ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಟೂರ್ನಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತ ತಂಡ ಬಲಿಷ್ಠವಾಗಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗುತ್ತಿದೆ. ಈ ಟೂರ್ನಿಯಲ್ಲಿ ವರ್ಷಗಳ ಬಳಿಕ ಶುಭಮನ್ ಗಿಲ್ ತಂಡವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಟೀಮ್ ಇಂಡಿಯಾ ಟಿ20 ವಿಶ್ವ ಕಪ್ ವಿಜೇತ ತಂಡದ ಆಟಗಾರ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಭಾರತ ತಂಡದಲ್ಲಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಗಿಲ್, ಆಯ್ಕೆ ಸಮಿತಿಗೆ ತಮ್ಮನ್ನು ಟಿ20 ಕ್ರಿಕೆಟ್ ಟೂರ್ನಿಗೆ ಆಯ್ಕೆ ಮಾಡುವಂತೆ ಒತ್ತಾಯಿಸಿದರು. ಇವರ ಆಯ್ಕೆಯಿಂದ ಟೀಮ್ ಇಂಡಿಯಾದ ಸಮತೋಲನ ಕೆಟ್ಟಿದೆ ಎಂದು ಕಾಣುತ್ತಿದೆ. ವರ್ಷದಿಂದ ತಂಡದಲ್ಲಿ ತಮ್ಮ ಸ್ಥಾನವನ್ನು ಭಧ್ರ ಪಡಿಸಿಕೊಂಡಿದ್ದ ಆಟಗಾರರ ಸ್ಥಾನಕ್ಕೂ ಕುತ್ತು ಬಂದಿದೆ. ಈ ಬಗ್ಗೆ ಕನ್ನಡಿಗ ರಾಬಿನ್ ಉತ್ತಪ್ಪ ತಮ್ಮ ಹೇಳಿಕೆ ನೀಡಿದ್ದಾರೆ.

ಶುಭಮನ್ ಗಿಲ್ ಒಬ್ಬ ಉತ್ತಮ ಆಟಗಾರ. ಆದರೆ ಇವರ ಬ್ಯಾಟಿಂಗ್ ಶೈಲಿ ಟಿ20 ಕ್ರಿಕೆಟ್‌ಗೆ ಅಷ್ಟೊಂದು ಹೊಂದುವುದಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಅಬ್ಬರದ ಆಟಕ್ಕೆ ಒತ್ತು ನೀಡಲಾಗುತ್ತದೆ. ಆದರೆ ಗಿಲ್ ಆರಂಭದಲ್ಲಿ ನಿಧಾನವಾಗಿ ಆಡಿ ನಂತರ, ರನ್ ವೇಗಕ್ಕೆ ಚುರುಕು ಮುಟ್ಟಿಸುವ ಆಟಗಾರ. ಇವರ ಈ ಆಟ ತಂಡದ ರನ್ ರೇಟ್ ಮೇಲೆ ಪರಿಣಾಮ ಬೀರುತ್ತದೆ ಎಂದು ಕನ್ನಡಿಗ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಜನಪ್ರೀಯತೆಯ ಕಾರಣಕ್ಕಾಗಿ ಗಿಲ್ ಅವರನ್ನು ಬಿಸಿಸಿಐ ತಂಡದಲ್ಲಿ ಆಯ್ಕೆ ಮಾಡಿತು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಅವರಂತಹವರು ಟಿ20 ಶೈಲಿಗೆ ಹೆಚ್ಚು ಸೂಕ್ತರಾಗಿದ್ದಾರೆ. ಆದರೆ ಈ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ. ಬಿಸಿಸಿಐ, ಪ್ರತಿಭೆಗಿಂತ ಹೆಚ್ಚಾಗಿ ಆಟಗಾರನ ಜನಪ್ರಿಯತೆಗೆ ಮಣೆ ಹಾಕುತ್ತಿದೆ ಎಂದು ಉತ್ತಪ್ಪ ಹೇಳಿದ್ದಾರೆ.

ಗಿಲ್ ತಂಡಕ್ಕೆ ಸೇರಿದ್ದರಿಂದ ಟಿ20 ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ತಂಡದ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕನ್ನಡಿಗ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ. ಶುಬ್ಮನ್ ಗಿಲ್ ಅವರ ಸೇರ್ಪಡೆ ಭಾರತದ ಟಿ20 ತಂಡದಲ್ಲಿ ಸಮತೋಲನವನ್ನು ಹದಗೆಡಿಸಿದೆ ಎಂದಿದ್ದಾರೆ.
ಇನ್ನು ಟೀಮ್ ಇಂಡಿಯಾ ಏಷ್ಯಾ ಕಪ್ ಟೂರ್ನಿ ಸೆ.9 ರಂದು ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ತನ್ನ ಅಭಿಯಾನವನ್ನು ಸೆ.10ಕ್ಕೆ ಶುರವಾಗಲಿದೆ. ವಿಶ್ವವೇ ಕಾತುರದಿಂದ ಕಾಯುತ್ತಿರುವ ಭಾರತ-ಪಾಕ್ ನಡುವಣ ಪಂದ್ಯ ಸೆ.14ಕ್ಕೆ ನಡೆಯಲಿದೆ. ಇದಾದ ಬಳಿಕ ಎರಡೂ ಗುಂಪುಗಳಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು, ಸೂಪರ್ 4 ಹಂತಕ್ಕೆ ಪ್ರವೇಶಿಸಲಿವೆ. ಈ ಹಂತದ ಅಗ್ರ 2 ತಂಡಗಳು ಫೈನಲ್‌ಗೆ ಪ್ರವೇಶಿಸಲಿವೆ.