For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಧೋನಿ ಮೆಂಟರ್ ಆಗುತ್ತಿರುವ ಬಗ್ಗೆ ನಾಯಕ ಕೊಹ್ಲಿ ಹೇಳಿದ್ದಿಷ್ಟು!

T20 World Cup: Team India skipper Virat Kohli thrilled to have MS Dhoni as mentor

ಈ ಬಾರಿಯ ಟಿ20 ವಿಶ್ವಕಪ್ ಇಂದಿನಿಂದ(ಅಕ್ಟೋಬರ್ 17) ಆರಂಭವಾಗಲಿದೆ. ಅರ್ಹತಾ ಸುತ್ತಿನ ಪಂದ್ಯಗಳು ನಡೆಯುವ ಮೂಲಕ ಈ ಪ್ರತಿಷ್ಠಿತ ಟೂರ್ನಿಗೆ ಚಾಲನೆ ದೊರೆಯಲಿದೆ. ಈ ಗಾಗಲೇ ಐಪಿಎಲ್ ಟೂರ್ನಿಯ ಮುಕ್ತಾಯವಾಗಿದ್ದು ಅಭಿಮಾನಿಗಳ ಚಿತ್ತ ಕೂಡ ಈಗ ಈ ಮಹತ್ವದ ಐಸಿಸಿ ಟೂರ್ನಿಯತ್ತ ನೆಟ್ಟಿದೆ. ಈ ಟಿ20 ವಿಶ್ವಕಪ್‌ನಲ್ಲಿ ಆಡುವ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಕೂಡ ಈಗಾಗಲೇ ದುಬೈನಲ್ಲಿದ್ದು ವಿಶ್ವಕಪ್‌ನತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ.

ಇನ್ನು ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆರಂಭದಿಂದ ಈ ಹಿಂದೆ 2016ರ ಟಿ20 ವಿಶ್ವಕಪ್‌ವರೆಗೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಧೋನಿ ಮೆಂಟರ್ ಆಗಿ ತಂಡದ ಜೊತೆಗಿರುವುದು ಆಟಗಾರರು ಹಾಗೂ ಅಭಿಮಾನಿಗಳ ಪಾಲಿಗೆ ಅತ್ಯಂತ ಖುಷಿಯ ವಿಚಾರ. ಆದರೆ ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹೇಳೋದೇನು ಎಂಬುದು ಕೂಡ ಎಲ್ಲರ ಕುತೂಹಲವಾಗಿದೆ. ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ.

"ಎಂಎಸ್ ಧೋನಿ ಯಾವುದೇ ತಂಡದಲ್ಲಿದ್ದ ನಾಯಕತ್ವ ವಹಿಸಿದ್ದರೂ ಅವರು ವ್ಯತ್ಯಾಸವನ್ನು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ನಮ್ಮ ತಂಡದ ವಾತಾವರಣದಲ್ಲಿ ಅವರು ಇರುವುದನ್ನು ನಿಜಕ್ಕೂ ಎದುರುನೋಡುತ್ತಿದ್ದೇನೆ. ನಮ್ಮ ತಂಡದಲ್ಲಿನ ಆತ್ಮವಿಶ್ವಾಸವನ್ನು ಅವರು ಮತ್ತಷ್ಟು ಹೆಚ್ಚಿಸಲಿದ್ದಾರೆ" ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಹಿರಿಯ ಆಟಗಾರನಾಗಿ ಸಕ್ರಿಯವಾಗಿದ್ದ ಸಂದರ್ಭದಲ್ಲಿಯೂ ಎಂಎಸ್ ಧೋನಿ ಮೆಂಟರ್ ಆಗಿ ತಮ್ಮ ಪಾತ್ರವನ್ನು ನೊಭಾಯಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಬಳಗಕ್ಕೆ ಸೇರಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ಉತ್ಸುಕತೆಯನ್ನು ಹೊಂದಿದ್ದಾರೆ ಎಂಬುದನ್ನು ವಿರಾಟ್ ಕೊಹ್ಲಿ ಈ ಸಂದರ್ಭದಲ್ಲಿ ಬಹಿರಂಗ ಪಡಿಸಿದ್ದಾರೆ.

"ಇದೊಂದು ಅಮೋಘ ಅನುಭವ. ತಂಡದ ವಾತಾವರಣದೊಳಗೆ ಮತ್ತೆ ಸೇರಿಕೊಳ್ಳುತ್ತಿರುವುದಕ್ಕೆ ಸ್ವತಃ ಧೋನಿ ಕೂಡ ಉತ್ಸುಕತೆಯನ್ನು ಹೊಂದಿದ್ದಾರೆ" ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. "ಅವರು ನಮ್ಮೆಲ್ಲರಿಗೂ ಯಾವಾಗಲೂ ಮೆಂಟರ್ ಆಗಿಯೇ ಇದ್ದಾರೆ. ನಾವು ಆಟವನ್ನು ಆರಂಭಿಸಿದ ಕಾಲದಿಂದ ಹಿಡಿದು ಈಗ ಮತ್ತೆ ಅದೇ ಸ್ಥಾನವನ್ನು ಮುಂದಿವರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಅದರಲ್ಲೂ ವಿಶೇಷವಾಗಿ ಯುವ ಆಟಗಾರರಿಗೆ, ಈಗಷ್ಟೇ ಕ್ರಿಕೆಟ್ ವೃತ್ತಿ ಬದುಕನ್ನು ಆರಂಭಿಸಿದಂತಾ ಆಟಗಾರರಿಗೆ ಎಂಎಸ್ ಧೋನಿಯ ಸುದೀರ್ಘ ಕಾಲದ ಅನುಭವ ಸಾಕಷ್ಟು ಉತ್ತಮ ಸ್ಪೂರ್ತಿಯನ್ನು ನೀಡಲಿದೆ" ಎಂದು ವಿರಾಟ್ ಕೊಹ್ಲಿ ವಿವರಿಸಿದ್ದಾರೆ.

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಚಾಂಪಿಯನ್ ತಂಡವಾಗಿ ಮೆರೆದಿದೆ. ಟೂರ್ನಿಯಲ್ಲಿ ಆರಂಭದಿಂದಲೂ ಅಮೋಘ ಪ್ರದರ್ಶನ ನೀಡುತ್ತಾ ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಿತ್ತು. ಈ ಪಂದ್ಯದಲ್ಲಿ 27 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ ಧೋನಿ ಪಡೆ ಐಪಿಎಲ್ ಇತಿಹಾಸದಲ್ಲಿ ನಾಳ್ಕನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದಿದೆ.

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರ ಭಾನುವಾರದಂದೇ ಆರಂಭವಾಗುತ್ತಿದ್ದರೂ ಭಾರತದ ಅಭಿಯಾನ ಒಂದು ವಾರ ತಡವಾಗಿ ಶುರುವಾಗಲಿದೆ. ಟೀಮ್ ಇಂಡಿಯಾದ ಮೊದಲ ಪಂದ್ಯ ಅಕ್ಟೋಬರ್ 24ರ ಭಾನುವಾರದಂದು ನಡೆಯಲಿದ್ದು ಈ ಪಂದ್ಯಸಲ್ಲಿ ಟೀಮ್ ಇಂಡಿಯಾಗೆ ಬದ್ಧ ಎದುರಾಳಿ ಪಾಕಿಸ್ತಾನದ ಸವಾಲನ್ನು ನೀಡಲಿದೆ.

Story first published: Monday, October 18, 2021, 10:13 [IST]
Other articles published on Oct 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+