For Quick Alerts
ALLOW NOTIFICATIONS  
For Daily Alerts
 

T20 World cup: ಆ ಪ್ಲೇಯರ್‌ಗಾಗಿ ಪಟ್ಟು ಹಿಡಿದ ಹಿಟ್‌ ಮ್ಯಾನ್‌

ಟಿ20 ವಿಶ್ವಕಪ್‌ ಕ್ರಿಕೆಟ್‌ಗೆ ತಂಡವನ್ನು ಪ್ರಕಟಿಸಲು ಇನ್ನು ಟೈಮ್‌ ಇದೆ. ಆದರೆ ತಂಡದಲ್ಲಿ ಯಾವೆಲ್ಲಾ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಯುವ ತಂಡವನ್ನು ಕಣಕ್ಕೆ ಇಳಿಸಬೇಕು ಎಂದು ಹಲವರು ಹೇಳ್ತಾ ಇದ್ದರೆ, ಇನ್ನು ಹಲವರು ಅನುಭವಿಗಳಿಗೆ ಮಣೆ ಹಾಕುವಂತೆ ಹೇಳುತ್ತಿದ್ದಾರೆ. ಈ ಬೆನ್ನೆಲ್ಲೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಬಾರಿ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂದು ಘೋಷಿಸಿದ್ದಾರೆ.

ಹೀಗೆ ಹೇಳಿದ ಬಳಿಕ ಒಂದು ಸ್ಥಾನದ ಚಿಂತೆ ಕಡಿಮೆ ಆಗಿದೆ. ಆದರೆ ಇನ್ನೊಂದು ಸ್ಥಾನ ನಿಜಕ್ಕೂ ಬಿಸಿಸಿಐ ಚಿಂತೆಯನ್ನು ದ್ವಿಗುಣಗೊಳಿಸಿದೆ. ಈ ಬೆನ್ನಲ್ಲೆ ರೋಹಿತ್ ಶರ್ಮಾ ನೀಡಿದ ಆ ಒಂದು ಹೇಳಿಕೆ, ನಿಜಕ್ಕೂ ಬಿಸಿಸಿಐ ನಿದ್ದೆಯನ್ನು ಗೆಡಿಸಿದೆ. ಟಿ20 ವಿಶ್ವಕಪ್‌ ತಂಡದಲ್ಲಿ ಆ ಪ್ಲೇಯರ್ ಬೇಕೆ ಬೇಕು ಎಂದು ರೋಹಿತ್ ಪಟ್ಟು ಹಿಡಿದಿದ್ದಾರೆ.

T20 World Cup Team India caption Rohit Sharma said we need Virat at any cost

ರೋಹಿತ್‌ ಹೀಗೆ ಪಟ್ಟು ಹಿಡಿದಿದ್ದು ನೋಡಿದರೆ, ಆ ಪ್ಲೇಯರ್‌ ಎಷ್ಟು ಇಂಪಾರ್ಟೆಂಟ್ ಎಂಬುದನ್ನು ತೋರಿಸುತ್ತದೆ. ಇದೇ ರೀತಿ ನಿರ್ಣಯವನ್ನು ತೆಗೆದುಕೊಂಡು ಯಶ ಕಂಡ ನಾಯಕರು ಭಾರತದಲ್ಲಿ ಇದ್ದಾರೆ. ಅದ್ರಲ್ಲಿ ಮುಖ್ಯವಾಗಿ ಎದ್ದು ಕಾಣುವ ನಾಯಕ ಎಂದರೆ ಸೌರವ್ ಗಂಗೂಲಿ..

ಅಂದು ಪಟ್ಟು ಹಿಡಿದಿದ್ದ ದಾದಾ

ಆಗ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಲು ಸಜ್ಜಾಗಿತ್ತು. ಕಾಂಗರೂ ನಾಡಿನಲ್ಲಿ ಪೇಸರ್‌ಗಳಿಗೆ ಪಿಚ್‌ ಸಹಾಯಕವಾಗುತ್ತದೆ. ಅಲ್ಲದೆ ಆಗ ಸ್ಪಿನ್ ಮಾಂತ್ರಿಕ ಅನಿಲ್‌ ಕುಂಬ್ಳೆ ಫಾರ್ಮ್‌ ಸಹ ಅಷ್ಟೊಂದು ಚೆನ್ನಾಗಿ ಇರಲಿಲ್ಲ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಅನಿಲ್‌ರನ್ನು ಡ್ರಾಪ್‌ ಮಾಡಲು ನಿರ್ಧರಿಸಿತ್ತು. ಆಗ ಗಂಗೂಲಿ, ಕುಂಬ್ಳೆ ಬೇಕು ಎಂದು ಪಟ್ಟು ಹಿಡಿದರು. ಆ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕುಂಬ್ಳೆ ಸ್ಥಿರ ಪ್ರದರ್ಶನ ನೀಡಿದರು. ಅಲ್ಲದೆ ಸಿಡ್ನಿ ಅಂಗಳದಲ್ಲಿ ಮಾರಕ ದಾಳಿ ನಡೆಸಿ ಅಬ್ಬರಿಸಿದ್ದರು.

