For Quick Alerts
ALLOW NOTIFICATIONS  
For Daily Alerts
 

2016ರ ವಿಶ್ವಕಪ್ ಫೈನಲ್‌ನಲ್ಲಿ ಮಾಡಿದ ಆ ತಪ್ಪನ್ನೇ ಇಂಗ್ಲೆಂಡ್ ಮತ್ತೆ ಮಾಡಿತು: ನಾಸಿರ್ ಹುಸೇನ್

T20 World Cup: Nasser Hussain explain the reason for England defeat against New Zealand

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ರೋಚಕ ಹೋರಾಟದಲ್ಲಿ ಸೋಲು ಅನುಭವಿಸಿದೆ. ಗೆಲ್ಲುವ ಆತ್ಮ ವಿಶ್ವಾಸದಲ್ಲಿದ್ದ ಇಂಗ್ಲೆಂಡ್ ತಂಡ ಅಂತಿಮ ಹಂತದಲ್ಲಿ ಎಡವಿ ಸೋಲುವ ಮೂಲಕ ಸೆಮಿ ಫೈನಲ್‌ಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿತ್ತು. ತಂಡದ ಈ ಸೋಲಿನ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಪ್ರರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ತಂಡದ ಸೋಲಿಗೆ ಕಾರಣವಾದ ಅಂಶವನ್ನು ನಾಸಿರ್ ಹುಸೇನ್ ವಿವರಿಸಿದರು.

ಮೊದಲ 15 ಓವರ್‌ಗಳವರೆಗೆ ಇಂಗ್ಲೆಂಡ್ ತಂಡ ಉತ್ತಮವಾಗಿ ನಿಯಂತ್ರಣ ಸಾಧಿಸಿತು. ಅಂತಿಮ ನಾಲ್ಕು ಓವರ್‌ಗಳಲ್ಲಿ ನ್ಯೂಜಿಲೆಂಡ್ ತಂಡದ ಗೆಲುವಿಗೆ 57 ರನ್‌ಗಳ ಅಗತ್ಯವಿತ್ತು. ಆದರೆ ಈ ಸಂದರ್ಭದಲ್ಲಿ ಜಿಮ್ಮಿ ನೀಶಮ್ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಇಂಗ್ಲೆಂಡ್ ಗೆಲುವಿನ ಅವಕಾಶವನ್ನು ಕಸಿದುಕೊಂಡರು. ಜಿಮ್ಮಿ ನೀಶಮ್ ಕೇವಲ 10 ಎಸೆತಗಳಲ್ಲಿ 26 ರನ್‌ಗಳಿಸುವ ಮೂಲಕ ಮಿಂಚುಹರಿಸಿದರು. ಆರಂಬಿಕನಾಗಿ ಕಣಕ್ಕಿಳಿದಿದ್ದ ಮಿಶೆಲ್ ಈ ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಮಿಶೆಲ್ 48 ಎಸೆತಗಳಲ್ಲಿ 73 ರನ್ ಬಾರಿಸಿ ಅಜೇಯವಾಗುಳಿದಿದ್ದರು. ಇ ಇಬ್ಬರು ದಾಂಡಿಗರ ಆಟ ಇಂಗ್ಲೆಂಡ್ ಗೆಲುವಿನ ಅವಕಾಶವನ್ನು ಸಂಪೂರ್ಣವಾಗಿ ಕಸಿದುಕೊಂಡಿತ್ತು.

ಇಂಗ್ಲೆಂಡ್ ತಮಡದ ಈ ಸೋಲಿಗೆ ಡೆತ್ ಓವರ್‌ನಲ್ಲಿ ನೀಡಿದ ಅಸ್ಥಿರ ಪ್ರದರ್ಶನವೇ ಕಾರಣ ಎಂದಿದ್ದಾರೆ ನಾಸಿರ್ ಹುಸೇನ್. ಅಲ್ಲದೆ ಇದು 2016ರ ವಿಶ್ವಕಪ್‌ನ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೀಡಿದ ಬೌಲಿಂಗ್ ಪ್ರದರ್ಶನವನ್ನು ನೆನಪಿಸಿತು ಎಂಬುದಾಗಿ ಕೂಡ ನಾಸಿರ್ ಹುಸೇನ್ ಹೇಳಿಕೊಂಡಿದ್ದಾರೆ. "ಈ ಹಿಂದಿನ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ದುಬಾರಿಯಾಗಿದ್ದ ಡೆತ್ ಓವರ್‌ ಇಲ್ಲಿಯೂ ದುಬಾರಿಯಾಗಿ ಪರಿಣಮಿಸಿತ್ತು. ಅಂದು ಬೆನ್ ಸ್ಟೋಕ್ಸ್ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಸಿಡಿದಿತ್ತು. ಬುಧವಾರ ರಾತ್ರಿ ಕೂಡ ಅದೇ ರೀತಿಯ ಪ್ರದರ್ಶನ ಮರುಕಳಿಸಿತು" ಎಂದು ನಾಸಿರ್ ಹುಸೇನ್ 'ಡೈಲಿ ಮೇಲ್‌' ಗೆ ಬರೆದ ಅಂಕಣದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಐದು ವರ್ಷಗಳ ಹಿಂದೆ ಕ್ರಿಸ್ ಜೋರ್ಡನ್ ಮಹತ್ವದ 19 ಓವರ್‌ನಲ್ಲಿ ಕೇವಲ 8 ರನ್‌ಗಳನ್ನು ನೀಡಿದ್ದರು. ಆದರೆ ಬೆನ್ ಸ್ಟೋಕ್ಸ್ ಎಸೆದ ಅಂತಿಮ ಓವರ್‌ನಲ್ಲಿ ಕಾರ್ಲೋಸ್ ಬ್ರಾಥ್‌ವೇಟ್ ಸತತ ನಾಲ್ಕು ಸಿಕ್ಸರ್ ಬಾರಿಸುವ ಮೂಲಕ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಆದರೆ ಬುಧವಾರ ನಡೆದ ಪಂದ್ಯದಲ್ಲಿ ಜಿಮ್ಮಿ ನೀಶಮ್ ಕ್ರಿಸ್ ಜೋರ್ಡನ್ ಎಸೆದ 17ನೇ ಓವರ್‌ನಲ್ಲಿ ಭರ್ಜರಿ 23 ರನ್‌ಗಳನ್ನು ಗಳಿಸಿದ್ದರು. ಈ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿದಿತ್ತು. ಇದು ಪಂದ್ಯಕ್ಕೆ ದೊಡ್ಡ ತಿರುವು ನೀಡಿತು.

ಆದರೆ ನಂತರ ರಶೀದ್ ಎಸೆತದಲ್ಲಿ ಜಿಮ್ಮಿ ನೀಶಮ್ ನಾಯಕ ಇಯಾನ್ ಮಾರ್ಗನ್‌ಗೆ ಕ್ಯಾಚ್ ನೀಡಿ ನಿರ್ಗಮಿಸುವ ಮೂಲಕ ಇಂಗ್ಲೆಂಡ್ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸುವ ಸೂಚನೆ ನೀಡಿತು. ಆದರೆ ಕ್ರೀಸ್‌ನಲ್ಲಿದ್ದ ಮಿಶೆಲ್ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಎಸೆತದಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸುವ ಮೂಲಕ ಒಂದು ಓವರ್ ಬಾಕಿಯಿರುವಂತೆಯೇ ಗೆಲುವನ್ನು ಸಾರಿದರು.

"ಜೋರ್ಡನ್ ಅವರ ಡೆತ್ ಬೌಲಿಂಗ್ ಈ ಹಿಂದಿನಂತೆ ಮೊನಚಾಗಿಲ್ಲ. ನಾಯಕ ಇಯಾನ್ ಮಾರ್ಗನ್ ಯಾರ್ಕರ್ ದಾಳಿಯ ಮೂಲಕ ನಿಯಂತ್ರಣ ಸಾಧಿಸಲು ಈ ಯೋಜನೆ ಮಾಡಿಕೊಂಡಿರಬಹುದು. ಆದರೆ ಅದು ಯಶಸ್ವಿಯಾಗಲಿಲ್ಲ" ಎಂದು ನಾಸಿರ್ ಹುಸೇನ್ ಬರೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 166 ರನ್‌ಗಳನ್ನು ಗಳಿಸಿತ್ತು. ಇದನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 19 ಈವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಈ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದೆ.

Story first published: Thursday, November 11, 2021, 17:19 [IST]
Other articles published on Nov 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+