
ಭರ್ಜರಿ ಆರಂಭ ಪಡೆದ ನ್ಯೂಜಿಲೆಂಡ್
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಫಿನ್ ಅಲೆನ್ ಆಸಿಸ್ ಬೌಲರ್ಗಳ ವಿರುದ್ಧ ಆರಂಭದಲ್ಲಿಯೇ ಸಿಡಿಯಲು ಆರಂಭಿಸಿದ್ದರು. ಬೌಂಡರಿ ಸಿಕ್ಸರ್ಗಳನ್ನು ಬಾರಿಸುತ್ತಾ ಸಾಗಿದ ಫಿನ್ ಅಲೆನ್ ಕೇವಲ 4 ಓವರ್ಗಳಲ್ಲಿ ತಂಡ 56 ರನ್ ಗಳಿಸಲು ಕಾರಣವಾದರು. ಬಳಿಕ 16 ಎಸೆತಗಳಲ್ಲಿ 42 ರನ್ಗಳಿಸಿ ಅಲೆನ್ ವಿಕೆಟ್ ಕಳೆದುಕೊಂಡಿದ್ದರು. ನಂತರ ಇನ್ನಿಂಗ್ಸ್ ಕಟ್ಟುವ ಜವಾಬ್ಧಾರಿಯನ್ನು ಕಾನ್ವೆ ವಹಿಸಿಕೊಂಡರು.

201 ರನ್ಗಳ ಬೃಹತ್ ಗುರಿ
ಜವಾಬ್ಧಾರಿಯುತ ಪ್ರದರ್ಶನ ನೀಡಿದ ಕಾನ್ವೆ ಕಿವೀಸ್ ಪರವಾಗಿ ಅದ್ಭುತ ಪ್ರದರ್ಶನ ನೀಡಿದರು. ಅಂತಿಮ ಹಂತದವರೆಗೂ ಅಜೇಯವಾಗುಳಿದ ಅವರು 58 ಎಸೆತಗಳಲ್ಲಿ ಅಜೇಯ 92 ರನ್ಗಳನ್ನು ಗಳಿಸಿದರು. ಇನ್ನು ಕೊನೇಯ ಹಂತದಲ್ಲಿ ಜಿಮ್ಮಿ ನೀಶಮ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು 13 ಎಸೆತಗಳಲ್ಲಿ 26 ರನ್ಗಳಿಸಿ ತಂಡದ ಮೊತ್ತ 200ಕ್ಕೆ ಏರಲು ಕಾರಣವಾದರು. ಆಸ್ಟ್ರೇಲಿಯಾ ಪರವಾಗಿ ಹೇಜಲ್ವುಡ್ ಮಾತ್ರ ಎರಡು ವಿಕೆಟ್ ಕಬಳಿಸಲು ಯಶಸ್ವಿಯಾದರೆ ಒಂದು ವಿಕೆಟ್ ಆಡಂ ಜಂಪಾ ಪಾಲಾಯಿತು.

ಆರಂಭದಿಂದಲೇ ಮುಗ್ಗರಿಸಿದ ಆಸಿಸ್
ನ್ಯೂಜೊಲೆಂಡ್ ನೀಡಿ ಬೃಹತ್ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ಆಘಾತಕ್ಕೆ ಒಳಗಾಯಿತು. 5 ರನ್ಗಳಿಸಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾದ ಕುಸಿತ ಆರಂಭವಾಯಿತು. ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಪ್ಯಾಟ್ ಕಮ್ಮಿನ್ಸ್ ಮಾತ್ರವೇ ಆಸ್ಟ್ರೇಲಿಯಾ ತಂಡದಲ್ಲಿ 20ಕ್ಕೂ ಹೆಚ್ಚು ರನ್ಗಳಿಸಿದ ಆಟಗಾರರು ಎನಿಸಿದರು. ಈ ಮೂಲಕ ಯಾವ ಆಟಗಾರ ಕೂಡ ಕಿವೀಸ್ ತಂಡದ ಶಿಸ್ತಿನ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಲು ಸಫಲವಾಗಲಿಲ್ಲ. ಅಂತಿಮವಾಗಿ 17.1 ಓವರ್ನಲ್ಲಿ 111 ರನ್ಗಳಿಸಿ ಆಸ್ಟ್ರೇಲಿಯಾ ಆಲೌಟ್ ಆಗಿದೆ. ಈ ಮೂಲಕ ಮೊದಲ ಪಂದ್ಯದಲ್ಲಿಯೇ ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಇತ್ತಂಡಗಳ ಆಡುವ ಬಳಗ ಹೀಗಿದೆ
ನ್ಯೂಜಿಲೆಂಡ್ ಪ್ಲೇಯಿಂಗ್ XI: ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಬೆಂಚ್: ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಮಾರ್ಟಿನ್ ಗಪ್ಟಿಲ್, ಮೈಕೆಲ್ ಬ್ರೇಸ್ವೆಲ್
ಆಸ್ಟ್ರೇಲಿಯಾ ಆಡುವ ಬಳಗ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್
ಬೆಂಚ್: ಸ್ಟೀವನ್ ಸ್ಮಿತ್, ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಕ್ಯಾಮೆರಾನ್ ಗ್ರೀನ್


Click it and Unblock the Notifications












