For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022: ಮೊದಲ ಪಂದ್ಯದಲ್ಲೇ ನಮೀಬಿಯಾ ದೊಡ್ಡ ಬೇಟೆ: ಶ್ರೀಲಂಕಾಗೆ ಭಾರೀ ಆಘಾತ!

T20 world cup,SL vs Nam: Namibia win against Sri lanka by 55 runs in 1st match

ಟಿ20 ವಿಶ್ವಕಪ್‌ 2022ರ ಆವೃತ್ತಿಯ ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾಗೆ ನಮೀಬಿಯಾ ತಂಡ ದೊಡ್ಡ ಆಘಾತ ನೀಡಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಯೇ ಭರ್ಜರಿ ಪ್ರದರ್ಶನ ನೀಡಿ ಮಿಂಚಿದ ನಮೀಬಿಯಾ ಶ್ರೀಲಂಕಾ ವಿರುದ್ಧ ಅಮೋಘ ಗೆಲುವು ಸಾಧಿಸಿದ್ದು ಅದ್ಭುತ ಆರಂಭ ಪಡೆದುಕೊಂಡಿದೆ. ಈ ಮೂಲಕ ಶ್ರೀಲಂಕಾ ತಂಡಕ್ಕೆ ಭಾರೀ ಮುಖಭಂಗವಾಗಿದೆ.

ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ನಮೀಬಿಯಾ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು. ಸವಾಲಿನ ಮೊತ್ತ ಪೇರಿಸಿದ ನಮೀಬಿಯಾ ತಂಡ ಬಳಿಕ ಬೌಲಿಂಗ್‌ನಲ್ಲಿಯತೂ ಅದ್ಭುತ ಪ್ರದರ್ಶನ ನೀಡಿದೆ. ಇದರ ಪರಿಣಾಮವಾಗಿ ಶ್ರೀಲಂಕಾ ತಂಡವನ್ನು 108 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ನಮೀಬಿಯಾ ಯಶಸ್ವಿಯಾಗಿದ್ದು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಭಾರಿಯ ವಿಶ್ವಕಪ್‌ನಲ್ಲಿಯೂ ಮಿಂಚುವ ವಿಶ್ವಾಸ ಮೂಡಿಸಿದೆ ನಮೀಬಿಯಾ. ಕಳೆದ ವರ್ಷ ಯುಎಇನಲ್ಲಿ ನಡೆದ ವಿಶ್ವಕಪ್‌ನಲ್ಲಿಯೂ ನಮೀಬಿಯಾ ತಂಡ ನೀಡಿದ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಆರಂಭಿಕ ಆಘಾತದ ಮಧ್ಯೆಯೂ ಮಿಂಚಿದ ನಮೀಬಿಯಾ

ಆರಂಭಿಕ ಆಘಾತದ ಮಧ್ಯೆಯೂ ಮಿಂಚಿದ ನಮೀಬಿಯಾ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ನಮೀಬಿಯಾ ತಂಡದ ಆರಂಭ ಕಳಪೆಯಾಗಿತ್ತು. ಆದರೆ ಕೆಳ ಮಧ್ಯಮ ಕ್ರಮಾಂಖದ ಆಟಗಾರರಿಂದ ಬಂದ ಧ್ಭುತ ಪ್ರದರ್ಶನದ ಕಾರಣದಿಂದಾಗಿ ಶ್ರೀಲಂಕಾ ವಿರುದ್ಧ ಸವಾಲಿನ ಗುರಿ ನಿಗದಿಪಡಿಸುವಲ್ಲಿ ನಮೀಬಿಯಾ ಯಶಸ್ವಿಯಾಗಿತ್ತು. ಜಾನ್ ಫ್ರಿಲಿಂಕ್ 28 ಎಸೆತಗಳಲ್ಲಿ 44 ರನ್ ಸಿಡಿಸಿ ಮಿಂಚಿದರೆ ಸ್ಮಿತ್ 16 ಎಸೆತಗಳಲ್ಲಿ 31 ರನ್ ಸಿಡಿಸಿ ಮಿಂಚಿದ್ದರು. ಈ ಮೂಲಕ ನಮೀಬಿಯಾ ತಂಡ 7 ವಿಕೆಟ್ ಕಳೆದುಕೊಂಡು 163 ಗಳಿಸುವಲ್ಲಿ ಯಶಸ್ವಿಯಾಗಿತ್ತು.

T20 World Cup: ಬ್ರಿಸ್ಬೇನ್‌ನಲ್ಲಿ ಇಂದಿನಿಂದ ಟೀಂ ಇಂಡಿಯಾ ಅಭ್ಯಾಸ, ತಂಡ ಸೇರಿಕೊಂಡ ಶಮಿ

ಲಂಕಾ ದಾಂಡಿಗರ ನೀರಸ ಪ್ರದರ್ಶನ

ಈ ಪಂದ್ಯದಲ್ಲಿ ನಮೀಬಿಯಾ ತಂಡದ ಬೌಲಿಂಗ್ ವಿಭಾಗ ನೀಡಿದ ಸಂಘಟಿತ ಪ್ರದರ್ಶನದ ಕಾರಣದಿಂದಾಗಿ ಶ್ರೀಲಂಕಾ ಭಾರೀ ಆಘಾತ ಅನುಭವಿಸಿದೆ. ಪ್ರತಿಭಾವಂತ ಆಟಗಾರರ ಪಡೆಯನ್ನೇ ಹೊಂದಿದ್ದರೂ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಕೇವಲ 108 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿದೆ. ನಾಯಕ ದಸುನ್ ಶನಕಾ ಬಾರಿಸಿದ 29 ರನ್ ಶ್ರೀಲಂಕಾ ಪರ ದಾಖಲಾದ ಹೈಯೆಸ್ಟ್ ಸ್ಕೋರ್ ಎನಿಸಿದೆ. ಈ ಮೂಲಕ ಶ್ರೀಲಂಕಾ ತಂಡ 55 ರನ್‌ಗಳ ಬೃಹತ್ ಅಂತರದಿಂದ ನಮೀಬಿಯಾ ಪಡೆಗೆ ಶರಣಾಗಿದೆ. ಅರ್ಹತಾ ಸುತ್ತಿನಲ್ಲಿ ಮೊದಲ ಪಂದ್ಯದಲ್ಲಿಯೇ ನಮೀಬಿಯಾ ತಂಡದ ವಿರುದ್ಧ ಅನುಭವಿಸಿದ ಈ ಸೋಲು ಲಂಕಾ ಪಡೆಗೆ ಆಘಾತ ನೀಡುವುದರಲ್ಲಿ ಅನುಮಾನವಿಲ್ಲ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ
ಬೆಂಚ್: ಪ್ರಮೋದ್ ಮದುಶನ್, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ, ಚರಿತ್ ಅಸಲಂಕಾ

ನಮೀಬಿಯಾ: ಸ್ಟೀಫನ್ ಬಾರ್ಡ್, ಡೇವಿಡ್ ವೈಸ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ನಿಕೋಲ್ ಲಾಫ್ಟಿ-ಈಟನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಝೇನ್ ಗ್ರೀನ್ (ವಿಕೆಟ್ ಕೀಪರ್), ದಿವಾನ್ ಲಾ ಕಾಕ್, ಮೈಕೆಲ್ ವ್ಯಾನ್ ಲಿಂಗೆನ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ
ಬೆಂಚ್: ಪಿಕ್ಕಿ ಯಾ ಫ್ರಾನ್ಸ್, ರೂಬೆನ್ ಟ್ರಂಪೆಲ್ಮನ್, ತಂಗೇನಿ ಲುಂಗಮೆನಿ, ಲೋಹಾಂಡ್ರೆ ಲೌರೆನ್ಸ್, ಕಾರ್ಲ್ ಬಿರ್ಕೆನ್‌ಸ್ಟಾಕ್

Story first published: Sunday, October 16, 2022, 13:35 [IST]
Other articles published on Oct 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+