ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭರದ ಸಿದ್ಧತೆಗಳು ನಡೆದಿವೆ. ಈಗಾಗಲೇ ಎಲ್ಲ ತಂಡಗಳು ತಮ್ಮ ಆಡುವ ಬಳಗವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಟೀಮ್ ಇಂಡಿಯಾ ಸಹ ಈ ಪ್ರಯತ್ನದಲೇ ಇದೆ.
ಅಫ್ಘಾನಿಸ್ತಾನದ ವಿರುದ್ಧ ತವರಿನಲ್ಲಿ ಆಡುತ್ತಿರುವ ಟಿ20 ಸರಣಿ ಟೀಮ್ ಇಂಡಿಯಾ ಪಾಲಿಗೆ ಕೊನೆಯ ಅವಕಾಶವಾಗಿದೆ. ಎಲ್ಲ ವಿಭಾಗದಲ್ಲೂ ಟೀಮ್ ಇಂಡಿಯಾ ಉತ್ತಮ ಸಮತೋಲನವನ್ನು ಹೊಂದಿದ್ದು ಒಂದು ವಿಭಾಗ ಮಾತ್ರ ತಂಡದ ಚಿಂತೆಯನ್ನು ಹೆಚ್ಚಿಸುತ್ತಲೆ ಇದೆ.

ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದ ಸ್ಲಾಟ್ ಅಂದರೆ ಆರಂಭಿಕ ಆಟಗಾರನ್ನದಾಗಿದೆ. 2022ರಿಂದ ಇಲ್ಲಿಯವರೆಗೂ ಸತತ ಪ್ರಯತ್ನವನ್ನು ಮಾಡುತ್ತಾ ಬಂದರೂ ಯಾವೊಬ್ಬ ಆಟಗಾರ ಭರವಸೆ ಮೂಡಿಸಿಲ್ಲ. ಸಿಕ್ಕ ಅವಕಾಶದಲ್ಲಿ ಯಂಗ್ ಆಟಗಾರರು ನಿರಾಸೆ ಮೂಡಿಸಿದ್ದಾರೆ.
ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಯಾವ ಓಪನಿಂಗ್ ಕಾಂಬಿನೇಷನ್ ಜೊತೆ ಕಣಕ್ಕೆ ಇಳಿಯುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೂ ಹೊಸ ಆರಂಭಿಕ ಜೋಡಿ ಮೈದಾನಕ್ಕಿಳಿದಿತ್ತು. ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್ ತೆರೆಯಲಿದ್ದಾರೆ ಆದರೆ ಅವರ ಜೊತೆಗಾರ ಯಾರು ಎಂಬುದು ತಿಳಿದಿಲ್ಲ.
ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ 14 ತಿಂಗಳ ಬಳಿಕ ಟಿ20ಗೆ ಮರಳಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಬಿಗ್ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಅವರು ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿರನ್ ಔಟ್ ಆಗಿ ಶುನ್ಯ ಸುತ್ತಿದರು.

ಇದೀಗ ಎರಡನೇ ಪಂದ್ಯದಲ್ಲಿ ಈ ತಪ್ಪನ್ನು ಸರಿಪಡಿಸಿಕೊಂಡು ದೊಡ್ಡ ಇನಿಂಗ್ಸ್ ಕಟ್ಟುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಎರಡನೇ ಪಂದ್ಯದಲ್ಲಿ ಮತ್ತೊಬ್ಬ ಜೊತೆಗಾರನೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ನಡೆದಿತ್ತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತ ನಂತರ ನಾಯಕ ರೋಹಿತ್ ಶರ್ಮಾ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರಲಿಲ್ಲ. ಅವರು 2024 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ತಂಡಕ್ಕೆ ಮರಳಿದರು.
ಕಳೆದ ಎರಡು ವರ್ಷಗಳಲ್ಲಿ ಭಾರತ 16 ಆರಂಭಿಕ ಜೋಡಿಗಳನ್ನು ಕಣಕ್ಕಿಳಿಸಿದೆ. ಈ ವೇಳೆ ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಓಪನಿಂಗ್ ಮಾಡಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ ಕಳೆದ 2 ವರ್ಷಗಳಲ್ಲಿ 6 ವಿಭಿನ್ನ ಬ್ಯಾಟ್ಸ್‌ಮನ್‌ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಂಜು ಸ್ಯಾಮ್ಸನ್, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್, ಇಶಾನ್ ಕಿಶನ್ ಟಿ20 ಇನ್ನಿಂಗ್ಸ್ ಆರಂಭಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅವರ ಹೊಸ ಓಪನರ್ ಆಗಬಹುದು. ಆದರೆ, ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಜೊತೆ ಭಾರತದ ಇನ್ನಿಂಗ್ಸ್‌ನ್ನು ಯಾರು ಆರಂಭಿಸುತ್ತಾರೆ ಎಂಬುದರ ಕುರಿತು ಪ್ರಶ್ನೆಗಳು ಎದ್ದಿವೆ.