ಶ್ರೀಲಂಕಾದಲ್ಲಿ ಇಂಗ್ಲೆಂಡ್ ಪರ ಆರ್‌ಸಿಬಿ ಸ್ಟಾರ್ ಫಿಲ್ ಸಾಲ್ಟ್ ಭರ್ಜರಿ ಅರ್ಧಶತಕ
Phil Salt: ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಗ್ರೂಪ್ 2ರ ಇಂಗ್ಲೆಂಡ್ - ಶ್ರೀಲಂಕಾ ತಂಡಗಳ ನಡುವೆ ಸೂಪರ್ 8 ಪಂದ್ಯ ನಡೆಯುತ್ತಿದೆ. ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಿಗೆ 9 ವಿಕೆಟ್ ಕಳೆದುಕೊಂಡು 146 ರನ್‌ಗಳನ್ನು ಕಲೆಹಾಕಿತು. ಇದರಲ್ಲಿ ಬಹುತೇಕ ರನ್‌ಗಳ ಪಾಲು ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಅವರದ್ದೇ ಆಗಿದೆ. ಈ ಗುರಿ ತಲುಪುವಲ್ಲಿ ವಿಫಲವಾಗುವ ಮೂಲಕ ಶ್ರೀಲಂಕಾ ಸೋಲನುಭವಿಸಿದೆ.
ಇಂಗ್ಲೆಂಡ್ ಆರಂಭದಲ್ಲೇ ಬಿಗ್ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೂ, ಆರಂಭಿಕರಾಗಿ ಕಣಕ್ಕಿಳಿದಿದ್ದ ಫಿಲ್ ಸಾಲ್ಟ್ ಅವರು ತಾಳ್ಮೆ ಕಳೆದುಕೊಳ್ಳದೆ ಸ್ಫೋಟಕ ಇನ್ನಿಂಗ್ಸ್ ಆಡಿ ಅರ್ಧ ಶತಕ ಬಾರಿಸಿ ತಂಡಕ್ಕೆ ನೆರವಾದರು. 40 ಎಸೆತಗಳಲ್ಲಿ 6 ಬೌಂಡರಿ, 2 ಸಕ್ಸ್ ಸಹಿತ 62 ರನ್‌ಗಳನ್ನು ಕಲೆಹಾಕಿ ವಿಕೆಟ್ ಒಪ್ಪಿಸಿದರು.

ಆರ್‌ಸಿಬಿ ಆಟಗಾರನ ಮಿಂಚಿನ ಆಟ
ಬೆಂಗಳೂರು ತಂಡದಲ್ಲಿ ಇವರು ಹೊಡಿಬಡಿ ದಾಂಡಿಗ ಅಂತಲೇ ಫೇಮಸ್ ಆಗಿದ್ದಾರೆ. ಹಾಗೆಯೇ ಇಂದು ತಮ್ಮ ದೇಶ ಇಂಗ್ಲೆಂಡ್ ಪರ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಇನ್ನೂ ಇವರು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿದ್ದಾರೆ. ಈಗಾಗಲೇ ಕಳೆದ ಬಾರಿಯ ಸೀಸನ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಇವರು ಎದುರಾಳಿ ಬೌಲರ್ ಯಾರೇ ಆಗಿರಲಿ ಭಯವಿಲ್ಲದೆ ಬ್ಯಾಟ್ ಬೀಸಿ ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿದು ಬೆಂಗಳೂರು ಅಭಿಮಾನಿಗಳ ಮನೆ ಮಾತಾಗಿದ್ದಾರೆ.
ಯಾರು ಎಷ್ಟು ರನ್ ಬಾರಿಸಿದರು?
ಇಂಗ್ಲೆಂಡ್ ಪರ ಬ್ಯಾಟ್ ಬೀಸಿದ, ಫಿಲ್ ಸಾಲ್ಟ್ 62(40), ಸ್ಯಾಮ್ ಕರನ್ 11(11), ವಿಲ್ ಜಾಕ್ಸ್ 21(14), ಹ್ಯಾರಿ ಬ್ರೂಕ್ 14(7), ಜೇಮಿ ಓವರ್‌ಟನ್ ಅಜೇಯ 10(10) ಇವರನ್ನು ಬಿಟ್ಟರೆ ಮತ್ತೆ ಯಾರೂ ಕೂಡ ಎರಡಂಕಿ ದಾಡಲಿಲ್ಲ. ಜೋಶ್ ಬಟ್ಲರ್ 7(14), ಜಾಕೋಬ್ ಬೆಥೆಲ್ 3(4), ಟಾಮ್ ಬ್ಯಾಂಟನ್ (7), ಲಿಯಾಮ್ ಡವ್ಸೊನ್ 6(11), ಆದಿಲ್ ರಶಿದ್ ಅಜೇಯ 1(1) ರನ್‌ಗಳನ್ನು ಕಲೆಹಾಕಿ ತಂಡ ಮೊತ್ತವನ್ನು 140ರ ಗಡಿ ದಾಟಿಸಿದರು.
ಬಳಿಕ ಬ್ಯಾಟ್ ಬೀಸಿದ ಶ್ರೀಲಂಕಾ 16.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಬರೀ 95 ರನ್‌ಗಳನ್ನು ಮಾತ್ರ ಕಲೆಹಾಕಿ ಇಂಗ್ಲೆಂಡ್ ವಿರುದ್ಧ 51 ರನ್‌ಗಳಿಂದ ಸೋಲು ಕಂಡಿತು. ಇಂಗ್ಲೆಂಡ್ ತಂಡ ಬ್ಯಾಟಿಂಗ್ ಅಷ್ಟೇ ಅಲ್ಲದೆ, ಬೌಲಿಂಗ್‌ನಲ್ಲೂ ಕೂಡ ಉತ್ತಮ ಪ್ರದರ್ಶನ ತೋರಿತು. ಇದೇ ಇಂಗ್ಲೆಂಡ್ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಬೆದರಿದ ಶ್ರೀಲಂಕಾ
ಇಂಗ್ಲೆಂಡ್ ಪರ ಬೌಲಿಂಗ್ ಮಾಡಿದ ವಿಲ್ ಜಾಕ್ಸ್ ಮೂರು ವಿಕೆಟ್ ಕಬಳಿಸಿದರೆ, ಜೋಫ್ರಾ ಆರ್ಚರ್, ಲಿಯಾಮ್ ಡವ್ಸೊನ್ ಹಾಗೂ ಆದಿಲ್ ರಶಿದ್ ತಲಾ ಎರಡು ವಿಕೆಟ್ ಪಡೆದರೆ, ಜೇಮಿ ಓವರ್‌ಟನ್ ಒಂದು ವಿಕೆಟ್ ಕಬಳಿಸಿ ಶ್ರೀಲಂಕಾವನ್ನು 100ರೊಳಗೆ ಅಂದರೆ, 95 ರನ್‌ಗಳಿಗೆ ಕಟ್ಟಿಹಾಕಿದರು.
ಇಂಗ್ಲೆಂಡ್ ಪ್ಲೇಯಿಂಗ್ 11
ಫಿಲ್ ಸಾಲ್ಟ್, ಜೋಶ್ ಬಟ್ಲರ್ (ವಿಕೆಟ್ ಕೀಪರ್), ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್ (ನಾಯಕ), ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಮಿ ಓವರ್‌ಟನ್, ಲಿಯಾಮ್ ಡವ್ಸೊನ್, ಜೋಫ್ರಾ ಆರ್ಚರ್, ಆದಿಲ್ ರಶಿದ್.
ಶ್ರೀಲಂಕಾ ಪ್ಲೇಯಿಂಗ್ 11
ಪಾತುಮ್ ನಿಸ್ಸಾಂಕ, ಕಾಮಿಲ್ ಮಿಶಾರ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಪವನ್ ರತ್ನಾಯಕೆ, ದುನಿತ್ ವೆಲ್ಲಲಾಗೆ, ಕಾಮಿಂಡು ಮೆಂಡಿಸ್, ದಾಸುನ್ ಶನಕ (ನಾಯಕ), ದುಶನ್ ಹೇಮಂತ , ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications