For Quick Alerts
ALLOW NOTIFICATIONS  
For Daily Alerts
 

T20 World Cup: ಲೀಗ್ ಹಂತದಲ್ಲಿ ಗರಿಷ್ಠ ರನ್‌, ಹೆಚ್ಚು ವಿಕೆಟ್‌ ಪಡೆದ ಟಾಪ್‌ 5 ಆಟಗಾರರ ಪಟ್ಟಿ

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಆಟಗಾರರು ಭರ್ಜರಿ ಪ್ರದರ್ಶನ ನೀಡಿದೆ. ಈ ಲೀಗ್‌ನಲ್ಲಿ ಭರವಸೆಯ ಆಟಗಾರರು ಸ್ಥಿರ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಈ ಟೂರ್ನಿಯಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಅಬ್ಬರದ ಪ್ರದರ್ಶನದ ಫಲವಾಗಿ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಹಾಗಿದ್ದರೆ ಯಾರು ಗರಿಷ್ಠ ರನ್‌ ಸಾಧಕರು? ಗರಿಷ್ಠ ವಿಕೆಟ್‌ ಪಡೆದವರು ಯಾರು? ಎಂಬ ಬಗ್ಗೆ ವಿವರ ಇಲ್ಲಿದೆ.

ಟಿ20 ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯಗಳು ಮುಗಿದಿವೆ. ಆದರೆ ಸೂಪರ್ 8 ಹಂತದ ಪಂದ್ಯದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯ ಮಳೆಗೆ ಆಹುತಿಯಾಗಿದೆ. ಈ ಪಂದ್ಯ ಒಂದೇ ಒಂದು ಎಸೆತ ಕಾಣದೇ ನಿರಾಸೆ ಮೂಡಿಸಿದೆ. ಹಾಗಾಗಿ ಆಟಗಾರರ ರನ್‌ ಗಳಿಕೆ ಹಾಗೂ ವಿಕೆಟ್‌ ಕಬಳಿಕೆಯಲ್ಲಿ ಬದಲಾವಣೆ ಆಗಿಲ್ಲ. ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ ಬ್ಯಾಟರ್‌ ಪಟ್ಟಿಯಲ್ಲಿ ಪಾಕಿಸ್ತಾನದ ಸಾಹಿಬ್‌ಜಾದ್ ಫರ್ಹಾನ್‌ ಅಗ್ರ ಸ್ಥಾನದಲ್ಲಿ ಕಾಣಿಕೊಳ್ಳುತ್ತಾರೆ.

T20 World Cup

ಪಾಕ್‌ ಆರಂಭಿಕ ಆಟಗಾರ ಸಾಹಿಬ್‌ಜಾದ್ ಫರ್ಹಾನ್‌ ಟಿ20 ವಿಶ್ವಕಪ್‌ನಲ್ಲಿ ಲೀಗ್‌ ಹಂತದಲ್ಲಿ 4 ಪಂದ್ಯಗಳನ್ನು ಆಡಿದ್ದು, 220 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಹಾಗೂ ಒಂದು ಶತಕ ಸೇರಿದೆ. ಸದ್ಯ ಇವರು ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಪತಮ್ ನಿಸಂಕಾ. ಶ್ರೀಲಂಕಾದ ಯುವ ಆಟಗಾರ ನಿಸಂಕಾ ಅವರು ಆಡಿದ 4 ಪಂದ್ಯಗಳಲ್ಲಿ 66ರ ಸರಾಸರಿಯಲ್ಲಿ 199 ರನ್‌ ಕಲೆ ಹಾಕಿದ್ದು ಟಾಪ್‌ ರನ್‌ ಸ್ಕೋರ್‌ರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಲಂಕಾ ತಂಡದವರೇ ಆದ ಕುಸಾಲ್ ಮೆಂಡೀಸ್‌ 4 ಪಂದ್ಯಗಳಲ್ಲಿ 182 ರನ್‌ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಏಡನ್‌ ಮಾರ್ಕ್ರಾಮ್‌ ಇದ್ದು, ಇವರು ಆಡಿದ 4 ಪಂದ್ಯಗಳಲ್ಲಿ 178 ರನ್‌ ಸಿಡಿಸಿದ್ದಾರೆ.

ಇಶಾನ್‌ಗೂ ಸ್ಥಾನ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಇಶಾನ್‌ ಕಿಶನ್‌ ಆಡಿದ 4 ಪಂದ್ಯಗಳಲ್ಲಿ 59ರ ಸರಾಸರಿಯಲ್ಲಿ 176 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 2 ಅರ್ಧಶತಕ ಬಾರಿಸಿದ್ದಾರೆ.

ವರುಣ್‌ಗೆ 9 ವಿಕೆಟ್‌

ಲೀಗ್‌ ಹಂತದಲ್ಲಿ ಯುಎಸ್‌ಎ ತಂಡದ ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್ ಬಿಗುವಿನ ದಾಳಿ ನಡೆಸಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 6.80 ಎಕಾನಮಿಯಲ್ಲಿ 13 ವಿಕೆಟ್‌ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭಾರತದ ಸ್ಪಿನ್ ಬೌಲರ್‌ ವರುಣ್ ಚಕ್ರವರ್ತಿ ಅವರು ಇದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 9 ವಿಕೆಟ್‌ ಕಬಳಿಸಿದ್ದಾರೆ.

ಈ ಪಟ್ಟಿಯಲ್ಲಿ ಜಿಂಬಾಬ್ವೆ ತಂಡದ ಬೌಲರ್‌ ಬ್ಲೆಸಿಂಗ್‌ ಮುಜರಬಾನಿ ಸೇರಿದ್ದಾರೆ. ಇವರು ಆಡಿದ 3 ಪಂದ್ಯಗಳಲ್ಲಿ 9 ವಿಕೆಟ್‌ ಕಬಳಿಸಿದ್ದಾರೆ. ಈ ವೇಳೆ ಇವರ ಎಕಾನಮಿ 5.91 ಆಗಿದೆ. ಸ್ಕಾಟ್ಲೆಂಡ್‌ ತಂಡದ ಮೈಕೆಲ್ ಲೀಸ್ಕ್ ಸಹ 9 ವಿಕೆಟ್‌ ಕಬಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನ ತಂಡದ ಅಜ್ಮತುಲ್ಲಾ ಓಮರ್‌ಜಾಯಿ ಸಹ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, 9 ವಿಕೆಟ್‌ ಪಡೆದದ್ದಾರೆ. ಸೂಪರ್‌ 8 ಹಂತದ ಬಳಿಕ ಈ ಪಟ್ಟಿಯಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ.

ಸೂಚನೆ: ಈ ವರದಿ ಶನಿವಾರದವರೆಗಿನ ಅಂಕಿ ಅಂಶಗಳನ್ನು ಆಧಾರಿಸಿದೆ.

Story first published: Sunday, February 22, 2026, 12:58 [IST]
Other articles published on Feb 22, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+