T20 World Cup: ಕಠಿಣ ತರಬೇತಿ ಮುಂದುವರೆಸಿದ ಟೀಂ ಇಂಡಿಯಾ, ಸೋಮವಾರ ಮೊದಲನೇ ಅಭ್ಯಾಸ ಪಂದ್ಯ

ಮುಂಚಿತವಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಮಾಡಿರುವ ಟೀಂ ಇಂಡಿಯಾ ಈಗಾಗಲೇ ಕಠಿಣ ಅಭ್ಯಾಸವನ್ನು ಆರಂಭಿಸಿದೆ. ಅಕ್ಟೋಬರ್ 9 ರಂದು 4 ಗಂಟೆಗಳ ಕಾಲ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಅಕ್ಟೋಬರ್ 10ರಂದು ಕೂಡ ರೋಹಿತ್ ಶರ್ಮಾ ಪಡೆ ಕಠಿಣ ತರಬೇತಿಯಲ್ಲಿ ತೊಡಗಲಿದೆ.
ತರಬೇತಿ ಬಳಿಕ ಟೀಂ ಇಂಡಿಯಾ ಸೋಮವಾರ ಅಭ್ಯಾಸ ಪಂದ್ಯವನ್ನು ಆಡಲಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತಕ್ಕೆ ಆಸ್ಟ್ರೇಲಿಯಾದ ಪರಿಸ್ಥಿತಿಗಳನ್ನು ಅರಿತುಕೊಳ್ಳಲು ಈ ಪಂದ್ಯಗಳು ಸಹಕಾರಿಯಾಗಲಿವೆ.
ಪರ್ತ್‌ನಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಲಿದೆ. ಅಕ್ಟೋಬರ್ 10ರಂದು ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಅಭ್ಯಾಸ ಪಂದ್ಯವನ್ನಾಡಲಿದೆ. ಅಕ್ಟೋಬರ್ 11ರಂದು ಟೀಂ ಇಂಡಿಯಾ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ.
ಅಕ್ಟೋಬರ್ 13ರಂದು ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಎರಡನೇ ಅಭ್ಯಾಸ ಪಂದ್ಯವನ್ನಾಡಲಿದೆ. ಅಕ್ಟೋಬರ್ 14ರಂದು ಟೀಂ ಇಂಡಿಯಾ ಪರ್ತ್‌ನಿಂದ ಹೊರಡಲಿದೆ. ಬಳಿಕ, ಅಕ್ಟೋಬರ್ 17 ಮತ್ತು 19ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಆಡಲಿದೆ.

ಅಭ್ಯಾಸ ಪಂದ್ಯ ಏರ್ಪಡಿಸಿರುವ ಬಿಸಿಸಿಐ
ಟಿ20 ವಿಶ್ವಕಪ್‌ಗೂ ಮುನ್ನ ಬಿಸಿಸಿಐ ಭಾರತಕ್ಕೆ ಎರಡು ಹೆಚ್ಚುವರಿ ಅಭ್ಯಾಸ ಪಂದ್ಯಗಳನ್ನು ಏರ್ಪಡಿಸಿತ್ತು. ಪರ್ತ್‌ನಲ್ಲಿ ಭಾರತ ಬೀಡು ಬಿಟ್ಟಿದ್ದು, ಅಲ್ಲಿನ ಅಂಗಳದಲ್ಲಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ.
ಟಿ20 ವಿಶ್ವಕಪ್‌ಗೆ ಸರಿಯಾಗಿ ಸಿದ್ದವಾಗುವ ದೃಷ್ಟಿಯಿಂದ, ಹಲವು ಆಟಗಾರರು ಈ ಮೊದಲು ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಅನುಭವ ಇಲ್ಲದೇ ಇರುವುದರಿಂದ ಬಿಸಿಸಿಐ ಎರಡು ಹೆಚ್ಚುವರಿ ಪಂದ್ಯಗಳನ್ನು ಆಯೋಜಿಸಿದೆ. ಇದು, ಆಟಗಾರರಿಗೆ ಆಸ್ಟ್ರೇಲಿಯಾ ಪಿಚ್‌ಗಳ ಬಗ್ಗೆ ಅರಿತುಕೊಳ್ಳಲು ಸಹಾಯ ಮಾಡಲಿದೆ.
IND vs SA 2nd ODI: ಎಂಎಸ್ ಧೋನಿ ತವರಿನಂಗಳದಲ್ಲಿನ ಪಂದ್ಯಕ್ಕೂ ಮಳೆ ಕಾಟ; ಹವಾಮಾನ ವರದಿ ಏನಿದೆ?

ಅಭ್ಯಾಸ ಪಂದ್ಯಗಳ ವೀಕ್ಷಣೆ ಹೇಗೆ?
ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಭಾರತದ ಅಭ್ಯಾಸ ಪಂದ್ಯಗಳನ್ನು ಪಶ್ಚಿಮ ಆಸ್ಟ್ರೇಲಿಯಾದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಭಾರತದ ಅಭ್ಯಾಸ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಬುಮ್ರಾ ಬದಲೀ ಆಟಗಾರನ ಹೆಸರು ಇಂದು ಘೋಷಣೆ
ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಟೀಂ ಇಂಡಿಯಾದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎನ್ನುವ ಕುತೂಹಲಕ್ಕೆ ಇಂದು (ಅಕ್ಟೋಬರ್ 10) ತೆರೆ ಬೀಳಲಿದೆ. ಬಿಸಿಸಿಐ ಬುಮ್ರಾ ಬದಲೀ ಆಟಗಾರನ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ.
ಬುಮ್ರಾ ಬದಲಿಗೆ ಬಹುತೇಕ ಮೊಹಮ್ಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅನುಭವ, ಐಪಿಎಲ್‌ನಲ್ಲಿ ಅವರ ಉತ್ತಮ ಪ್ರದರ್ಶನವನ್ನು ಆಧರಿಸಿ ಟಿ20 ವಿಶ್ವಕಪ್‌ನ ಮೀಸಲು ಆಟಗಾರರ ಪಟ್ಟಿಯಲ್ಲಿ ಅವರನ್ನು ಹೆಸರಿಸಲಾಗಿತ್ತು. ತಮ್ಮ ಫಿಟ್ನೆಸ್ ಸಾಬೀತು ಪಡಿಸಲು ಅವರು ಎನ್‌ಸಿಎಗೆ ಕೂಡ ಹಾಜರಾಗಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ದೀಪಕ್ ಚಾಹರ್ ಆಯ್ಕೆಯಾಗಬೇಕು ಎಂದು ಹಲವರು ಹೇಳಿದ್ದಾರೆ. ಆದರೆ, ಬಿಸಿಸಿಐ ಯಾವ ಆಟಗಾರನಿಗೆ ಮಣೆ ಹಾಕುತ್ತದೆ ನೋಡಬೇಕಿದೆ.

ಟಿ20 ವಿಶ್ವಕಪ್ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications