
ಟಿ20 ವಿಶ್ವಕಪ್‌ನಿಂದ ಚಾಹರ್ ಹೊರಗೆ
ಟೀಂ ಇಂಡಿಯಾ ಒಳ್ಳೆಯ ಸುದ್ದಿ ಮತ್ತು ಕೆಟ್ಟ ಸುದ್ದಿಗಳನ್ನು ಎದುರಿಸಬೇಕಾಗಿದೆ. ಮೊಹಮ್ಮದ್ ಶಮಿ ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ದೀಪಕ್ ಚಹಾರ್ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಈ ಗಡುವಿನೊಳಗೆ ಬಿಸಿಸಿಐ ಅಂತಿಮ ತಂಡವನ್ನು ಐಸಿಸಿಗೆ ಸಲ್ಲಿಸಬೇಕಿದೆ.
ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಕೂಡ ಚಹರ್ ಬದಲಿಗೆ ಆಸ್ಟ್ರೇಲಿಯಾಕ್ಕೆ ಮೊಹಮ್ಮದ್ ಶಮಿ ಜೊತೆ ಪ್ರಯಾಣಿಸಲಿದ್ದಾರೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅಕ್ಟೋಬರ್ 12 ರಂದು ರಾತ್ರಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಬ್ರಿಸ್ಬೇನ್‌ನಲ್ಲಿ ತಂಡದೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ.
ಟಿ20 ವಿಶ್ವಕಪ್ 2022ರ ನಂತರ ಭಾರತ ತಂಡದಲ್ಲಿ ದೊಡ್ಡ ಬದಲಾವಣೆ?; ರವಿಶಾಸ್ತ್ರಿ ಆಶ್ಚರ್ಯಕರ ಹೇಳಿಕೆ

ಭಾರತದಲ್ಲಿ ಉಳಿಯಲಿರುವ ಅಯ್ಯರ್, ಬಿಷ್ಣೋಯ್
ಮೀಸಲು ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಆಸ್ಟ್ರೇಲಿಯಾಕ್ಕೆ ತೆರಳುತ್ತಿಲ್ಲ. ಇಬ್ಬರೂ ಆಟಗಾರರಿಗೆ ಇಲ್ಲೇ ಉಳಿದುಕೊಳ್ಳುವಂತೆ ಬಿಸಿಸಿಐ ಸೂಚನೆ ನೀಡಿದೆ. ಭಾರತದಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಆಡಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಅವರು ಆಸ್ಟ್ರೇಲಿಯಾಕ್ಕೆ ತೆರಳಿ ಬೆಂಚ್ ಕಾಯುವ ಬದಲಿಗೆ ಇಲ್ಲೇ ಕ್ರಿಕೆಟ್ ಆಡಲು ಸೂಚನೆ ನೀಡಲಾಗಿದೆ.

ಕೊಹ್ಲಿ, ರೋಹಿತ್ ಶರ್ಮಾ ಅಭ್ಯಾಸ
ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಣಕ್ಕೆ ಇಳಿಯಲಿಲ್ಲ. ಆದರೆ, ಅವರು ನೆಟ್ಸ್‌ನಲ್ಲಿ ಮಾತ್ರ ತಮ್ಮ ಅಭ್ಯಾಸವನ್ನು ಮುಂದುವರೆಸಿದರು. ಎರಡನೇ ಅಭ್ಯಾಸ ಪಂದ್ಯದ ನಂತರ ಕೊಹ್ಲಿ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಬ್ಬರೂ WACA ಮೈದಾದನಲ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ಮಾಡಿದರು.
ಕೊಹ್ಲಿ ಮತ್ತೊಮ್ಮೆ ವಿಸ್ತೃತ ನೆಟ್ಸ್ ಸೆಷನ್ ಹೊಂದಿದ್ದರು. ಈ ವೇಳೆ ಅವರು ಚೆಂಡನ್ನು ಚುರುಕಾಗಿ ಟೈಮಿಂಗ್ ಮಾಡುತ್ತಿರುವುದು ಕಂಡು ಬಂತು. ಕೊಹ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತದ ಇತರ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡುವ ನಿರೀಕ್ಷೆಯಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು.

ವಿಶ್ವಕಪ್‌ಗೆ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.


Click it and Unblock the Notifications
