For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022ಗೆ ಭಾರತ ತಂಡದ ಆಯ್ಕೆ ಯಾವಾಗ?: ಬಹಿರಂಗವಾಯ್ತು ಘೋಷಣೆಯ ದಿನಾಂಕ

T20 World cup: Team India squad will be announced on september 15 for T20 World Cup in Australia

ಟಿ20 ವಿಶ್ವಕಪ್‌ನ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದೆ. ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಟೂರ್ನಿ ಈಗ ಸಾಕಷ್ಟು ಕುತೂಹಲ ಮೂಡಿಸಿದ್ದು ಈ ಮಹತ್ವದ ಟೂರ್ನಿಯಲ್ಲಿ ಯಾವ ತಂಡ ಗೆದ್ದು ಚಾಂಪಿಯನ್ ಎನಿಸಲಿದೆ ಎಂಬುದು ದೊಡ್ಡ ಕುತೂಹಲವಾಗಿದೆ. ಈ ಪ್ರತಿಷ್ಠಿತ ಟೂರ್ನಿಗೆ ಭಾರತ ತಂಡದ ಆಟಗಾರರ ಬಳಗವನ್ನು ಯಾವಾಗ ಆಯ್ಕೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತ ತಂಡದಲ್ಲಿ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಸಾಕಷ್ಟು ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಆಯ್ಕೆ ಮಂಡಳಿಗೆ ಆಯ್ಕೆ ವಿಚಾರದಲ್ಲಿ ಕಠಿಣ ಸವಾಲು ಮುಂದಿಟ್ಟಿದ್ದಾರೆ. ಈ ಎಲ್ಲಾ ಸವಾಲುಗಳನ್ನು ಮೀರಿ ಯಾವ ರೀತಿಯ ತಂಡವನ್ನು ಆಯ್ಕೆ ಮಾಡಬಹುದು ಎಂಬುದು ಸದ್ಯದ ಪ್ರಶ್ನೆ.

ಸೆಪ್ಟೆಂಬರ್ 15ರಂದು ತಂಡದ ಆಯ್ಕೆ

ಸೆಪ್ಟೆಂಬರ್ 15ರಂದು ತಂಡದ ಆಯ್ಕೆ

ಮಾಹಿತಿಯ ಪ್ರಕಾರ ಸೆಪ್ಟೆಂಬರ್ 15ರಂದು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ತಂಡದ ಸದಸ್ಯರ ಘೋಷಣೆಯಾಗಲಿದೆ. ಇದಕ್ಕೂ ಮುನ್ನ ರಾಷ್ಟ್ರೀಯ ತಂಡದ ಆಯ್ಕೆಗಾರರ ಮಸಿತಿ ಮುಂಬೈನಲ್ಲಿ ಸಭೆ ಸೇರಲಿದ್ದು ಈ ವಿಚಾರವಾಗಿ ಚರ್ಚೆ ನಡೆಸಲಿದೆ. ಇನ್ನು ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯ ಕೂಡ ನಡೆಯಲಿದ್ದು ಏಷ್ಯಾ ಕಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡದ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಏಷ್ಯಾ ಕಪ್ ಟೂರ್ನಿಯ ಫೈನಲ್ ಮುಕ್ತಾಯವಾಗಿ ನಾಲ್ಕು ದಿನಗಳ ನಂತರ ವಿಶ್ವಕಪ್ ತಂಡಕ್ಕೆ ಭಾರತ ತಂಡದ ಘೋಷಣೆಯಾಗಲಿದೆ.

ಸೆಪ್ಟೆಂಬರ್ 11ರಂದು ಏಷ್ಯಾ ಕಪ್ ಫೈನಲ್

ಸೆಪ್ಟೆಂಬರ್ 11ರಂದು ಏಷ್ಯಾ ಕಪ್ ಫೈನಲ್

ಸಾಕಷ್ಟು ಕುತೂಹಲ ಮೂಡಿಸಿರುವ ಏಷ್ಯಾ ಕಪ್ ಟೂರ್ನಿ ಆಗಸ್ಟ್ 27ರಂದು ಯುಎಇನಲ್ಲಿ ಆರಂಭವಾಗಲಿದ್ದು ಸೆಪ್ಟೆಂಬರ್ 11ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ತಮಡದ ಆಟಗಾರರ ಪ್ರದರ್ಶನ ಬಹಳಷ್ಟು ಪ್ರಮುಖವಾಗಿದ್ದು ಈ ಟೂರ್ನಿಯಲ್ಲಿ ಭಾಗವಹಿಸಿರುವ ಆಟಗಾರರ ಪೈಕಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಅಕ್ಟೋಬರ್ 23ರಂದು ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಆರಂಭವಾಗಲಿದೆ.

ತಂಡಗಳ ಘೋಷಣೆಗೆ ಐಸಿಸಿ ಡೆಡ್‌ಲೈನ್

ತಂಡಗಳ ಘೋಷಣೆಗೆ ಐಸಿಸಿ ಡೆಡ್‌ಲೈನ್

ಇನ್ನು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ತಮ್ಮ ತಂಡಗಳ ಆಟಗಾರರ ಬಳಗವನ್ನು ಘೋಷಣೆ ಮಾಡಲು ಐಸಿಸಿ ಅಂತಿಮ ಗಡುವನ್ನು ಈಗಾಗಲೇ ನಿಗದಿಪಡಿಸಿದೆ. ಸೆಪ್ಟೆಂಬರ್ 16ರಂದು ತಂಡಗಳ ಘೋಷಣೆಗೆ ಅಂತಿಮ ದಿನಾಂಕವಾಗಿದೆ. ಅದಕ್ಕೆ ಒಂದು ದಿನ ಮುಂಚಿತವಾಗಿ ತಂಡವನ್ನು ಘೋಷಣೆ ಮಾಡಲಿದೆ ಭಾರತ. ಪ್ರತಿ ತಂಡ ಗರಿಷ್ಠ 15 ಸದಸ್ಯರ ಸ್ಕ್ವಾಡ್ ಘೋಷಣೆಗೆ ಅವಕಾಶವಿದೆ. ಇನ್ನು ಸಹಾಯಕ ಸಿಬ್ಬಂದಿಗಳು ಸೇರಿ ಒಟ್ಟು 30 ಮಂದಿಯ ಪಡೆಯೊಂದಿಗೆ ವಿಶ್ವಕಪ್‌ಗೆ ತೆರಳಲು ಅವಕಾಶವಿದೆ.

ಏಷ್ಯಾ ಕಪ್‌ಗೆ ತೆರಳಿದ ಆಟಗಾರು ಬಹುತೇಕ ಫಿಕ್ಸ್

ಏಷ್ಯಾ ಕಪ್‌ಗೆ ತೆರಳಿದ ಆಟಗಾರು ಬಹುತೇಕ ಫಿಕ್ಸ್

ಇನ್ನು ಮುಂದಿನ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಏಷ್ಯಾ ಕಪ್‌ಗೆ ತೆರಳಿರುವ ಬಹುತೇಕ ಆಟಗಾರರು ಸ್ಥಾನ ಪಡೆಯುವ ಸಾಧ್ಯತೆಯಿದೆ. ಆದರೆ ಕೆಲವೊಂದಿ ಸಣ್ಣಪುಟ್ಟ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಇನ್ನು ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಗಾಯದ ಕಾರಣದಿಮದಾಗಿ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದು ಚೇತರಿಸಿಕೊಂಡು ಅವರು ಮತ್ತೆ ತಂಡದಲ್ಲಿ ಸ್ಥಾನವನ್ನು ಪಡೆಯಲಿದ್ದಾರೋ ಎಂಬುದು ಕುತೂಹಲ ಮೂಡಿಸಿದೆ.

Story first published: Saturday, August 20, 2022, 18:01 [IST]
Other articles published on Aug 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+