಾನ್ ಮಾಡಿಕೊಡಿದೆ.

ಈ ವರ್ಷದ ಜೂನ್‌ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. T20 ವಿಶ್ವಕಪ್ 2024 ಅನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆಯೋಜಿಸಲಿದೆ. ಈ ಟೂರ್ನಿ ಜೂನ್ 2ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿದೆ. ಅದೇ ಸಮಯದಲ್ಲಿ, ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಬಿಸಿಸಿಐ ವಿಶೇಷ ಯೋಜನೆ ರೂಪಿಸುತ್ತಿದೆ.

T20 World Cup: Master planned by BCCI: Plan to send to New York early

ಟಿ20 ವಿಶ್ವಕಪ್‌ಗಾಗಿ ಕೆಲವು ಆಟಗಾರರನ್ನು ಮೊದಲು ನ್ಯೂಯಾರ್ಕ್‌ಗೆ ಕಳುಹಿಸಬಹುದು. ಐಪಿಎಲ್ ಪ್ಲೇ ಆಫ್‌ಗಳಿಗೆ ಅರ್ಹತೆ ಪಡೆಯಲು ತಂಡಗಳು ವಿಫಲರಾದ ಆಟಗಾರರನ್ನು ಮೊದಲು ನ್ಯೂಯಾರ್ಕ್‌ಗೆ ಕಳುಹಿಸಬಹುದು ಎಂದು ಯೋಜನೆ ರೂಪಿಸಿಕೊಂಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಪ್ಲೇ ಆಫ್‌ಗೆ ಅರ್ಹತೆ ಪಡೆಯದ ಐಪಿಎಲ್ ತಂಡಗಳ ಆಟಗಾರರನ್ನು ಮೊದಲು ನ್ಯೂಯಾರ್ಕ್‌ಗೆ ಕಳುಹಿಸಲು ಬಿಸಿಸಿಐ ಪ್ಲ್ಯಾನ್ ಮಾಡಿಕೊಂಡಿದೆ. ಹಾಗಾಗಿ, ಅಂತಹ ಆಟಗಾರರು ಟಿ20 ವಿಶ್ವಕಪ್‌ಗೂ ಮುನ್ನ ಉತ್ತಮ ತಯಾರಿ ಮಾಡಿಕೊಳ್ಳುವ ಅವಕಾಶವನ್ನು ಪಡೆಯಬಹುದು. ಈ ಆಟಗಾರರ ನಂತರ, ಉಳಿದ ಆಟಗಾರರು ಕೆರಿಬಿಯನ್ ದ್ವೀಪಗಳಿಗೆ ತೆರಳುತ್ತಾರೆ. ಐಪಿಎಲ್ ಫೈನಲ್ ಬಳಿಕ ಉಳಿದ ಆಟಗಾರರು ವಿಶ್ವಕಪ್‌ಗೆ ತೆರಳಲಿದ್ದಾರೆ. ಅಂದರೆ, ಕೆಲವು ಆಟಗಾರರು ಐಪಿಎಲ್ ಮುಗಿಯುವ ಮೊದಲು ಹೊರಡಬಹುದು. ಆದರೆ ಅನೇಕ ಆಟಗಾರರು ಪಂದ್ಯಾವಳಿ ಮುಗಿದ ನಂತರ ವಿಶ್ವಕಪ್‌ಗೆ ಆಡಲು ಹೋಗುತ್ತಾರೆ.

T20 World Cup: Master planned by BCCI: Plan to send to New York early

ಭಾರತ ತಂಡವು ಐರ್ಲೆಂಡ್ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುತ್ತದೆ. ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಜೂನ್ 5 ರಂದು ನಡೆಯಲಿದೆ. ಇದಾದ ಬಳಿಕ ಭಾರತ ತಂಡ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಜೂನ್ 9 ರಂದು ನಡೆಯಲಿದೆ. ಈ ತಂಡಗಳ ನಂತರ ಭಾರತವು ಅಮೆರಿಕ ಮತ್ತು ಕೆನಡಾ ವಿರುದ್ಧ ಟೂರ್ನಿಯಲ್ಲಿ ಆಡಲಿದೆ. ಈ ಗುಂಪು-ಹಂತದ ಪಂದ್ಯಗಳ ನಂತರ, ಸೂಪರ್-8 ಪಂದ್ಯಗಳನ್ನು ಆಡಲಾಗುತ್ತದೆ.

ಟೀಮ್ ಇಂಡಿಯಾ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿತ್ತು. 2014ರಲ್ಲಿ ಟೀಮ್ ಇಂಡಿಯಾ ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿತ್ತು.

Story first published: Wednesday, February 14, 2024, 13:26 [IST]
Other articles published on Feb 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+