T20 World Cup: ಟಾಸ್ ಗೆದ್ದ ನಮೀಬಿಯಾ, ಬೌಲಿಂಗ್ ಆಯ್ಕೆ
ಭಾರತ ಹಾಗೂ ನಮೀಬಿಯಾ ನಡುವಣ ಪಂದ್ಯಕ್ಕೆ ಅರುಣ್ ಜೇಟ್ಲಿ ಕ್ರೀಡಾಂಗಣ ಸಜ್ಜಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಟಿ20 ವಿಶ್ವಕಪ್‌ನಲ್ಲಿ ಎರಡನೇ ಗೆಲುವು ದಾಖಲಿಸುವ ಇರಾದೆ, ಭಾರತ ತಂಡದ್ದಾಗಿದೆ. ಈಗಾಗಲೇ ಯುಎಸ್‌ಎ ತಂಡವನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ಭಾರತ, ನಮೀಬಿಯಾ ವಿರುದ್ಧ ಲೀಗ್ ಹಂತದ ಎರಡನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಟಾಸ್ ನಮೀಬಿಯಾ ಪಾಲಾಗಿದ್ದು, ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
ಕೊಲಂಬೊದಲ್ಲಿ ಫೆಬ್ರವರಿ 15 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ ಪಕ್ಕಾ ಮಾಡಿಕೊಳ್ಳುವ ಇರಾದೆ ಹೊಂದಿದೆ. ಹೀಗಾಗಿ ಭಾರತ ಅಳೆದು ತೋಗಿ ಆಟಗಾರರಿಗೆ ಮಣೆ ಹಾಕಿದೆ. ಗಾಯದಿಂದ ಬಳಲುತ್ತಿರುವ ಹಾಗೂ ಫಿಟ್ನೆಸ್ ಸಮಸ್ಯೆಯನ್ನು ಹೊಂದಿರುವ ಆಟಗಾರರತ್ತ ಟೀಮ್ ಮ್ಯಾನೇಜ್ಮೆಂಟ್ ಮುಖ ಸಹ ಮಾಡಿಲ್ಲ.

ಅಭಿಷೇಕ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ಅವರ ಬದಲಿಗೆ ಸಂಜು ಸ್ಯಾಮ್ಸನ್ ಹಾಗೂ ಜಸ್ಪ್ರೀತ್ ಬುಮ್ರಾ ಕಣಕ್ಕೆ ಇಳಿಯಲಿದ್ದಾರೆ. ಅಭಿಷೇಕ್ ಶರ್ಮಾ ಅವರ ಗಾಯ ಇನ್ನು ಸುಧಾರಣೆ ಆಗಿಲ್ಲ. ಹೀಗಾಗಿ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇವರ ಬದಲಿಗೆ ಇವರ ಶೈಲಿಯಲ್ಲೇ ಬ್ಯಾಟಿಂಗ್ ಮಾಡುವ ಸಂಜು ಸ್ಯಾಮ್ಸನ್ ತಂಡ ಸೇರಿಕೊಂಡಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಅಬ್ಬರಿಸಿದ ಮೊಹಮ್ಮದ್ ಸಿರಾಜ್ ಬೆಂಚ್ ಮೇಲೆ ಕೂತಿದ್ದಾರೆ.
ಸೂರ್ಯ ಹೇಳಿದ್ದೇನು?
ಟಾಸ್ ಸೋತರೂ ಪಂದ್ಯವನ್ನು ಗೆಲ್ಲುತ್ತಿರುವುದು ಖುಷಿ ನೀಡಿದೆ. ಇದೊಂದು ದೊಡ್ಡ ಟೂರ್ನಿಯಾಗಿದೆ. ಇಲ್ಲಿ ಇಬ್ಬನಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಇಬ್ಬನಿಯ ನಡುವೆಯೂ ಮೊತ್ತವನ್ನು ಸಮರ್ಥಿಸಿಕೊಳ್ಳುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಭಿಷೇಕ್ ಇನ್ನು ಚೇತರಿಸಿಕೊಂಡಿಲ್ಲ, ಅವರು ಗುಣಮುಖರಾಗಲು ಇನ್ನೂ ಒಂದು ಅಥವಾ ಎರಡು ಪಂದ್ಯಗಳು ಬೇಕಾಗಬಹುದು ಎಂದಿದ್ದಾರೆ.
ಭಾರತ ತಂಡ: ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ನಮೀಬಿಯಾ ತಂಡ: ಲಾರೆನ್ ಸ್ಟೀನ್‌ಕ್ಯಾಂಪ್, ಜಾನ್ ಫ್ರೈಲಿಂಕ್, ಜಾನ್ ನಿಕೋಲ್ ಲೋಫ್ಟಿ-ಈಟನ್, ಗೆರ್ಹಾರ್ಡ್ ಎರಾಸ್ಮಸ್, ಜೆಜೆ ಸ್ಮಿತ್, ಝೇನ್ ಗ್ರೀನ್, ರೂಬೆನ್ ಟ್ರಂಪಲ್ಮನ್, ಮಲನ್ ಕ್ರೂಗರ್, ಬರ್ನಾರ್ಡ್ ಷೋಲ್ಟ್ಜ್, ಬೆನ್ ಶಿಕೊಂಗೊ, ಮ್ಯಾಕ್ಸ್ ಹೈಂಗೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications