For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ನಲ್ಲಿ ಆಘಾತಕಾರಿ ಹಿನ್ನಡೆ: ಟೀಮ್ ಇಂಡಿಯಾ ಟಿ20 ತಂಡಕ್ಕೆ ಈ ಮೂವರು ಕಮ್‌ಬ್ಯಾಕ್ ಸಾಧ್ಯತೆ!

T20 world cup: These 3 cricketers can make comeback in Indian team after early Asia Cup exit

ಈ ಬಾರಿಯ ಏಷ್ಯಾ ಕಪ್ ಟೂರ್ನಿಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಭಾರತ ಭಾರೀ ನಿರಾಸೆ ಅನುಭವಿಸಿದೆ. ಅದದಭುತ ಆರಂಭದ ಹೊರತಾಗಿಯೂ ಸೂಪರ್ 4 ಹಂತದಲ್ಲಿ ಅನುಭವಿಸಿದ ಸತತ ಎರಡು ಸೋಲು ತಂಡದ ಹೋರಾಟವನ್ನು ಅಂತ್ಯಗೊಳಿಸಿತು. ಫೈನಲ್ ಹಂತಕ್ಕೇರುವಲ್ಲಿ ವಿಫಲವಾದ ಭಾರತ ಸೂಪರ್ 4 ಹಂತದಿಂದಲೇ ವಾಪಾಸಾಗಿದೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡದ ಕೆಲ ವಿಭಾಗಗಳ ಹುಳುಕುಗಳು ಸ್ಪಷ್ಟವಾಗಿರುವ ಕಾರಣ ಅವುಗಳನ್ನು ಸರಿಪಡಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಾಗಿದ್ದು ವಿಶ್ವಕಪ್‌ಗೆ ಕೆಲವೇ ದಿನಗಳಿರುವಾಗ ಅವದನ್ನು ಸರಿಪಡಿಸಿಕೊಳ್ಳುವ ಸವಾಲಿದೆ.

ಏಷ್ಯಾ ಕಪ್‌ನಲ್ಲಿ ಭಾರತದ ಪರವಾಗಿ ಕೆಲ ಆಟಗಾರರಿಂದ ಅದ್ಭುತ ಪ್ರದರ್ಶನ ಬಂದಿದ್ದು ತಂಡಕ್ಕೆ ಸಕಾರಾತ್ಮಕವಾಗಿದ್ದರೆ ಕೆಲ ಆಟಗಾರರ ಪ್ರದರ್ಶನ ಕಳವಳ ಮೂಡಿಸಿದೆ. ಚುಟುಕು ವಿಶ್ವಕಪ್‌ನಲ್ಲಿ ಭಾರತ ತಂಡದಿಂದ ನಿರೀಕ್ಷಿತ ಪ್ರದರ್ಶನ ಬರಬೇಕಾದರೆ ಆಯ್ಕೆ ಸಮಿತಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ತಂಡವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಕೆಲ ಆಟಗಾರರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಅಗತ್ಯವೂ ಕಂಡು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮುಂಬರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಚುಟುಕು ಸರಣಿ ಹಾಗೂ ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿರುವ ಮೂವರು ಆಟಗಾರರ ಬಗ್ಗೆ ಇಲ್ಲಿದೆ ವರದಿ.. ಮುಂದೆ ಓದಿ..

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಹಿನ್ನಡೆ ಅನುಭವಿಸಲು ಬೌಲಿಂಗ್ ವಿಭಾಗದ ವೈಫಲ್ಯವೂ ಕಾರಣ. ಅದರಲ್ಲೂ ಇಂಥಾ ಮಹತ್ವದ ಟೂರ್ನಿಗೆ ಕೇವಮ ಮೂವರು ಸ್ಪೆಶಲಿಸ್ಟ್ ವೇಗಿಗಳನ್ನು ಮಾತ್ರವೇ ಆಯ್ಕೆ ಮಾಡಿಲಾಗಿತ್ತು. ನಾಲ್ಕನೇ ವೇಗಿಯಾಗಿ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದರು. ಈ ಯೋಜನೆ ಟೂರ್ನಿಯಲ್ಲಿ ವೈಫಲ್ಯವನ್ನು ಕಂಡಿದೆ. ಜಸ್ಪ್ರಿತ್ ಬೂಮ್ರಾ ಹರ್ಷಲ್ ಪಟೇಲ್ ಅವರಂತಾ ಹಿರಿಯ ಆಟಗಾರರು ಹೊರಗಿದ್ದಾಗ ನಿರ್ಣಾಯಕ ಹಂತದಲ್ಲಿ ತಂಡಕ್ಕೆ ಅನುಭವಿ ವೇಗಿಗಳ ಕೊರತೆ ಬಹಳ ಕಾಡಿತು.

ಇಂಥಾ ಸಂದರ್ಭದಲ್ಲಿ ಮೊಹಮ್ಮದ್ ಶಮಿಯನ್ನು ತಂಡದಿಂದ ಹೊರಗಿಟ್ಟ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ಬಂದಿದೆ. ಸುದೀರ್ಘ ಕಾಲದಿಂದ ಎಲ್ಲಾ ಮಾದರಿಯಲ್ಲಿಯೂ ಭಾರತ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಮೊಹ್ಮದ್ ಶಮಿಯನ್ನು ತಂಡದಿಂದ ಹೊರಗಿಟ್ಟಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಅದರಲ್ಲೂ ಆಸ್ಟ್ರೇಲಿಯಾದ ವೇಗದ ಪಿಚ್‌ನಲ್ಲಿ ಮೊಹಮ್ಮದ್ ಶಮಿಯಂತಾ ಬೌಲರ್‌ಗಳ ಅನುಭವ ತಂಡಕ್ಕೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿರುವ ಕಾರಣ ಮುಂಬರುವ ವಿಶ್ವಕಪ್‌ಗೆ ಮೊಹಮ್ಮದ್ ಶಮಿ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ.

