ಆಗಿದ್ದು ಆಗಿ ಹೋಯ್ತು!: ಮತ್ತೊಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಬಳಿಕ ಕೋಹ್ಲಿ ಹೇಳಿದ್ದಿಷ್ಟು!

ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಐದು ರನ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ. ಮಳೆಯಿಂದ ಅಡ್ಡಯುಂಟಾದ ಪಂದ್ಯದಲ್ಲಿ ಭಾರತ ತಂಡ ಅಂತಿಮ ಓವರ್‌ನಲ್ಲಿ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶಸಿದ ಭಾರತ ತಂಡ ಬೌಲಿಂಗ್‌ನಲ್ಲಿ ಒಂದು ಹಂತದಲಕ್ಲಿ ಎಡವಿದರೂ ಬಳಿಕ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದು ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದೆ.
ಇನ್ನು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ಮುಂದುವರಿದಿದೆ. ಈ ಮಹತ್ವದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 44 ಎಸೆತಗಳಲ್ಲಿ ಕೊಹ್ಲಿ ಅಜೇಯ 64 ರನ್‌ಗಳನ್ನು ಸಿಡಿಸಿದ್ದು ತಂಡ ದೊಡ್ಡ ಮೊತ್ತದ ಗುರಿ ನಿಗದಿಪಡಿಸಿಲು ಕಾರಣವಾದರು. ಈ ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಮೂರನೇ ಅರ್ಧ ಶತಕವನ್ನು ವಿರಾಟ್ ಕೊಹ್ಲಿ ಗಳಿಸಿದ್ದಾರೆ. ಈ ಪ್ರದರ್ಶನದ ಬಳಿಕ ಕೊಹ್ಲಿ ಆತನಾಡಿದ್ದು ತಮ್ಮ ಪ್ರದರ್ಶನ ತೃಪ್ತಿ ನೀಡಿದೆ ಎಂದಿದ್ದಾರೆ.

"ಹರ್ಷದ ವಾತಾವರಣದಲ್ಲಿದ್ದೇನೆ"
ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಈ ಪಂದ್ಯ ಅತ್ಯಂತ ಪೈಪೋಟಿಯಿಂದ ಕೂಡಿತ್ತು. ಹಾಗಿದ್ದರೂ ತಾನೀಗ ಬಹಳ ಹರ್ಷದ ವಾತಾವರಣದಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ ವಿರಾಟ್ ಕೊಹ್ಲಿ. "ಇದು ಅತ್ಯಂತ ಪೈಪೋಟಿಯ ಪಂದ್ಯವಾಗಿತ್ತು. ಆದರೆ ನಾವು ಅಂದುಕೊಂಡಷ್ಟು ಪೈಪೋಟಿಯನ್ನು ಈ ಪಂದ್ಯ ಪಡೆದುಕೊಳ್ಳಲಿಲ್ಲ. ಬ್ಯಾಟ್‌ನಲ್ಲಿ ಮತ್ತೊಂದು ಅದ್ಭುತವಾದ ದಿನ ಎಂದು ಭಾವಿಸುತ್ತೇನೆ" ಎಂದಿದ್ದಾರೆ

ಆಗಿದ್ದು ಆಗಿ ಹೋಯಿತು..
"ನನ್ನ ಆಟವನ್ನು ನೀಡಲು ನಾನು ಪ್ರಯತ್ನಿಸಿದೆ. ಅಂಗಳಕ್ಕಿಳಿದಾಗ ಸಾಕಷ್ಟು ಒತ್ತಡವಿತ್ತು. ಚೆಂಡನ್ನು ಚೆನ್ನಾಗಿ ನೋಡಿಕೊಂಡಿದ್ದೆ. ಕಳೆದಿದ್ದು ಆಗಿ ಹೋಯಿತು. ಈಗ ನಾನು ತುಂಬಾ ಸಂತೋಷದ ವಾತಾವರಣದಲ್ಲಿದ್ದೇನೆ. ನಾನು ಯಾವುದರ ಜೊತೆಗೂ ಹೋಲಿಸಿಕೊಳ್ಳಲು ಬಯಸುವುದಿಲ್ಲ" ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ಬಳಿಕ ಹೇಳಿದ್ದಾರೆ.

ಅಡಿಲೇಡ್‌ನಲ್ಲಿ ಆಡುವುದೆಂದರೆ ತವರಿನಲ್ಲಿ ಆಡಿದ ಅನುಭವ
ಇನ್ನು ಅಡಿಲೇಡ್ ಅಂಗಳದಲ್ಲಿ ಅದ್ಭುತವಾದ ದಾಖಲೆಯನ್ನು ಹೊಂದಿರುವ ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಆಡುವುದು ಯಾವಾಗಲೂ ಹರ್ಷವನ್ನುಂಟು ಮಾಡುತ್ತದೆ ಎಂದಿದ್ದಾರೆ. "ಈ ಮೈದಾನದಲ್ಲಿ ಆಡುವುದನ್ನು ನಾನು ಯಾವಾಗಲೂ ಇಷ್ಟ ಪಡುತ್ತೇನೆ. ಮೈದಾನದ ಹಿಂದಿನ ನೆಟ್ಸ್‌ನಿಂದ ಹಿಡಿದು ಮೈದಾನಕ್ಕೆ ಇಳಿಯುವರಿಗೂ ನನಗೆ ಈ ಮೈದಾನ ತವರಿನ ಅನುಭವ ನೀಡುತ್ತದೆ. ಎಂಸಿಜಿಯ ಆ ಆಟ ಬಹಳ ವಿಶೇಷವಾಗಿದ್ದು. ಆದರೆ ನಾನು ಇಲ್ಲಿಗೆ ಆಗಮಿಸಿದಾಗ ಇಲ್ಲಿ ಆಡುವುದಕ್ಕಾಗಿಯೇ ಆಗಮಿಸಿದ್ದೇನೆ ಎಂಬ ಭಾವನೆ ಮೂಡುತ್ತದೆ. ಇಲ್ಲಿ ಬ್ಯಾಟಿಂಗ್ ನಡೆಸುವುದನ್ನು ನಾನು ಬಹಳ ಆನಂದಿಸುತ್ತೇನೆ" ಎಂದಿದ್ದಾರೆ ವಿರಾಟ್ ಕೊಹ್ಲಿ.

ರೋಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ
ಇನ್ನು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿತು. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಅರ್ಧ ಶತಕ ಹಾಗೂ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ 30 ರನ್‌ಗಳ ಕೊಡುಗೆಯಿಂದಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 184 ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಅತ್ಯಂತ ಸ್ಪೋಟಕ ಆರಂಭವನ್ನು ಪಡೆಯಿತು. ಲಿಟನ್ ದಾಸ್ ಕೇವಲ 27 ಎಸೆತಗಳಲ್ಲಿ 60 ರನ್ ಬಾರಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಪಂದ್ಯವನ್ನು 16ಓವರ್‌ಗಳಿಗೆ ಇಳಿಸಿದ್ದು ಡಕ್ವರ್ತ್ ಲೂಯೀಸ್ ನಿಯಮದ ಅನ್ವಯ ಬಾಂಗ್ಲಾದೇಶಕ್ಕೆ 150 ರನ್‌ಗಳನ್ನು ಗಳಿಸುವ ಗುರಿ ನಿಗದಿಪಡಿಸಲಾಯಿತು. ಆದರೆ ಮಳೆ ನಿಂತ ಬಳಿಕ ಪಂದ್ಯ ಪುನಾರಂಭವಾದ ಬಳಿಕ ಭಾರತ ಪಂದ್ಯದಲ್ಲಿ ಹಿಡತ ಸಾಧಿಸಲು ಯಶಸ್ವಿಯಾಯಿತು. ಅಂತಿಮವಾಗಿ ಭಾರತ ತಂಡ 5 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications