For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಆಟಗಾರನ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ: ಜಿಂಬಾಬ್ವೆ ಭರ್ಜರಿ ಗೆಲುವು

Zimbabwe vs Australia: ಟಿ20 ವಿಶ್ವಕಪ್‌ ಕ್ರಿಕೆಟ್‌ 19ನೇ ಪಂದ್ಯದಲ್ಲಿ ಜಿಂಬಾಬ್ವೆಯು ಬಲಿಷ್ಠ ಆಸ್ಟ್ರೇಲಿಯಾವನ್ನು ಹೀನಾಯವಾಗಿ ಸೋಲಿಸಿ ಐತಿಹಾಸಿಕ ದಾಖಲೆ ಮಾಡಿದೆ. ಈ ಗೆಲುವಿಗೆ ಪ್ರಮುಖ ಕಾರಣವೇ ಆರ್‌ಸಿಬಿ ಆಟಗಾರ. ಹಾಗಾದ್ರೆ, ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಜಿಂಬಾಬ್ವೆ ನಿಗದಿತ 20 ಓವರ್‌ಗಳಲ್ಲಿ 169 ರನ್‌ಗಳನ್ನು ಕಲೆಹಾಕಿತು. ಜಿಂಬಾಂಬೆ ಪರ ಬ್ರಿಯಾನ್ ಬೆನ್ನೆಟ್ ಸ್ಫೋಟಕ ಬ್ಯಾಟಿಂಗ್‌ ಆಡಿ ಅರ್ಧ ಶತಕ ಸಿಡಿಸಿದರೆ, ಮತ್ತೊಂದೆಡೆ ಆರ್‌ಸಿಬಿ ಆಟಗಾರ ಬ್ಲೆಸಿಂಗ್ ಮುಜರಬಾನಿ ಮಾರಕ ಬೌಲಿಂಗ್‌ ದಾಳಿ ಮಾಡಿ ಮಿಂಚಿದರು. ಬಳಿಕ ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 146 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಂಡು 23 ರನ್‌ಗಳಿಂದ ಹೀನಾಯ ಸೋಲು ಕಂಡಿತು.

T20 world cup RCB Player Blessing Muzarabani Leads Zimbabwe to Memorable Victory Over Australia

ಜಿಂಬಾಬ್ವೆ ಗೆಲುವಿಗೆ ಕಾರಣನಾದ ಆರ್‌ಸಿಬಿ ಆಟಗಾರ

ಬೆನ್ನೆಟ್ ಸ್ಫೋಟಕ ಬ್ಯಾಟಿಂಗ್‌ ಆಡಿ 56 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 64 ರನ್‌ಗಳನ್ನು ಬಾರಿಸಿದರೆ, ಬೌಲಿಂಗ್‌ ವಿಭಾಗದಲ್ಲಿ ಆರ್‌ಸಿಬಿ ಆಟಗಾರ ಮುಜರಬಾನಿ 4 ಓವರ್‌ ಎಸೆದು ಕೇವಲ 17 ರನ್‌ ನೀಡಿ 4 ವಿಕೆಟ್‌ ಉರುಳಿಸಿ ಮಿಂಚಿದರು. ಇವರೇ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು ಅಂದರೆ ತಪ್ಪಾಗಲಾರದು.

ವಿಶೇಷ ಏನಂದ್ರೆ, ಆಸ್ಟ್ರೇಲಿಯಾ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿದ ಬ್ಲೆಸಿಂಗ್ ಈ ಹಿಂದೆ ಆರ್‌ಸಿಬಿಯಲ್ಲಿದ್ದರು. ಇವರು ಇಂದಿನ ಪಂದ್ಯದಲ್ಲಿ ಮಾರಕ ಬೌಲಿಂಗ್‌ ದಾಳಿ ಮೂಲಕ ಜಿಂಬಾಬ್ವೆ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಮತ್ತೊಂಡೆ, ಬ್ರಾಡ್ ಇವಾನ್ಸ್ 3 ವಿಕೆಟ್‌ ಉರುಳಿಸಿದ್ದು, ಕೂಡ ತುಂಬಾ ಸಹಾಯ ಆಯಿತು.

ಬ್ಲೆಸಿಂಗ್ ಮುಜರಬಾನಿ ಕ್ರಿಕೆಟ್‌ ಜೀವನ

ಬ್ಲೆಸಿಂಗ್ ಮುಜರಬಾನಿ ಜಿಂಬಾಬ್ವೆ ಕ್ರಿಕೆಟ್‌ ತಂಡದಲ್ಲಿ ಮಾರಕ ಬೌಲಿಂಗ್‌ ದಾಳಿ ಮಾಡುವಲ್ಲಿ ಹೆಸರುವಾಸಿದ್ದಾರೆ. ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಹೊಂದಿರುವ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದಾರೆ. 1996ರಲ್ಲಿ ಜಿಂಬಾಬ್ವೆಯಲ್ಲಿ ಜನಿಸಿದ ಮುಜರಬಾನಿ, ಚಿಕ್ಕ ವಯಸ್ಸಿನಿಂದಲೇ ವೇಗದ ಬೌಲಿಂಗ್‌ನಲ್ಲಿ ಆಸಕ್ತಿ ತೋರಿಸಿದರು.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆಯಿತು. ಟೆಸ್ಟ್, ಒಡಿಐ ಹಾಗೂ ಟಿ20 ಫಾರ್ಮ್ಯಾಟ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿರುವ ಅವರು, ಜಿಂಬಾಬ್ವೆ ತಂಡದ ಪ್ರಮುಖ ವೇಗಿ ಎನಿಸಿಕೊಂಡಿದ್ದಾರೆ. ಅದರಲ್ಲೂ ತಮ್ಮ ತಂಡದಲ್ಲಿ ಡೆತ್ ಓವರ್‌ಗಳಲ್ಲಿ ಮಾರಕ ಬೌಲಿಂಗ್ ದಾಳಿ ಮಾಡುವಲ್ಲಿಯೂ ಗುರಿತಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಟೂರ್ನಿಗಳು ಹಾಗೂ ದ್ವಿಪಕ್ಷೀಯ ಸರಣಿಗಳಲ್ಲಿ ಮುಜರಬಾನಿ ನೀಡುತ್ತಿರುವ ಉತ್ತಮ ಪ್ರದರ್ಶನ, ಜಿಂಬಾಬ್ವೆ ಕ್ರಿಕೆಟ್‌ಗೆ ಹೊಸ ಆತ್ಮವಿಶ್ವಾಸ ತುಂಬುತ್ತಿದೆ. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಸಾಧನೆ ಮಾಡಿ, ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಚಾಪು ಮೂಡಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೊಸ ಅಧ್ಯಾಯ ಬರೆದ ಜಿಂಬಾಬ್ವೆ

ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಕೊಲಂಬೊದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಜಿಂಬಾಬ್ವೆ ದಾಖಲೆ ಬರೆದಿದೆ. ವಿಶೇಷವೆಂದರೆ, 2007ರ ಮೊದಲ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ನಂತರ ಇದೇ ಮೊದಲ ಬಾರಿಗೆ ಜಿಂಬಾಬ್ವೆ ತಂಡ ಈ ಸಾಧನೆಯನ್ನು ಮರುಕಳಿಸಿದೆ. 19 ವರ್ಷಗಳ ಬಳಿಕ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಜಯ ದಾಖಲಿಸುವ ಮೂಲಕ ಜಿಂಬಾಬ್ವೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.

Story first published: Friday, February 13, 2026, 18:05 [IST]
Other articles published on Feb 13, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+