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

ಯುವ ಆಟಗಾರ ಸಂಜು ಸ್ಯಾಮ್ಸನ್ ಸುದೀರ್ಘ ಕಾಲದಿಂದ ತಂಡದಲ್ಲಿ ಸ್ಥಾನವನ್ನು ಪಡೆಯುವುದು ಹಾಗೂ ಹೊರಬೀಳುವುದು ನಡೆಯುತ್ತಲೇ ಇದೆ. ಬ್ಯಾಟಿಂಗ್‌ನಲ್ಲಿ ತನ್ನ ಸಾಮರ್ಥ್ಯವೇನು ಎನ್ನುವುದನ್ನು ಕೇರಳದ ಈ ಸ್ಪೋಟಕ ಆಟಗಾರ ಕೆಲ ಸಂದರ್ಭಗಳಲ್ಲಿ ತೋರಿಸಿದ್ದರೂ ಅಸ್ಥಿರ ಪ್ರದರ್ಶನದ ಕಾರಣದಿಂದಾಗಿ ತಂಡದಲ್ಲಿ ಸ್ಥಿರವಾಗಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಆದರೆ ಏಷ್ಯಾಕಪ್‌ನಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಖದಲ್ಲಿ ಕೆಲ ಸಮಸ್ಯೆಗಳು ಕಾಣಿಸಿಕೊಂಡಿರುವ ಕಾರಣ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವ ಸಾಧ್ಯತೆಯಿದೆ. ಯುವ ಆಟಗಾರ ರಿಷಭ್ ಪಂತ್‌ಗೆ ಸಾಕಷ್ಟು ಅವಕಾಶ ಗಳು ದೊರೆತಿದ್ದರು ಕೂಡ ತಂಡದಲ್ಲಿ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾದ ದೊಡ್ಡ ಮೈದಾನದಲ್ಲಿ ದೊಡ್ಡ ಹೊಡೆತಗಳನ್ನು ಸಾಮರ್ಥ್ಯ ಹೊಂದಿರುವ ಸಂಜು ಸ್ಯಾಮ್ಸನ್‌ಗೆ ಮತ್ತೆ ಅವಕಾಶ ದೊರೆಯುವ ಸಾಧ್ಯತೆಗಳು ಕಂಡುಬರುತ್ತಿದೆ.

Pakistanaದ ಬೌಲರ್ Naseem Shah ಜೊತೆ ರೋಮ್ಯಾಂಟಿಕ್ ವಿಡಿಯೋ ಶೇರ್ ಮಾಡಿದ Urvashi Rautela | *Cricket |OneIndia
ವಾಶಿಂಗ್ಟನ್ ಸುಂದರ್

ವಾಶಿಂಗ್ಟನ್ ಸುಂದರ್

ಇನ್ನು ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ ಆಲ್‌ರೌಂಡರ್ ವೀಂದ್ರ ಜಡೇಜಾ ಏಷ್ಯಾ ಕಪ್ ಟೂರ್ನಿಯ ಸಂದರ್ಭದಲ್ಲಿ ಗಾಯಗೊಂಡಿದ್ದು ವಿಶ್ವಕಪ್‌ನಿಂದ ಹೊರಬೀಳುವುದು ಖಚಿತವಾಗಿದೆ. ಹೀಗಾಗಿ ಈ ಸ್ಥಾನ ಈಗ ಖಾಲಿಯಿದೆ. ಏಷ್ಯಾ ಕಪ್‌ನಲ್ಲಿ ಅಕ್ಷರ್ ಪಟೇಲಾ ಅವರನ್ನು ಬದಲಿಯಾಗಿ ಸೇರ್ಪಡೆಗೊಳಿಸಿತ್ತಾದರೂ ಆಡುವ ಬಳಗದಲ್ಲಿ ಸ್ಥಾನವನ್ನು ನೀಡಿರಲಿಲ್ಲ. ವಾಶಿಂಗ್ಟನ್ ಸುಂದರ್ ಕೂಡ ರವೀಂದ್ ಜಡೇಜಾ ಅವರ ಮಾದರಿಯ ಆಟಗಾರನಾಗಿರುವ ಕಾರಣ ಸುಂದರ್‌ಗೆ ಮತ್ತೆ ಅವಕಾಶ ದೊರೆತರೆ ಅಚ್ಚರಿಯಿಲ್ಲ. ಪವರ್‌ಪ್ಲೇನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ದಾಳಿ ನಡೆಸುವ ಸಾಮರ್ಥ್ಯವಿರುವ ಸುಂದರ್ ಬ್ಯಾಟಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಹೀಗಾಗಿ ವಾಶಿಂಗ್ಟನ್ ಸುಂದರ್‌ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿರುವ ಮತ್ತೋರ್ವ ಆಟಗಾರನಾಗಿದ್ದಾರೆ.

Story first published: Saturday, September 10, 2022, 15:04 [IST]
Other articles published on Sep 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+