T20 World Cup Team India caption Rohit Sharma said we need Virat at any cost

ಇದೇ ರೀತಿ ಇನ್ಸಿಡೆಂಟ್‌ ಇನ್ನೊಬ್ಬ ಪ್ಲೇಯರ್ ಜೊತೆಗೂ ಆಗಿತ್ತು. ಆಗ ದಾದಾ ಕನ್ನಡಿಗ ಜಾವಗಲ್ ಶ್ರೀನಾಥ್ ಅವರನ್ನು ಬ್ಯಾಕ್ ಮಾಡಿದ್ದರು. ಅಲ್ಲದೆ 2003 ವಿಶ್ವಕಪ್‌ನಲ್ಲಿ ಶ್ರೀನಾಥ್‌ ಗರಿಷ್ಠ ವಿಕೆಟ್‌ ಪಡೆದ ಸಾಧನೆ ಮಾಡಿದರು. ಹೀಗೆ ರೋಹಿತ್‌ ಉತ್ತಮ ಪ್ಲೇಯರ್‌ ಗಾಗಿ ಹಠ ಹಿಡಿದಿದ್ದಾರೆ.

ರೋಹಿತ್ ಪಟ್ಟು ಹಿಡಿದಿರುವ ಆಟಗಾರ ಯಾರು?

ರೋಹಿತ್ ಶರ್ಮಾ ಪಟ್ಟು ಹಿಡಿದಿರುವ ಆ ಪ್ಲೇಯರ್ ಬೇರೆ ಯಾರು ಅಲ್ಲ, ಚೇಸಿಂಗ್ ಸ್ಟಾರ್ ವಿರಾಟ್‌ ಕೊಹ್ಲಿ.. ಕಿಂಗ್ ಕೊಹ್ಲಿ ಅವರನ್ನು ಹೊರಗಿಟ್ಟು ತಂಡವನ್ನು ಕಟ್ಟಬೇಕು ಎಂಬ ಮಾತುಗಳು ಕೇಳಿ ಬರುತ್ತವೆ. ಆದರೆ ರೋಹಿತ್ ಮಾತ್ರ ಆ ಒಬ್ಬ ಪ್ಲೇಯರ್‌ ಇಲ್ಲದೇ ತಂಡವನ್ನು ಕಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ ಅವರಿಗೆ ವಿರಾಟ್ ಕೊಹ್ಲಿ ಅವರ ಆಟ ಎಂತಹದ್ದು ಎಂದು ಗೊತ್ತು. ವಿರಾಟ್‌ ಐಸಿಸಿ ಇವೆಂಟ್‌ಗಳಲ್ಲಿ ಆಡುವ ಧಾಟಿಯನ್ನು ಕಂಡು ರೋಹಿತ್ ಸಹ ಬೋಲ್ಡ್ ಆಗಿದ್ದಾರೆ. ಅದರಲ್ಲೂ ಪಾಕ್‌ ವಿರುದ್ಧ ವಿರಾಟ್‌ ಕೊಹ್ಲಿ ಬಾರಿಸಿದ್ದ ಶಾರ್ಟ್‌ ಆಪ್‌ ಸೆಂಚೂರಿಯ ಹೊಡೆತವನ್ನು ನೋಡಿ ಫುಲ್ ಖುಷ್ ಆಗಿದ್ದಾರೆ. ಹೀಗಾಗಿಯೇ ರೋಹಿತ್ ವಿರಾಟ್‌ರನ್ನು ತಂಡಕ್ಕೆ ಬೇಕೆ ಬೇಕು ಎಂದು ಹೇಳುತ್ತಿದ್ದಾರೆ.

ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ನಡೆಯಲಿದ್ದು, ಟೀಮ್ ಇಂಡಿಯಾ ಕಪ್‌ ಎತ್ತುವ ಕನಸು ಕಾಣುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ಸ್ಟ್ರಾಂಗ್ ತಂಡವನ್ನು ಕಟ್ಟುವ ಬಯಕೆ ಹೊಂದಿದೆ. ವಿರಾಟ್ ಕೊಹ್ಲಿಗೆ ಈ ತಂಡದಲ್ಲಿ ಸ್ಥಾನ ಲಭಿಸುತ್ತದಾ ಕಾದು ನೋಡಬೇಕಿದೆ.

Story first published: Wednesday, March 20, 2024, 8:30 [IST]
Other articles published on Mar 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+