For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶಕೀಬ್ ಅಲ್ ಹಸನ್ ಐತಿಹಾಸಿಕ ಸಾಧನೆ

T20 World cup: Shakib Al Hasan becomes the highest wicket-taker in T20Is

ಭಾನುವಾರದಿಂದ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗುವ ಮೂಲಕ ಈ ಬಾರಿಯ ವಿಶ್ವಕಪ್‌ಗೆ ಚಾಲನೆ ದೊರೆತಂತಾಗಿದೆ. ಈ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಸ್ಕಾಟ್ಲೆಂಟ್ ತಂಡವನ್ನು ಎದುರಿಸಿತ್ತು. ಆದರೆ ಸ್ಕಾಟ್ಲೆಂಡ್ ತಂಡದ ವಿರುದ್ಧ ಬಾಂಗ್ಲಾದೇಶ 6 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಬಾಂಗ್ಲಾದೇಶ ಈ ಬಾರಿಯ ವಿಶ್ವಕಪ್‌ಅನ್ನು ಬೇಡದ ರೀತಿಯಲ್ಲಿ ಆರಂಭಿಸಿದೆ. ಆದರೆ ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಪ್ರಮುಖ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಬಾಂಗ್ಲಾದೇಶದ ಆಲ್‌ರೌಂಡರ್ ಆಗಿರುವ ಶಕೀಬ್ ಅಲ್ ಹಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ದಾಖಲೆಯನ್ನು ಬರೆದಿದ್ದಾರೆ. ಶಕೀಬ್ ಅಲ್ ಹಸನ್ ಈಗ ಟಿ20 ಐನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಶ್ರೀಲಂಕಾದ ದಿಗ್ಗಜ ಬೌಲರ್ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕಿರುವ ಶಕೀಬ್ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತನ್ನ ಸ್ಪೆಲ್‌ನ ಮೂರನೇ ಓವರ್‌ನಲ್ಲಿ ಈ ಸಾಧನೆ ಮಾಡಿದ್ದಾರೆ ಶಕೀಬ್. ರಚೀ ಬೆರಿಂಗ್ಟನ್ ಹಾಗೂ ಮೈಕಲ್ ಲೀಸ್ಕ್ ವಿಕೆಟ್‌ಗಳನ್ನು ಮೂರು ಎಸೆತಗಳ ಅಂತರದಲ್ಲಿ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ ಶಕೀಬ್ ಅಲ್ ಹಸನ್. ಬಾಂಗ್ಲಾದೇಶದ ಈ ಆಲ್‌ರೌಂಡರ್ ಈಗ 108 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಈ ಮೂಲಕ ಲಸಿತ್ ಮಾಲಿಂಗ ಅವರ 107 ವಿಕೆಟ್‌ಗಳ ಸಾಧನೆಯನ್ನು ಮೀರಿ ನಿಂತಿದ್ದಾರೆ.

ಈ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ 4 ಓವರ್‌ಗಳ ತಮ್ಮ ಸ್ಪೆಲ್‌ನಲ್ಲಿ 17 ರನ್‌ಗಳನ್ನು ನೀಡಿ 2 ವಿಕೆಟ್ ಪಡೆದಿದ್ದಾರೆ. ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಸ್ಕಾಟ್ಲೆಂಡ್ ತಂಡ ಅಂತಿಮ ಹಂತದಲ್ಲಿ ತಿರುಗಿ ಬೀಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ನಿಗದಿತ 20 ಓವರ್‌ಗಳಲ್ಲಿ 140/9 ರನ್‌ಗಳ ಸವಾಲಿನ ಗುರಿಯನ್ನು ಬಾಂಗ್ಲಾದೇಶ ತಂಡಕ್ಕೆ ನೀಡಿತ್ತು.

ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಿಂದಲೇ ಕುಸಿಯುತ್ತಾ ಸಾಗಿತ್ತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ 134 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್‌ ಅಭಿಯಾನವನ್ನು ಬಾಂಗ್ಲಾದೇಶ ಸೋಲಿನೊಂದಿಗೆ ಆರಂಭಿಸಿದೆ.

ಬಾಂಗ್ಲಾದೇಶ ಪ್ಲೇಯಿಂಗ್ ‍XI : ಲಿಟನ್ ದಾಸ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ (ನಾಯಕ), ಅಫೀಫ್ ಹುಸೇನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್
ಬೆಂಚ್: ಮೊಹಮ್ಮದ್ ನೈಮ್, ನಸುಮ್ ಅಹ್ಮದ್, ಶೊರಿಫುಲ್ ಇಸ್ಲಾಂ, ಶಮೀಮ್ ಹೊಸೇನ್
ಸ್ಕಾಟ್ಲೆಂಡ್ ಪ್ಲೇಯಿಂಗ್ ‍XI: ಜಾರ್ಜ್ ಮುನ್ಸೆ, ಕೈಲ್ ಕೊಯೆಟ್ಜರ್ (ನಾಯಕ), ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ರಿಚಿ ಬೆರಿಂಗ್ಟನ್, ಕ್ಯಾಲಮ್ ಮ್ಯಾಕ್ಲಿಯೋಡ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್
ಬೆಂಚ್: ಡೈಲನ್ ಬಡ್ಜ್, ಕ್ರೇಗ್ ವ್ಯಾಲೇಸ್, ಅಲಾಸ್ಡೇರ್ ಇವಾನ್ಸ್, ಹಮ್ಜಾ ತಾಹಿರ್

Story first published: Monday, October 18, 2021, 12:08 [IST]
Other articles published on Oct 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+