ಕಳಪೆ ರನ್ ರೇಟ್ ಹೊಂದಿದ್ದರೂ ಸಹ ಭಾರತ ಸೆಮಿಫೈನಲ್ ಪ್ರವೇಶಿಸಬಹುದಾ? ಇಲ್ಲಿದೆ ಲೆಕ್ಕಾಚಾರ
ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ರೋಚಕತೆ ಹೆಚ್ಚಿಸಿದೆ. ಲೀಗ್ ಹಂತದ ಪಂದ್ಯಗಳು ಮುಗಿದಿದ್ದು ಸೂಪರ್ 8 ಕದನ ಆರಂಭವಾಗಿದೆ. ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆಸೆಯನ್ನು ಕಾಣುತ್ತಿರುವ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿವೆ. ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಪ್ರದರ್ಶನ ನೀಡಿ 76 ರನ್‌ಗಳಿಂದ ಸೋಲು ಕಂಡಿರುವ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದೆ. ಅಲ್ಲದೆ ಸೆಮಿಫೈನಲ್ ಪ್ರವೇಶಿಸುವ ಆಸೆ ಕಷ್ಟವಾಗಿದೆ. ಇದಕ್ಕೆ ಕಾರಣ ಭಾರತದ ರನ್ ರೇಟ್.
ಅಹಮದಾಬಾದ್‌ನಲ್ಲಿ ನಡೆದ ಸೂಪರ್ 8ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿ 76 ರನ್ ಸೋಲು ಕಂಡಿತ್ತು. ಹೀಗಾಗಿ ಟೀಮ್ ಇಂಡಿಯಾದ ನಿವ್ವಳ ರನ್ ರೇಟ್ ಕುಸಿದಿದೆ. ಇದನ್ನು ಸುಧಾರಿಸಿಕೊಳ್ಳುವ ಅನಿವಾರ್ಯತೆ ಇದೆ. ಟೀಮ್ ಇಂಡಿಯಾ ರನ್ ದರವನ್ನು ಪರಿಗಣಿಸದೆಯೇ ಸೆಮಿಫೈನಲ್‌ಗೆ ಮುನ್ನಡೆಯುವ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಲೆಕ್ಕಾಚಾರವನ್ನು ಹಾಕಿ ನೋಡಿದಾಗ ಇದು ಸಾಧ್ಯ ಎಂದು ತೋರುತ್ತದೆ. ಅದಕ್ಕಾಗಿ ಆಗಬೇಕಿದ್ದು ಇಷ್ಟೆ.

ಈಗಾಗಲೇ ಎ ಗುಂಪಿನಲ್ಲಿ ಸೂಪರ್ 8 ಹಂತದ ಎರಡು ಪಂದ್ಯಗಳು ನಡೆದಿವೆ. ದಕ್ಷಿಣ ಆಫ್ರಿಕಾ ಭಾರತವನ್ನು ಭಾರೀ ಅಂತರದಿಂದ ಮಣಿಸಿ ರನ್ ರೇಟ್ ಗಗನಕ್ಕೆ ಮುಟ್ಟಿದೆ. ಇದೇ ವೇಳೆ ಭಾರತದ ರನ್ ರೇಟ್ ಕುಸಿತಗೊಂಡಿದ್ದು, ಎರಡು ಅಂಕಗಳನ್ನು ಕೈ ಚೆಲ್ಲಿದೆ. ಇನ್ನೊಂದು ಪಂದ್ಯದಲ್ಲಿ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ 107 ರನ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ವೇಳೆ ವಿಂಡೀಸ್ ರನ್ ರೇಟ್ 5.350 ಆಗಿದೆ. ರನ್ ರೇಟ್ ಆಧಾರದ ಮೇಲೆ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸುವುದು ಕೊಂಚ ಕಷ್ಟ. ರನ್ ರೇಟ್ ಇಲ್ಲದೆ ಭಾರತ ಸೆಮಿಫೈನಲ್ ಪ್ರವೇಶಿಸುವುದು ಹೇಗೆ? ಎನ್ನು ಪ್ರಶ್ನೆಗಳು ಎದ್ದಿವೆ.
ದಕ್ಷಿಣ ಆಫ್ರಿಕಾ ವಿಂಡೀಸ್ ಸೋಲಿಸಿದರೆ...
ಟೀಮ್ ಇಂಡಿಯಾ ಮುಂದಿನ ತನ್ನ ಎರಡೂ ಪಂದ್ಯಗಳನ್ನು ಗೆಲಲ್ಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಎರಡೂ ಪಂದ್ಯಗಳು ಭಾರತಕ್ಕೆ ನಾಲ್ಕು ಅಂಕ ಸಿಗುತ್ತದೆ. ಸೂಪರ್ 8 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದರೆ, ಎಲ್ಲ ಸಮಸ್ಯೆಗೂ ಪರಿಹಾರ ಸಿಗುತ್ತದೆ. ದಕ್ಷಿಣ ಆಫ್ರಿಕಾ 6 ಅಂಕಗಳೊಂದಿಗೆ ಸೂಪರ್ 8 ಹಂತದಿಂದ ಸೆಮಿಫೈನಲ್ ಪ್ರವೇಶಿಸಿದರೆ, ಭಾರತ 4 ಅಂಕಗಳಿಂದ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದು. ಈ ವೇಳೆ ರನ್ ರೇಟ್ ಪಿಚ್ಚರಗೆ ಬರುವುದಿಲ್ಲ.

ವಿಂಡೀಸ್ ಆಫ್ರಿಕಾವನ್ನು ಮಣಿಸಿದರೆ...
ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ, ಚಿತ್ರಣ ಬದಲಾಗುತ್ತದೆ. ಹೀಗೆ ಆದಲ್ಲಿ ಭಾರತ ಎರಡೂ ಪಂದ್ಯಗಳನ್ನು ಗೆದ್ದರೂ ಸಹ ಮುಂದಿನ ಹಂತವನ್ನು ಪ್ರವೇಶಿಸುವುದು ಕಷ್ಟ. ಒಂದು ವೇಳೆ ವಿಂಡೀಸ್ ದಕ್ಷಿಣ ಆಫ್ರಿಕಾವನ್ನು ಮಣಿಸಿದರೆ, ಆಗ ಮೂರು ತಂಡಗಳ ಅಂಕಗಳು ತಲಾ 4 ಅಂಕಗಳಾಗುತ್ತಿವೆ. ಈ ವೇಳೆ ರನ್ ರೇಟ್ ಲೆಕ್ಕಾಚಾರ ಶುರುವಾಗುತ್ತದೆ. ಆಗ ಟೀಮ್ ಇಂಡಿಯಾದ ಈ ಲೆಕ್ಕಾಚಾರದಲ್ಲಿ ಹಿಂದುಳಿಯುತ್ತದೆ.
ಭಾರತದ ಮುಂದಿನ ಪಂದ್ಯಗಳು
ಟೀಮ್ ಇಂಡಿಯಾ, ಫೆಬ್ರವರಿ 26 ರಂದು ಜಿಂಬಾಬ್ವೆ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಮಾರ್ಚ್ 1 ರಂದು ಸೂಪರ್ 8 ಹಂತದ ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತಾದಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications