ಟಿ20 ವಿಶ್ವಕಪ್: ಮೈದಾನದಲ್ಲಿ ಕಿತ್ತಾಡಿಕೊಂಡ ಲಂಕಾ-ಬಾಂಗ್ಲಾ ಆಟಗಾರರಿಗೆ ದಂಡ ವಿಧಿಸಿದ ಐಸಿಸಿ

ಶ್ರೀಲಂಕಾ ತಂಡದ ವೇಗದ ಬೌಲರ್ ಲಹಿರು ಕುಮಾರ ಹಾಗೂ ಬಾಂಗ್ಲಾದೇಶದ ಬ್ಯಾಟರ್ ಲಿಟನ್ ದಾಸ್‌ಗೆ ಐಸಿಸಿ ದಂಡವನ್ನು ವಿಧಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಈ ಇನ್ನು ಆಟಗಾರರು ಮೈದಾನದಲ್ಲಿ ಸಂಯಮ ಮರೆತು ಸಂಘರ್ಷಕ್ಕೆ ಇಳಿದ ಕಾರಣಕ್ಕಾಗಿ ಐಸಿಸಿ ಈ ಕ್ರಮ ಕೈಗೊಂಡಿದೆ. ಲಹಿರು ಕುಮಾರಗೆ 25 ಶೇಕಡಾ ಹಾಗೂ ಲಿಟನ್ ದಾಸ್‌ಗೆ 15 ಶೇಕಡಾ ದಂಡ ವಿಧಿಸಿದೆ. ಐಸಿಸಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಈ ದಂಡನೆಗೆ ಎರಡು ತಂಡಗಳ ಇಬ್ಬರು ಆಟಗಾರರಿಗೆ ದಂಡ ವಿಧಿಸಲಾಗಿದೆ.
ಭಾನುವಾರ ಶಾರ್ಜಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಬ್ಬರು ಆಟಗಾರರು ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದರು. ಒಂದು ಹಂತದಲ್ಲಿ ಇದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಅಂಪಾಯರ್ ಹಾಗೂ ಉಳಿದ ಆಟಗಾರರು ತಕ್ಷಣವೇ ಮಧ್ಯ ಪ್ರವೇಶಿಸಿ ಕೈಮೀರಿ ಹೋಗುವುದನ್ನು ತಡೆಯಲು ಯಶಸ್ವಿಯಾಗಿದ್ದರು.

ದಂಡ ಮಾತ್ರವಲ್ಲ..
ಐಸಿಸಿ ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು ಈ ಇಬ್ಬರು ಆಟಗಾರರು ಐಸಿಸಿ ನೀತಿ ಸಂಹಿತೆಯ ಮೊದಲ ಹಂತವನ್ನು ಉಲ್ಲಂಘಿಸಿದ ಕಾರಣಕ್ಕ್ಆಗಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಇಬ್ಬರು ಆಟಗಾರರು ಕೂಡ ತಲಾ ಒಂದು 'ಡಿ ಮೆರಿಟ್' ಅಂಕವನ್ನು ಪಡೆದುಕೊಂಡಿದ್ದಾರೆ ಎಂದಿದೆ.
ಬಾಂಗ್ಲಾದೇಶ ತಂಡ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಲಿಟನ್ ದಾಸ್ ಲಂಕಾ ವೇಗಿ ಲಹಿರು ಕುಮಾರಾಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ವೇಳೆ ಲಂಕಾ ವೇಗಿ ಕೆರಳುವಂತೆ ವರ್ತಿಸಿದ್ದರು. ಇಬ್ಬರು ಕೂಡ ಕೆಲ ಕಠಿಣ ಶಬ್ದಗಳ ಮೂಲಕ ವಾಗ್ದಾಳಿ ನಡೆಸಿ ತಳ್ಳಾಟವನ್ನು ಕೂಡ ನಡೆಸಿಕೊಂಡರು. ನಂತರ ಇತರ ಆಟಗಾರರು ಹಾಗೂ ಅಂಪಾಯರ್ ಮಧ್ಯ ಪ್ರವೇಶಿಸಿದ್ದರು.
ಟಿ20 ವಿಶ್ವಕಪ್: ನಮ್ಮ ಅಬ್ಯಾಸವನ್ನು ಬದಲಾಯಿಸಬೇಕು!; ಗೆಲುವಿನ ಬಳಿಕ ಸಹ ಆಟಗಾರರಿಗೆ ಬಾಬರ್ ಸಲಹೆ

ತಪ್ಪೊಪ್ಪಿಕೊಂಡ ಆಟಗಾರರು
ಈ ಘಟನೆಯಲ್ಲಿ ಲಂಕಾದ ವೇಗಿ ಲಹಿರು ಕುಮಾರ ಹಾಗೂ ಲಿಟನ್ ದಾಸ್ ಇಬ್ಬರು ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ದಂಡನೆಗೆ ಸಮ್ಮತಿಸಿದ್ದಾರೆ. ಹೀಗಾಗಿ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ. ಮೈದಾನದ ಅಂಪಾಯರ್‌ಗಳು ಮೂರನೇ ಅಂಪಾಯರ್ ಹಾಗೂ ನಾಲ್ಕನೇ ಅಂಪಾಯರ್ ಈ ದಂಡವನ್ನು ನಿಗದಿ ಪಡಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶದ ವಿರುದ್ಧ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್‌ಗಳಸಿದೆ. ಮೊಹಮ್ಮದ್ ನಯೀಮ್ ಹಾಗೂ ಮುಷ್ಫಿಕರ್ ರಹೀಮ್ ಅರ್ಧ ಶತಕದ ಪ್ರದರ್ಶನ ನೀಡಿದ್ದರು.
ಅಗ್ರಸ್ಥಾನಕ್ಕೇರಿದ ಅಫ್ಘಾನಿಸ್ತಾನ, ಶಮಿ ಪರ ಸಚಿನ್ ಬ್ಯಾಟಿಂಗ್; ಅಕ್ಟೋಬರ್ 25ರ ಪ್ರಮುಖ ಕ್ರಿಕೆಟ್ ಸುದ್ದಿಗಳು

ಬಾಂಗ್ಲಾ ವಿರುದ್ಧ ಶ್ರೀಲಂಕಾ ಭರ್ಜರಿ ಗೆಲುವು
ಬಾಂಗ್ಲಾದೇಶ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಚರಿತ ಅಸಲಂಕಾ ಹಾಗೂ ಭಾನುಕ ರಾಜಪಕ್ಸ ಆಸರೆಯಾದರು. ಚರಿತ ಅಸಲಂಕಾ 49 ಎಸೆತಗಳಲ್ಲಿ 80 ರನ್ ಸಿಡಿಸಿ ಅಜೇಯವಾಗುಳಿದರೆ ಅವರಿಗೆ ಉತ್ತಮ ಸಾಥ್ ನೀಡಿದ ರಾಜಪಕ್ಸ 31 ಎಸೆತಗಳಲ್ಲಿ 53 ರನ್ ಸಿಡಿಸಿ ಶ್ರೀಲಂಕಾ ತಮಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಈ ಮೂಲಕ ಶ್ರೀಲಂಕಾ ಇನ್ನೂ 7 ಎಸೆತಗಳು ಬಾಕಿಯಿರುವಂತೆಯೇ 5 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications