Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್ ಅರ್ಹತಾ ಸುತ್ತು: ಶ್ರೀಲಂಕಾ vs ಯುಎಇ, ಟಾಸ್ ರಿಪೋರ್ಟ್, Live ಸ್ಕೋರ್‌

T20 world cup, Sri Lanka vs United Arab Emirates, Toss report, Playing XI and Live score

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು 6ನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಯುಎಇ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಶ್ರೀಲಂಕಾ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.

ಈ ಪಂದ್ಯ ಎರಡು ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದ್ದು ಸೋಲು ಕಂಡರೆ ಮುಂದಿನ ಹಂತಕ್ಕೇರುವ ಸ್ಪರ್ಧೆಯಿಂದ ಹೊರಗುಳಿಯುವುದು ಬಹುತೇಕ ಖಚಿತ. ಹೀಗಾಗಿ ಈ ಮುಖಭಂಗದಿಂದ ತಪ್ಪಿಸಿಕೊಳ್ಳಲು ಶ್ರೀಲಂಕಾ ಹರಸಾಹಸ ಪಡಲಿದೆ. ಶ್ರೀಲಂಕಾ ಹಾಗೂ ಯುಎಇ ಎರಡು ತಂಡಗಳು ಕೂಡ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕಾರಣ ತಂಡಗಳಿಗೆ ಭಾರೀ ಹಿನ್ನಡೆಯುಂಟಾಗಿದೆ.

Live score ಹೀಗಿದೆ

1
53390

ಶ್ರೀಲಂಕಾ ತಂಡ ಈ ಬಾರಿಯ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ನಮೀಬಿಯಾ ತಂಡದ ವಿರುದ್ಧ ಸೆಣೆಸಾಟ ನಡೆಸಿತ್ತು. ಈ ಪಂದ್ಯದಲ್ಲಿ ನಮೀಬಿಯಾ ತಂಡ ನೀಡಿದ ಸರ್ವಾಂಗೀಣ ಪ್ರದರ್ಶನಕ್ಕೆ ಲಂಕಾ ಪಡೆ ಶರಣಾಗಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಶ್ರೀಲಂಕಾ ತಂಡ ಸಂಪೂರ್ಣ ವೈಫಲ್ಯ ಅನುಭವಿಸಿದ ಕಾರಣ ಭಾರೀ ಸೋಲು ಕಾಣಬೇಕಾಯಿತು. ಹೀಗಾಗಿ ಟೂರ್ನಿಯ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಗಿದ್ದು ಇದರಿಂದ ಹೊರಬರಲು ಲಂಕಾ ಪಡೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ.

ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ಪ್ರಮೋದ್ ಮದುಶನ್, ಮಹೇಶ್ ತೀಕ್ಷಣ

ಬೆಂಚ್: ದನುಷ್ಕ ಗುಣತಿಲಕ, ದಿಲ್ಶನ್ ಮಧುಶಂಕ, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ

ಚಿರಾಗ್ ಸೂರಿ, ಮುಹಮ್ಮದ್ ವಸೀಮ್, ಕಾಶಿಫ್ ದೌದ್, ವೃತ್ಯ ಅರವಿಂದ್ (ವಿಕೆಟ್ ಕೀಪರ್), ಆರ್ಯನ್ ಲಾಕ್ರಾ, ಬಾಸಿಲ್ ಹಮೀದ್, ಚುಂಡಂಗಪೊಯಿಲ್ ರಿಜ್ವಾನ್ (ನಾಯಕ),
ಅಯಾನ್ ಅಫ್ಜಲ್ ಖಾನ್, ಕಾರ್ತಿಕ್ ಮೇಯಪ್ಪನ್, ಜುನೈದ್ ಸಿದ್ದಿಕ್, ಜಹೂರ್ ಖಾನ್
ಬೆಂಚ್: ಜವಾರ್ ಫರೀದ್, ಅಹ್ಮದ್ ರಜಾ, ಅಲಿಶನ್ ಶರಾಫು, ಸಬೀರ್ ಅಲಿ

Story first published: Tuesday, October 18, 2022, 13:42 [IST]
Other articles published on Oct 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+