T20 World Cup: ಚಿಂತೆ ಹೆಚ್ಚಿಸಿದ ಟೀಮ್ ಇಂಡಿಯಾ ಆಟಗಾರರ ಗಾಯ
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದೇ ಬಿಂಬಿತವಾಗಿದ್ದ ಟೀಮ್ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು. 2024ರ ಟಿ20 ವಿಶ್ವಕಪ್‌ಗೆ ಈಗಾಗಲೇ ತಯಾರಿ ನಡೆದಿದ್ದು, ಟೀಮ್ ಇಂಡಿಯಾ ಅಂಗಳದಲ್ಲಿ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. 2024ರ ಟಿ20 ವಿಶ್ವಕಪ್‌ನಲ್ಲಿ ಕಪ್ ಗೆಲ್ಲುವ ಕನಸನ್ನು ಹೊಂದಿದೆ. ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆಲ್ಲುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ ವಿಶ್ವಕಪ್‌ಗೂ ಮುನ್ನ ಭಾರತ ತಂಡದ 4 ಸ್ಟಾರ್ ಆಟಗಾರರು ಗಾಯಗೊಂಡಿದ್ದು, ಗಾಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.
ಗಾಯಗೊಂಡಿರುವ ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಮತ್ತು ಹಾರ್ದಿಕ್ ಪಾಂಡ್ಯ ಸೇರಿದ್ದಾರೆ.

ಹಾರ್ದಿಕ್ ಪಾಂಡ್ಯ
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 2023ರ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದರು. ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಹಿಮ್ಮಡಿ ಗಾಯಕ್ಕೆ ಒಳಗಾಗಿದ್ದು, ಆ ಬಳಿಕ ಇದುವರೆಗೂ ಪುನರಾಗಮನ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಇವರ ಗಾಯದ ಬಗ್ಗೆ ಇನ್ನು ಯಾವುದೇ ಅಪ್‌ಡೇಟ್ ಹೊರ ಬಂದಿಲ್ಲ.

ಮೊಹಮ್ಮದ್ ಶಮಿ
ಭಾರತದ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್ 2023 ರಲ್ಲಿ, ಮೊಹಮ್ಮದ್ ಶಮಿ ಹೆಚ್ಚು ವಿಕೆಟ್ ಪಡೆದ ಬೌಲರ್. ಶಮಿ 7 ಪಂದ್ಯಗಳಲ್ಲಿ 10.71 ರ ಅತ್ಯುತ್ತಮ ಸರಾಸರಿಯಲ್ಲಿ 24 ವಿಕೆಟ್ ಪಡೆದಿದ್ದರು. ಶಮಿಗೆ ಪಾದದ ಗಾಯವಾಗಿದ್ದು, ಈ ಕಾರಣದಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಬಿಸಿಸಿಐ ಅವರು ಗಾಯದ ಕಾರಣ ಟೆಸ್ಟ್ ಸರಣಿಯ ಭಾಗವಾಗುವುದಿಲ್ಲ ಎಂದು ಅಪ್‌ಡೇಟ್ ನೀಡಿತ್ತು.

ಸೂರ್ಯ ಕುಮಾರ್ ಯಾದವ್
ಏಕದಿನ ವಿಶ್ವಕಪ್ 2023 ರ ನಂತರ, ಸೂರ್ಯ ಕುಮಾರ್ ಯಾದವ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ T20 ಸರಣಿಯಲ್ಲಿ ಭಾರತದ ನಾಯಕತ್ವವನ್ನು ವಹಿಸಿಕೊಂಡ ಪ್ಲೇಯರ್. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪಾದದ ಗಾಯಕ್ಕೆ ಒಳಗಾದರು.
ಸೂರ್ಯನಿಗೆ ಗ್ರೇಡ್-2 ಗಾಯವಾಗಿದೆ. ಆದರೆ, ಸೂರ್ಯ ಗಾಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಹೀಗಿರುವಾಗ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಸಮಸ್ಯೆಯಾಗಲಿದೆ. ಸೂರ್ಯ ಭಾರತ ಟಿ20 ತಂಡದ ಪ್ರಮುಖ ಆಟಗಾರ.
ರುತುರಾಜ್ ಗಾಯಕವಾಡ
ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ನಡೆದ ಏಕದಿನ ಸರಣಿಯಲ್ಲಿ ರುತುರಾಜ್ ಗಾಯಕ್ವಾಡ್ ಭಾರತ ತಂಡದ ಭಾಗವಾಗಿದ್ದರು. ಸರಣಿಯ ಎರಡನೇ ODIನಲ್ಲಿ ಫೀಲ್ಡಿಂಗ್ ಮಾಡುವಾಗ, ಅವರು ತಮ್ಮ ಬಲಗೈಯ ಉಂಗುರದ ಬೆರಳಿಗೆ ಗಾಯವಾಗಿತ್ತು. ನಂತರ ಗಾಯಕ್ವಾಡ್ ಅವರನ್ನು ಆಫ್ರಿಕಾ ಪ್ರವಾಸದ ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications