Scotland vs Zimbabwe : ಸ್ಕಾಟ್ಲೆಂಡ್ vs ಜಿಂಬಾಬ್ವೆ: ಟಾಸ್ ರಿಪೋರ್ಟ್, ಪ್ಲೇಯಿಂಗ್ XI, Live ಸ್ಕೋರ್

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಅಂತಿಮ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿದ್ದು ಸೂಪರ್ 12 ಹಂತಕ್ಕೇರಲು ಎರಡು ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಮುಂದಿನ ಹಂತಕ್ಕೇರುವ ಅರ್ಹತೆ ಪಡೆಯಲಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಸ್ಕಾಟ್ಲೆಂಡ್ ಹಾಗೂ ಜಿಂಬಾಬ್ವೆ ತಂಡಗಳು ಆಡಿರುವ ಎರಡು ಪಂದ್ಯಗಳ ಪೈಕಿ ತಲಾ ಒಂದು ಗೆಲುವು ಹಾಗೂ ಒಂದು ಸೋಲು ಅನುಭವಿಸಿದೆ. ಈ ಗುಂಪಿನಲ್ಲಿರುವ ಐರ್ಲೆಂಡ್ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಈಗಾಗಲೇ ಸೂಪರ್ 12 ಹಂತಕ್ಕೆ ಪ್ರವೇಶಿಸಿದ್ದು ಮತ್ತೊಂದು ಸ್ಥಾನಕ್ಕಾಗಿ ಈ ಎರಡು ತಂಡಗಳು ಪೈಪೋಟಿ ನಡೆಸಲಿದೆ. ಇನ್ನು ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಅರ್ಹತಾ ಸುತ್ತಿನಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರವೇ ಗೆದ್ದಿದ್ದು ಟೂರ್ನಿಯಿಂದ ಹೊರಬಿದ್ದಿದೆ
Live ಸ್ಕೋರ್‌ಕಾರ್ಡ್ ಹೀಗಿದೆ
ಜಿಂಬಾಬ್ವೆ ಹಾಗೂ ಸ್ಕಾಟ್ಲೆಂಡ್ ಎರಡು ತಂಡಗಳು ಕೂಡ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿತ್ತು. ಸ್ಕಾಟ್ಲೆಂಡ್ ವೆಸ್ಟ್ ಇಂಡೀಸ್ ತಂಡವನ್ನು ಭರ್ಜರಿಯಾಗಿ ಮಣಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡಕ್ಕೆ 6 ವಿಕೆಟ್‌ಗಳ ಅಂತರದಿಂದ ಶರಣಾಗಿತ್ತು. ಮತ್ತೊಂದೆಡೆ ಜಿಂಬಾಬ್ವೆ ಮೊದಲ ಪಮದ್ಯದಲ್ಲಿ ಐರ್ಲಂಡ್ ತಂಡದ ವಿರುದ್ಧ 31 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದರೆ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಶರಣಾಗಿತ್ತು. ಹೀಗಾಗಿ ಈ ಎರಡು ತಂಡಗಳ ಪೈಕಿ ಗೆದ್ದ ತಂಡ ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲಿದೆ.
ಸ್ಕಾಟ್ಲೆಂಡ್ ಆಡುವ ಬಳಗ: ಜಾರ್ಜ್ ಮುನ್ಸಿ, ಮೈಕೆಲ್ ಜೋನ್ಸ್, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ರಿಚಿ ಬೆರಿಂಗ್ಟನ್ (ನಾಯಕ), ಮೈಕೆಲ್ ಲೀಸ್ಕ್, ಕ್ಯಾಲಮ್ ಮ್ಯಾಕ್ಲಿಯೋಡ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ ವೀಲ್
ಬೆಂಚ್: ಕ್ರೇಗ್ ವ್ಯಾಲೇಸ್, ಕ್ರಿಸ್ ಸೋಲ್, ಹಮ್ಜಾ ತಾಹಿರ್, ಬ್ರಾಂಡನ್ ಮೆಕ್ಮುಲ್ಲೆನ್
ಜಿಂಬಾಬ್ವೆ ಆಡುವ ಬಳಗ: ಕ್ರೇಗ್ ಎರ್ವಿನ್ (ನಾಯಕ), ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ರಿಚರ್ಡ್ ನಾಗರವಾ, ಟೆಂಡೈ ಚಟಾರಾ, ಬ್ಲೆಸಿಂಗ್ ಮುಜರಬಾನಿ
ಬೆಂಚ್: ಟೋನಿ ಮುನ್ಯೊಂಗಾ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ರಾಡ್ ಇವಾನ್ಸ್, ಕ್ಲೈವ್ ಮದಂಡೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications