T20 World Cup: ಯುಎಸ್‌ಗೆ ಭರ್ಜರಿ ಜಯ: ಮುಂದಿನ ಹಂತದ ಆಸೆ ಜೀವಂತ
ಚೆನ್ನೈ: ಭರವಸೆಯ ಬ್ಯಾಟರ್ ಸೈತೇಜ ಮುಕ್ಕಮಲ್ಲ ಅವರು ಬಾರಿಸಿದ ಭರ್ಜರಿ ಅರ್ಧಶತಕ ಹಾಗೂ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಯುಎಸ್‌ಎ ಟಿ20 ವಿಶ್ವಕಪ್‌ನ "ಎ" ಗುಂಪಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಮೂಲಕ ಯುಎಸ್‌ಎ ಸೂಪರ್ 8 ಹಂತಕ್ಕೆ ತಲುಪುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ.
ಯುಎಸ್‌ಎ ವಿರುದ್ಧ ಟಾಸ್ ಗೆದ್ದ ನೆದರ್‌ಲ್ಯಾಂಡ್ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಅಮೆರಿಕ ತಂಡದ ಆರಂಭ ಸಾಧರಣವಾಗಿತ್ತು. ಆರಂಭಿಕ ಆಟಗಾರ ಶಯಾನ್ ಜಹಾಂಗೀರ್ 20 ರನ್ ಬಾರಿಸಿ, ತಂಡದ ಮೊತ್ತ 27 ರನ್ ಆಗಿದ್ದಾಗ ಔಟ್ ಆದರು. ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಾಯಕ ಮೊನಾಂಕ್ ಪಟೇಲ್, ಸಾಯಿತೇಜ ಮುಕ್ಕಮಲ್ಲ ಅವರ ಮೇಲೆ ಬಿತ್ತು. ಈ ಜೋಡಿ ಮೊದಲ ಆರು ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 53 ರನ್ ಸೇರಿಸಿತು.

2ನೇ ವಿಕೆಟ್‌ಗೆ ಮೊನಾಂಕ್ ಪಟೇಲ್ ಮತ್ತು ಸಾಯಿತೇಜ ಮುಕ್ಕಮಲ್ಲ 37 ಎಸೆತಗಳಲ್ಲಿ 55 ರನ್ ಸಿಡಿಸಿತು. ಈ ಹಂತದಲ್ಲಿ ನಾಯಕ ಮೊನಾಂಕ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ಔಟ್ ಆದರು. ಕರ್ನಾಟಕ ಮೂಲದ ಸಂಜಯ್ ಕೃಷ್ಣ ಮೂರ್ತಿ ಸಹ ರನ್ ಕಲೆ ಹಾಕುವಲ್ಲಿ ವಿಫಲರಾದರು.
ಸಾಯಿತೇಜ ಆಧಾರ
ಶುಭಂ ರಂಜನೆ ಹಾಗೂ ಸಾಯಿತೇಜ ಮುಕ್ಕಮಲ್ಲ ಜೋಡಿ 4ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾಯಿತು. 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 79 ರನ್ ಬಾರಿಸಿದ್ದ ಸಾಯಿತೇಜ ಮುಕ್ಕಮಲ್ಲ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಶುಭಂ ರಂಜನೆ ಅಜೇಯ 48 ರನ್ ಸಿಡಿಸಿದರು. ಅಂತಿಮವಾಗಿ ಯುಎಸ್‌ಎ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 196 ರನ್ ಸೇರಿಸಿತು.
ರನ್ ಕಲೆ ಹಾಕಲು ಪರದಾಟ
ಗುರಿಯನ್ನು ಹಿಂಬಾಲಿಸಿದ ನೆದರ್‌ಲ್ಯಾಂಡ್ ತಂಡದ ಬ್ಯಾಟರ್‌ಗಳು ನೆಲಕಚ್ಚಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಇವರು ಯುಎಸ್‌ಎ ತಂಡದ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ಎಡವಿತು. ನೆದರ್‌ಲ್ಯಾಂಡ್ ತಂಡದ ಪರ ಎರಡನೇ ವಿಕೆಟ್‌ಗೆ ಮ್ಯಾಕ್ಸ್ ಒ'ಡೌಡ್ (13) ಹಾಗೂ ಬಾಸ್ ಡಿ ಲೀಡೆ (23) ಜೋಡಿ 32 ರನ್‌ಗಳ ಜೊತೆಯಾಟ ನೀಡಿದ್ದು ಬಿಟ್ಟರೆ ಉಳಿದ ಯಾವ ಜೋಡೆ ಹೆಚ್ಚು ಹೊತ್ತು ಮೈದಾನದಲ್ಲಿ ಕಳೆಯಲಿಲ್ಲ. ಉಳಿದಂತೆ ಸ್ಕಾಟ್ ಎಡ್ವರ್ಡ್ಸ್ ಹಾಗೂ ರೋಲೋಫ್ ವ್ಯಾನ್ ಡೆರ್ ಮೆರ್ವೆ ಮಾತ್ರ ಎರಡಂಕಿ ಮೊತ್ತ ದಾಟಿದರು. ಅಂತಿಮವಾಗಿ ನೆದರ್‌ಲ್ಯಾಂಡ್ 15.5 ಓವರ್‌ಗಳಲ್ಲಿ 103 ರನ್ ಸೇರಿಸಿತು.
ಯುಎಸ್‌ಎ ತಂಡದ ಪರ ಹರ್ಮೀತ್ ಸಿಂಗ್ 4, ಶಾಡ್ಲಿ ವ್ಯಾನ್ ಶಾಲ್ಕ್ವಿಕ್ 3 ವಿಕೆಟ್ ಉರುಳಿಸಿದರು.
ಯುಎಇಗೆ 5 ವಿಕೆಟ್ ಜಯ
ಟಿ20 ವಿಶ್ವಕಪ್‌ನ "ಡಿ" ಗುಂಪಿನ ಪಂದ್ಯದಲ್ಲಿ ಕೇನಡಾ ತಂಡವನ್ನು 2 ವಿಕೆಟ್‌ಗಳಿಂದ ಮಣಿಸಿದ ಯುಎಇ ಅಬ್ಬರಿಸಿದೆ. ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡದ ಪರ ಹರ್ಷ್ ಥಾಕರ್ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾದರು. ಇವರು 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 50 ರನ್ ಸಿಡಿಸಿದರು. ನವನೀತ್ ಧಲಿವಾಲ್ 34, ಶ್ರೇಯಸ್ ಮೊವ್ವಾ 21 ರನ್ ಬಾರಿಸಿದರು. ಅಂತಿಮವಾಗಿ ಕೇನಡಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 150 ರನ್ ಸೇರಿಸಿತು. ಯುಎಇ ತಂಡದ ಪರ ಜುನೈದ್ ಸಿದ್ದಿಕ್ 5 ವಿಕೆಟ್ ಉರುಳಿಸಿದರು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಯುಎಇ ತಂಡದ ಆರ್ಯನ್ಶ್ ಶರ್ಮಾ (74) ಹಾಗೂ ಸೊಹೈಬ್ ಖಾನ್ (51) ಅರ್ಧಶತಕ ಬಾರಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಯುಎಇ ವಿರುದ್ಧ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 151 ರನ್ ಸೇರಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications