ಭಾರತ ಹಾಗೂ ಶ್ರೀಲಂಕದಲ್ಲಿ ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದೆ. ಈ ಟೂರ್ನಿಯಲ್ಲಿ ಈ ಬಾರಿ 20 ತಂಡಗಳು ಭಾಗವಹಿಸುತ್ತವೆ. ಈ ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ ಸಹ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಟೂರ್ನಿಯಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಭಾರತ ತವರಿನಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು.
ಟಿ20 ಕ್ರಿಕೆಟ್ ಅಂದರೆ ಬ್ಯಾಟರ್‌ಗಳ ಆರ್ಭಟ ಜೋರಾಗಿರುತ್ತದೆ. ಈ ಚುಟುಕು ಫಾರ್ಮೆಟ್‌ನಲ್ಲಿ ಬೌಲರ್‌ಗಳ ಹೆಡೆ ಮುರಿಕಟ್ಟಿ ಆರ್ಭಟಿಸಿದ್ದಾರೆ. ವಿಶ್ವಕಪ್‌ನಲ್ಲೂ ಬ್ಯಾಟರ್‌ಗಳು ತಮ್ಮ ಕಮಾಲ್ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ತಮ್ಮದೇ ಪಾತ್ರವನ್ನು ವಹಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳ ಬಗ್ಗೆ ವರದಿ ಇಲ್ಲಿದೆ.

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಹೆಗ್ಗಳಿಕೆ ವೆಸ್ಟ್ ಇಂಡೀಸ್ ತಂಡದ ದೈತ್ಯ ಕ್ರಿಸ್ ಗೇಲ್. ಇವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಹೆಸರುವಾಸಿ. ಇವರು ಚುಟುಕು ಫಾರ್ಮೆಟ್‌ನಲ್ಲಿ ಎದುರಾಳಿ ಬೌಲರ್‌ಗಳನ್ನು ಕಾಡುವ ಬ್ಯಾಟರ್. ಇವರು ಟಿ20 ವಿಶ್ವಕಪ್‌ನಲ್ಲಿ ಆಡಿದ 33 ಪಂದ್ಯಗಳಲ್ಲಿ 965 ರನ್ ಸಿಡಿಸಿದ್ದಾರೆ. ಇದರಲ್ಲಿ 63 ಸಿಕ್ಸರ್‌ಗಳು ಸೇರಿವೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರಿಗೂ ಸ್ಥಾನ. ಇವರು ಸಹ ಚುಟುಕು ಫಾರ್ಮೆಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಆಡಿದ 47 ಪಂದ್ಯಗಳಲ್ಲಿ 50 ಸಿಕ್ಸರ್ ಸಿಡಿಸಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ್‌ಗೂ ಈ ಪಟ್ಟಿಯಲ್ಲಿ ಸ್ಥಾನವಿದೆ. ಇವರು ಟಿ20 ವಿಶ್ವಕಪ್‌ನಲ್ಲಿ ಆಡಿದ 35 ಪಂದ್ಯಗಳಲ್ಲಿ 43 ಸಿಕ್ಸರ್ ಸಿಡಿಸಿದ್ದು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಜೋಸ್ ಬಟ್ಲರ್ ಈ ಬಾರಿಯೂ ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ಇವರು ಇನ್ನು ಹೆಚ್ಚು ಸಿಕ್ಸರ್ ಬಾರಿಸಿ ದಾಖಲೆಯನ್ನು ಬಲಗೊಳ್ಳಿಸಿಕೊಳ್ಳಬಹುದು.
ಟಿ20 ಕ್ರಿಕೆಟ್ ಇತಿಹಾಸದ ಖ್ಯಾತ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಸಹ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ್ದಾರೆ. ಇವರು ಆಡಿದ 41 ಪಂದ್ಯಗಳಲ್ಲಿ 40 ಮುಗಿಲೆತ್ತರದ ಸಿಕ್ಸರ್ ಸಿಡಿಸಿದ್ದಾರೆ.
ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಸಹ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರು 35 ಪಂದ್ಯಗಳಲ್ಲಿ 35 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಇವರು ಟಿ20 ಕ್ರಿಕೆಟ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ ಆಟಗಾರ. ಇವರು ಟಿ20 ವಿಶ್ವಕಪ್‌ನಲ್ಲಿ 1292 ರನ್ ಸಿಡಿಸಿ ಅಬ್ಬರಿಸಿದ್ದಾರೆ.
ಕ್ರಿಸ್ ಗೇಲ್, ವೆಸ್ಟ್ ಇಂಡೀಸ್, 63 ಸಿಕ್ಸರ್
ರೋಹಿತ್ ಶರ್ಮಾ, ಭಾರತ, 50 ಸಿಕ್ಸರ್
ಜೋಸ್ ಬಟ್ಲರ್, ಇಂಗ್ಲೆಂಡ್, 43 ಸಿಕ್ಸರ್
ಡೇವಿಡ್ ವಾರ್ನರ್, ಆಸ್ಟ್ರೇಲಿಯಾ, 40 ಸಿಕ್ಸರ್
ವಿರಾಟ್ ಕೊಹ್ಲಿ, ಭಾರತ, 35 ಸಿಕ್ಸರ್
ಯುವರಾಜ್ ಸಿಂಗ್, ಭಾರತ, 33 ಸಿಕ್ಸರ್
ಶೇನ್ ವ್ಯಾಟ್ಸನ್, ಆಸ್ಟ್ರೇಲಿಯಾ, 31 ಸಿಕ್ಸರ್
ಗ್ಲೆನ್ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯಾ, 30 ಸಿಕ್ಸರ್
ಎಬಿಡಿ ವಿಲಿಯರ್ಸ್, ದಕ್ಷಿಣ ಆಫ್ರಿಕಾ, 30 ಸಿಕ್ಸರ್
ರಹಮಾನುಲ್ಲಾ ಗುರ್ಬಾಜ್, ಅಫ್ಘಾನಿಸ್ತಾನ್, 28 ಸಿಕ್ಸರ್