ಆಸ್ಟ್ರೇಲಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ: ಪ್ರಮುಖ ಆಟಗಾರನನ್ನು ಹೊರಗಿಡಲು ಪಾಂಟಿಂಗ್ ಸಲಹೆ

ಟಿ20 ವಿಶ್ವಕಪ್ ರೋಚಕ ಘಟ್ಟವನ್ನು ತಲುಪಿದ್ದು ಸೆಮಿಫೈನಲ್ ಹಂತಕ್ಕೇರಲು ಎಲ್ಲಾ ತಂಡಗಳು ಅಂತಿಮ ಕಸರತ್ತು ನಡೆಸುತ್ತಿದೆ. ಇನ್ನು ಒಂದನೇ ಗುಂಪಿನಲ್ಲಿರುವ ತಂಡಗಳ ಪೈಕಿ ಸೆಮಿಫೈನಲ್ ಹಂತಕ್ಕೇರಲು ಮೂರು ತಂಡಗಳು ಅತ್ಯಂತ ನಿಕಟ ಸ್ಪರ್ಧೆಯನ್ನು ನಡೆಸುತ್ತಿದೆ. ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಹಂತಕ್ಕೇರಲು ಸಾಕಷ್ಟು ಪೈಪೋಟಿ ನಡೆಸುತ್ತಿದ್ದು ಮೂರು ತಂಡಗಳು ಕೂಡ ನಾಲ್ಕು ಪಂದ್ಯಗಳ ಪೈಕಿ ಎರಡು ಗೆಲುವು ಒಂದು ಸೋಲು ಹಾಗೂ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿರುವ ಕಾರಣ ತಲಾ 5 ಅಂಕಗಳೊಂದಿಗೆ ಸಮಾನ ಸ್ಥಾನದಲ್ಲಿದೆ. ಆದರೆ ನೆಟ್‌ರನ್‌ರೇಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಹಿಂದಿದ್ದು ಹಿನ್ನಡೆ ಅನುಭವಿಸುತ್ತಿದೆ.
ಅಂಕವನ್ನು ಹಾಗೂ ನೆಟ್‌ರನ್‌ರೇಟ್ ಹೆಚ್ಚಿಸಿಕೊಳ್ಳಲು ಆಸ್ಟ್ರೇಲಿಯಾಗೆ ಅಂತಿಮ ಅವಕಾಶ ಮಾತ್ರವೇ ಉಳಿದುಕೊಂಡಿದ್ದು ಅಫ್ಘಾನಿಸ್ತಾನ ತಂಡದ ವಿರುದ್ಧ ಅಂತಿಮ ಪಂದ್ಯವನ್ನು ಆಡಲಿದೆ. ಹೀಗಾಗಿ ಈ ಪಂದ್ಯ ಆಸಿಸ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದ್ದು ಸಾಷ್ಟು ಕುತೂಹಲ ಮೂಡಿಸಿದೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಂಡಕ್ಕೆ ಪ್ರಮುಖ ಸಲಹೆಯೊಂದನ್ನು ನೀಡಿದ್ದು ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.

ರಿಸ್ಕ್ ತೆಗೆದುಕೊಳ್ಳಲೇ ಬೇಕು ಎಂದ ಪಾಂಟಿಂಗ್
ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಜೊತೆ ಸಮಾನ ಅಂಕಗಳನ್ನು ಹೊಂದಿದ್ದರೂ ಆಸ್ಟ್ರೇಲಿಯಾದ ನೆಟ್‌ರನ್‌ರೇಟ್ ಬಹಳ ಕಳಪೆಯಾಗಿದೆ. ಹೀಗಾಗಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿದರೆ ಸೆಮಿಫೈನಲ್ ಸ್ಪರ್ಧೆಯಿಂದ ಆಸ್ಟ್ರೇಲಿಯಾ ತಂಡ ಹೊರಬೀಳಲಿದೆ. ಈ ಹಿನ್ನಲೆಯಲ್ಲಿ ರಿಕಿ ಪಾಂಟಿಂಗ್ ಮಾತನಾಡಿದ್ದು ಆಸ್ಟ್ರೇಲಿಯಾ ತಂಡ ಇಂಥಾ ಪರಿಸ್ಥಿತಿಯಲ್ಲಿ ಕೆಲ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಪ್ಯಾಟ್ ಕಮಿನ್ಸ್ ಹೊರಗಿಡಲು ಪಾಂಟಿಂಗ್ ಸಲಹೆ
ಅಫ್ಘಾನಿಸ್ತಾನದ ವಿರುದ್ಧದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಡುವ ಬಳಗದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಪ್ರಮುಖ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರನ್ನು ಹೊರಗಿಟ್ಟು ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಬೇಕಿದೆ ಎಂದಿದ್ದಾರೆ ಪಾಂಟಿಂಗ್. ಆಸ್ಟ್ರೇಲಿಯಾ ತಮಡ ವೇಗವಾಗಿ ಮುನ್ನುಗ್ಗಬೇಕು ಎಂದಿದ್ದರೆ ಕಠಿಣವಾದ ನಿರ್ಧಾರವನ್ನು ಆಯ್ಕೆಗಾರರು ತೆಗೆದುಕೊಳ್ಳಬೇಕಾಗುತ್ತದೆ. ಅಂಥಾ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದಾದರೆ ಪ್ಯಾಟ್ ಕಮ್ಮಿನ್ಸ್ ಅವರನ್ನು ಹೊರಗಿಟ್ಟು ಕ್ಯಾಮರೂನ್ ಗ್ರೀನ್ ಅವರಿಗೆ ಆಡುವ ಅವಕಾಶ ನೀಡಬೇಕು" ಎಂದಿದ್ದಾರೆ ಮಾಜಿ ಆಸ್ಟ್ರೇಲಿಯಾ ನಾಯಕ.

ಶುಕ್ರವಾರ ನಡೆಯಲಿದೆ ಮಹತ್ವದ ಪಂದ್ಯ
ಶುಕ್ರವಾರ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳ ವಿರುದ್ಧ ಈ ಕುತೂಹಲಕಾರಿ ಪಂದ್ಯ ನಡೆಯಲಿದೆ. ಅಫ್ಘಾನಿಸ್ತಾನ ತಂಡ ಈಗಾಗಲೇ ಟೂರ್ನಿಯಲ್ಲಿ ಒಂದೂ ಗೆಲುವು ಸಾಧಿಸಲು ವಿಫಲವಾಗಿದ್ದು ತಂಡದ ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಹೀಗಾಗಿ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದು ಸೆಮಿಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದೆ. ಹೀಗಾಗಿ ಅಫ್ಘಾನಿಸ್ತಾನ ತಂಡ ಶುಕ್ರವಾರ ನಡೆಯಲಿರುವ ಈ ಪಂದ್ಯದಲ್ಲಿ ಯಾವುದೇ ಒತ್ತಡವಿಲ್ಲದೆ ಆಡಲಿದೆ. ಈ ಪಂದ್ಯ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದ್ದು ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications