T20 World Cup: ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‍ಗಳು ಇವರೇ
ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿರತ್ತದೆ. ಈ ಆಟದಲ್ಲಿ ಬೌಲರ್‌ಗಳಿಗೆ ಸಾಲು ಸಾಲು ಸವಾಲುಗಳು ಎದುರಾಗುತ್ತವೆ. ಎದುರಾಳಿ ಬ್ಯಾಟರಗಳ ಚಕ್ರವ್ಯೂಹ ಭೇದಿಸಿ ಖೆಡ್ಡಾ ತೋಡಿ ಮೇಲುಗೈ ಸಾಧಿಸುತ್ತಾರೆ. ಬ್ಯಾಟರ್‌ಗಳ ಮೆರೆದಾಟದಲ್ಲಿ ಬೌಲರ್‌ಗಳ ಆರ್ಭಟವೂ ಜೋರಾಗಿರುತ್ತದೆ. ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ ಇಲ್ಲಿದೆ.
ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕೀರ್ತಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರಿಗೆ ಸಲ್ಲುತ್ತದೆ. ಇವರು ಆಡಿದ 43 ಪಂದ್ಯಗಳಲ್ಲಿ 6.86ರ ಎಕಾನಮಿಯಲ್ಲಿ 50 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾಕ್ ತಂಡದ ಮಾಜಿ ಆಲ್‌ರೌಂಡರ್ ಶಾಹೀದ್ ಅಫ್ರಿದಿಗೆ ಸ್ಥಾನ. ಇವರು ಆಡಿದ 34 ಪಂದ್ಯಗಳಲ್ಲಿ 39 ವಿಕೆಟ್ ಕಬಳಿಸಿದ್ದಾರೆ. ಮತ್ತು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ದಿಗ್ಗಜ ವೇಗದ ಬೌಲರ್ ಲಸಿತ್ ಮಲಿಂಗ ಇದ್ದು ಇವರು 31 ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದಾರೆ. ಇದೇ ಪಟ್ಟಿಯಲ್ಲಿ ಸ್ಥಾನ ಪಡೆದ ಇನ್ನೊಬ್ಬ ಬೌಲರ್ ವನಿಂದು ಹಸರಂಗ. ಇವರು ಸಹ 37 ವಿಕೆಟ್ ಪಡೆದು ಅಬ್ಬರಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ರಶೀದ್ ಖಾನ್‌ಗೂ ಸ್ಥಾನ. ಇವರು 37 ವಿಕೆಟ್ ಉರುಳಿಸಿದ್ದಾರೆ. ಇನ್ನು ಈ ಪಟ್ಟಿಯ ಟಾಪ್ 10 ಬೌಲರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾವೊಬ್ಬ ಬೌಲರ್‌ಗೂ ಸ್ಥಾನವಿಲ್ಲ.

ಅಶ್ವಿನ್ ಗರಿಷ್ಠ ವಿಕೆಟ್ ಸಾಧನೆ
ಟೀಮ್ ಇಂಡಿಯಾದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ ಅವರಿಗೆ ಅಗ್ರ ಸ್ಥಾನ. ಇವರು 24 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 32 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿಅರ್ಷದೀಪ್ ಸಿಂಗ್ ಇದ್ದು ಇವರು 27 ವಿಕೆಟ್ ಕಬಳಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅರ್ಷದೀಪ್ 6 ವಿಕೆಟ್ ಕಬಳಿಸಿದರೆ, ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ದಾಖಲೆ ಬರೆಯಲಿದ್ದಾರೆ.
ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ 18 ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಹ 24 ವಿಕೆಟ್ ಕಬಳಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಸ್
ಶಕೀಬ್ ಅಲ್ ಹಸನ್,43 ಪಂದ್ಯ, 50 ವಿಕೆಟ್
ಶಾಹೀದ್ ಅಫ್ರಿದಿ, 34 ಪಂದ್ಯ, 39 ವಿಕೆಟ್
ಲಸಿತ್ ಮಲಿಂಗ, 31 ಪಂದ್ಯ, 38 ವಿಕೆಟ್
ವನಿಂದು ಹಸರಂಗ, 19 ಪಂದ್ಯ, 37 ವಿಕೆಟ್
ರಶೀದ್ ಖಾನ್, 23 ಪಂದ್ಯ, 37 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications