ಸುನಿಲ್ ಗವಾಸ್ಕರ್ ಆಟೋಗ್ರಾಫ್ ಪಡೆದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ಐಸಿಸಿ ಟಿ20 ವಿಶ್ವಕಪ್ 2022 ರ ಅಭಿಯಾನದ ಮೊದಲು ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರನ್ನು ಭೇಟಿಯಾದರು. ಪಾಕಿಸ್ತಾನ ಕ್ರಿಕೆಟ್ ಟ್ವಿಟರ್‌ನಲ್ಲಿ ಆಧುನಿಕ ದಿನದ ಶ್ರೇಷ್ಠ ಬ್ಯಾಟರ್ ಬಾಬರ್ ಅಜಂ ಮತ್ತು ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಸುನಿಲ್ ಗವಾಸ್ಕರ್ ಪರಸ್ಪರ ಮಾತುಕತೆ ನಡೆಸುತ್ತಿರುವ ಕ್ಲಿಪ್ ಅನ್ನು ಪೋಸ್ಟ್ ಮಾಡಿದೆ.
ಅಕ್ಟೋಬರ್ 15 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಜಮ್‌ಗೆ ಗವಾಸ್ಕರ್ ಶುಭಾಶಯ ಕೋರಿದ್ದಾರೆ. ಬಾಬರ್ ಅಜಂಗೆ ನಿಮ್ಮ ಹುಟ್ಟುಹಬ್ಬ ಇಂದು ಅಥವಾ ನಿನ್ನೆ ಎಂದು ಕೇಳಿ ಖಚಿತಪಡಿಸಿಕೊಂಡರು. ಸುನಿಲ್ ಗವಾಸ್ಕರ್ ಪ್ರಶ್ನೆಗೆ ಉತ್ತರಿಸಿದ ಬಾಬರ್, ನಿನ್ನೆ ಹುಟ್ಟುಹಬ್ಬ ಇತ್ತು ಎಂದು ಹೇಳಿದರು.
ನಂತರ ಗವಾಸ್ಕರ್, ಬಾಬರ್ ಅಜಂ ಜೊತೆ ಕ್ರಿಕೆಟ್ ಬಗ್ಗೆ ಮಾತನಾಡಿದರು. ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಗವಾಸ್ಕರ್ ಬಾಬರ್ ಅಜಂ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಟಿಂಗ್ ಬಗ್ಗೆ ಹಲವು ಸಲಹೆಗಳನ್ನು ನೀಡಿದರು. "ನಿಮ್ಮ ಹೊಡೆತದ ಆಯ್ಕೆ ಉತ್ತಮವಾಗಿದ್ದರೆ, ಬೇರೆ ಯಾವುದೇ ಸಮಸ್ಯೆ ಇಲ್ಲ" ಎಂದು ಹೇಳಿದ್ದಾರೆ. ಶಾದಾಬ್ ಖಾನ್ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಗವಾಸ್ಕರ್ ಬಳಿ ಆಟೋಗ್ರಾಫ್ ಪಡೆದ ಬಾಬರ್
ಸುನಿಲ್ ಗವಾಸ್ಕರ್ ಬಳಿ ಪಾಕ್ ನಾಯಕ ಬಾಬರ್ ಅಜಂ ಆಟೋಗ್ರಾಫ್ ಕೇಳಿದರು. ಗವಾಸ್ಕರ್, ಬಾಬರ್ ಅಜಂಗೆ ಕ್ಯಾಪ್‌ಗೆ ಸಹಿ ಮಾಡಿ ನೀಡಿದರು. ನಂತರ ಇಬ್ಬರೂ ಫೋಟೋಗೆ ಫೋಸ್ ನೀಡಿದರು. ಇಬ್ಬರು ಶ್ರೇಷ್ಠ ಬ್ಯಾಟರ್ ಗಳ ಭೇಟಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2022 ರ ಸೂಪರ್ 12 ಹಂತವು ಅಕ್ಟೋಬರ್ 22 ರಂದು ಪ್ರಾರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನವು ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಮುಖಾಮುಖಿಯಾಗಲಿದೆ.

ಎಂಸಿಜಿಯಲ್ಲಿ ರೋಚಕ ಪಂದ್ಯ ಸಾಧ್ಯತೆ
ಈ ಎರಡು ತಂಡಗಳು 2021 ರಲ್ಲಿ ಕಳೆದ ಬಾರಿ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾದಾಗ, ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಕೇವಲ 52 ಎಸೆತಗಳಲ್ಲಿ ಅಜೇಯ 68 ರನ್ ಗಳಿಸುವ ಮೂಲಕ ಬಾಬರ್ ಆಜಮ್ ಮಿಂಚಿದ್ದರು. ಅದೇ ಆಟವನ್ನು ಆಡಲು ಪಾಕಿಸ್ತಾನ ಕಾಯುತ್ತಿದೆ. ವಿಶ್ವಕಪ್ ಪಂದ್ಯದಲ್ಲಿ ಎರಡನೇ ಬಾರಿಗೆ ಭಾರತವನ್ನು ಸೋಲಿಸಲು ತಂತ್ರ ರೂಪಿಸುತ್ತಿದೆ.
ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ, ಸೋಮವಾರದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಚಾಂಪಿಯನ್ನರಾದ ಆರನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದರು.
ಟೀಂ ಇಂಡಿಯಾ ಮೊದಲನೇ ಅಭ್ಯಾಸ ಪಂದ್ಯದಲ್ಲಿ ಗೆದ್ದಿರುವುದು ಸಾಕಷ್ಟು ವಿಶ್ವಾಸ ನೀಡಿದೆ. ಅಲ್ಲದೆ, ಬೌಲಿಂಗ್ ಬಗ್ಗೆ ಇದ್ದ ಚಿಂತೆಯೂ ಕೂಡ ಶಮಿ ಆಗಮನದಿಂದ ದೂರವಾಗಿದೆ. ಅಕ್ಟೋಬರ್ 23ರಂದು ಉಭಯ ತಂಡಗಳ ನಡುವೆ ರೋಕ ಪಂದ್ಯ ನಡೆಯುತ್ತದೆ ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಏಷ್ಯಾ ಕಪ್ 2022 ರಲ್ಲಿ ಎರಡು ಏಷ್ಯಾದ ದೇಶಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಭಾರತ ಗೆದ್ದರೆ, ಎರಡನೇ ಮುಖಾಮುಖಿಯಲ್ಲಿ ಪಾಕಿಸ್ತಾನ ಗೆದ್ದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications