For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ: ಅಕ್ಷರ್ ಪಟೇಲ್ ಸ್ಥಾನಕ್ಕೆ ಶಾರ್ದೂಲ್ ಆಯ್ಕೆ

T20 world cup: One change in Indias World Cup squad: Shardul Thakur replaces Axar Patel

ಟೀಮ್ ಇಂಡಿಯಾದ ಟಿ20 ವಿಶ್ವಕಪ್ ತಂಡದಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಲಾಗಿದೆ. ಮುಂದಿನ ಭಾನುವಾರದಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಈಗಾಗಲೇ ಟೀಮ್ ಇಂಡಿಯಾದ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿತ್ತು. ಇದರಲ್ಲಿ ಬದಲಿ ಆಟಗಾರನಾಗಿದ್ದ ಶಾರ್ದೂಲ್ ಠಾಕೂರ್‌ಗೆ ಅಂತಿಮ 15ರ ತಂಡದಲ್ಲಿ ಸ್ಥಾನ ನೀಡಲಾಗಿದೆ. 15 ಸದಸ್ಯರ ತಂಡದಲ್ಲಿದ್ದ ಅಕ್ಷರ್ ಪಟೇಲ್ ಅವರನ್ನು ಮೀಸಲು ಆಟಗಾರನಾಗಿ ಉಳಿಸಿಕೊಳ್ಳಲಾಗಿದೆ.

ಟೀಮ್ ಇಂಡಿಯಾದ ಆಟಗಾರರಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಕೆಲ ಆಟಗಾರರು ನೀಡಿದ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ ಬಿಸಿಸಿಐ ಆಯ್ಕೆ ಸಮಿತಿ ಈ ಬದಲಾವಣೆ ಮಾಡುವ ನಿರೀಕ್ಷೆಯಿತ್ತು. ಅದರಲ್ಲೂ ಸ್ಪಿನ್ನರ್ ಯುಜುವೇಂದ್ರ ಚಾಹಲ್, ವೇಗಿ ಹರ್ಷಲ್ ಪಟೇಲ್‌ಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ಜೋರಾಗಿ ಕೇಳಿ ಬರುತ್ತಿತ್ತು.

ಆದರೆ ಬಿಸಿಸಿಐ ಈ ರೀತಿಯ ಬದಲಾವಣೆಗೆ ಕೈ ಹಾಕಿಲ್ಲ. ಆದರೆ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿರುವ ಆಟಗಾರರಲ್ಲಿ ಮೀಸಲು ಆಟಗಾರನಾಗಿದ್ದ ಶಾರ್ದೂಕ್ ಠಾಕೂರ್‌ಗೆ ಚುಟುಕು ವಿಶ್ವಕಪ್‌ನಲ್ಲಿ ಸ್ಥಾನ ನೀಡುವ ನಿರ್ಧಾರ ಮಾಡಲಾಗಿದೆ. ಆದರೆ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಾ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ಅಕ್ಷರ್ ಪಟೇಲ್‌ಗೆ ಮೀಸಲು ಆಟಗಾರನ ಸ್ಥಾನ ನಿಡಲಾಗಿದೆ. ಅಚ್ಚರಿಯೆಂದರೆ ಸ್ಪಿನ್ನರ್ ಆಲ್‌ರೌಂಡರ್ ಬದಲಿಗೆ ವೇಗದ ಬೌಲರ್ ಆಲ್‌ರೌಂಡರ್‌ನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ತಂಡದಲ್ಲಿದ್ದದ್ದು ಮೂವರೇ ವೇಗಿಗಳು: ಈ ಮೊದಲು ಪ್ರಕಟಿಸಿದ್ದ ಈ ಬಾರಿಯ ಟಿ20 ವಿಶ್ವಕಪ್‌ನ ತಂಡದ 15 ಸದಸ್ಯರಲ್ಲಿ ಮೂವರು ವೇಗಿಗಳನ್ನು ಮಾತ್ರವೇ ಆಯ್ಕೆ ಮಾಡಲಾಗಿತ್ತು. ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮಶ್ ಶಮಿ ವೇಗಿಗಳಾಗಿ ಆಯ್ಕೆಯಾಗಿದ್ದರು. ಮಧ್ಯಮ ವೇಗದ ಬೌಲರ್ ಆಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸುವ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಹೀಗಾಗಿ ಮತ್ತೋರ್ವ ವೇಗಿಯ ಅಗತ್ಯವನ್ನು ಆಯ್ಕೆ ಮಂಡಳಿ ಗಣನೆಗೆ ತೆಗೆದುಕೊಂಡಿದೆ.

ತಂಡದಲ್ಲಿದ್ದಾರೆ ನಾಲ್ವರು ಸ್ಪಿನ್ನರ್‌ಗಳು: ಇನ್ನು ಈ ಬಾರಿಯ ಟಿ20 ವಿಶ್ವಕಪ್ ಯುಎಇ ಹಾಗೂ ಒಮಾನ್‌ನಲ್ಲಿ ನಡೆಯುತ್ತಿದೆ. ಇಲ್ಲಿ ಸ್ಪಿನ್ ಬೌಲಿಂಗ್ ದಾಳಿ ಉತ್ತಮವಾಗಿ ನಡೆಯುವ ಕಾರಣದಿಂದಾಗಿ ಭಾರತ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರವೀಂದ್ರ ಜಡೇಜಾ, ಆರ್ ಅಶ್ವಿನ್, ರಾಹುಲ್ ಚಾಹರ್ ಹಾಗೂ ವರುಣ್ ಚಕ್ರವರ್ತಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ತಂಡದ ಬಯೋಬಬಲ್‌ನಲ್ಲಿ 8 ಹೆಚ್ಚುವರಿ ಆಟಗಾರರಿಗೆ ಅವಕಾಶ: ಇನ್ನು ಈ ವಿಶ್ವಕಪ್‌ನ ತಂಡದಲ್ಲಿ 8 ಹೆಚ್ಚುವರಿ ಆಟಗಾರರು ಕೂಡ ತಂಡದ ಬಯೋಬಬಲ್‌ನಲ್ಲಿ ಇರಲಿದ್ದಾರೆ. ನೆಟ್ ಬೌಲರ್‌ಗಳಾಗಿ ತಂಡದ ಸಿದ್ಧತೆಗೆ ಈ ಆಟಗಾರರು ಸಹಕಾರವನ್ನು ನೀಡಲಿದ್ದಾರೆ. ಅಂತಾ ಆಟಗಾರರೆಂದರೆ: ಅವೇಶ್ ಖಾನ್, ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್, ಲುಕ್ಮನ್ ಮೇರಿವಾಲಾ, ವೆಂಕಟೇಶ್ ಅಯ್ಯರ್, ಕರ್ಣ್ ಶರ್ಮಾ, ಶಹಬಾಜ್ ಅಹ್ಮದ್ ಮತ್ತು ಕೆ. ಗೌತಮ್.

ತಂಡದ ಬಯೋಬಬಲ್‌ನಲ್ಲಿ 8 ಹೆಚ್ಚುವರಿ ಆಟಗಾರರಿಗೆ ಅವಕಾಶ: ಇನ್ನು ಈ ವಿಶ್ವಕಪ್‌ನ ತಂಡದಲ್ಲಿ 8 ಹೆಚ್ಚುವರಿ ಆಟಗಾರರು ಕೂಡ ತಂಡದ ಬಯೋಬಬಲ್‌ನಲ್ಲಿ ಇರಲಿದ್ದಾರೆ. ನೆಟ್ ಬೌಲರ್‌ಗಳಾಗಿ ತಂಡದ ಸಿದ್ಧತೆಗೆ ಈ ಆಟಗಾರರು ಸಹಕಾರವನ್ನು ನೀಡಲಿದ್ದಾರೆ. ಅಂತಾ ಆಟಗಾರರೆಂದರೆ: ಅವೇಶ್ ಖಾನ್, ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್, ಲುಕ್ಮನ್ ಮೇರಿವಾಲಾ, ವೆಂಕಟೇಶ್ ಅಯ್ಯರ್, ಕರ್ಣ್ ಶರ್ಮಾ, ಶಹಬಾಜ್ ಅಹ್ಮದ್ ಮತ್ತು ಕೆ. ಗೌತಮ್.

ಐಸಿಸಿ ಟಿ 20 ವಿಶ್ವಕಪ್‌ಗೆ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್ , ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್, ಅಕ್ಷರ್ ಪಟೇಲ್

Story first published: Thursday, October 14, 2021, 10:02 [IST]
Other articles published on Oct 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+