ಟಿ20 ವಿಶ್ವಕಪ್ ನಡೆಯಲಿರುವ ತಾಣ ಅಧಿಕೃತವಾಗಿ ಘೋಷಿಸಿದ ಬಿಸಿಸಿಐ

ನವದೆಹಲಿ: ಭಾರತದಲ್ಲಿ ನಡೆಯಬೇಕಿದ್ದ ಪ್ರತಿಷ್ಠಿತ ಐಸಿಸಿ ವರ್ಲ್ಡ್ ಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ನಡೆಯಲಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇದನ್ನು ಖಾತರಿಪಡಿಸಿದೆ. ಕೋವಿಡ್-19 ಕಾರಣದಿಂದಾಗಿ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರಗೊಂಡಿದೆ.
ಆರಂಭದಲ್ಲಿ ಟಿ20 ವಿಶ್ವಕಪ್ ಟೂರ್ನಿ ಯುಎಇಯಲ್ಲಿ ಮತ್ತು ಓಮನ್ ನಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಒಂದಿಷ್ಟು ಪಂದ್ಯ ಯುಎಇಯಲ್ಲಿ ಮತ್ತು ಇನ್ನೊಂದಿಷ್ಟು ಪಂದ್ಯಗಳು ಓಮನ್‌ನಲ್ಲಿ ನಡೆಯಲಿದೆ ಎನ್ನಲಾಗಿತ್ತು. ಆದರೆ ಟೂರ್ನಿಯ ಎಲ್ಲಾ ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.
"ಟಿ20 ವಿಶ್ವಕಪ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ ಎಂದು ನಾವು ಐಸಿಸಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದೇವೆ. ಉಳಿದ ಮಾಹಿತಿಯನ್ನು ನಾವು ನಿಮಗೆ ಶೀಘ್ರ ನೀಡಲಿದ್ದೇವೆ," ಎಂದು ಗಂಗೂಲಿ ಹೇಳಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ಈ ಬಾರಿಯ ಟಿ20ಐ ವಿಶ್ವಕಪ್ ನಡೆಯಲಿದೆ.
"ಎಲ್ಲಾ ಆಟಗಾರರು, ಮಧ್ಯಸ್ಥಗಾರರ ಆರೋಗ್ಯ ಸುರಕ್ಷೆ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ," ಎಂದು ಗಂಗೂಲಿ ತಿಳಿಸಿದ್ದಾರೆ. ಯುಎಇಯಲ್ಲೂ ಟೂರ್ನಿಯ ಆತಿಥ್ಯವನ್ನು ಬಿಸಿಸಿಐ ವಹಿಸಿಕೊಂಡಿದೆ. ಅಕ್ಟೋಬರ್ 17ರಂದು ಫೈನಲ್ ನಡೆಯುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ಆರಂಭ, ಅಂತ್ಯದ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications